ಕೂಡಿಗೆ, ಮಾ. ೨೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಎಸ್.ಎಲ್.ಎನ್. ಪ್ರೆöÊವೇಟ್ ಲಿಮಿಟೆಡ್ ವತಿಯಿಂದ ಸುಂದರನಗರ, ಬಸವನತ್ತೂರು, ಚಿಕ್ಕತ್ತೂರು, ದೊಡ್ಡತ್ತೂರು, ಹಾರಂಗಿ, ಅತ್ತೂರು, ಯಡವನಾಡು, ಹುದುಗೂರು ಇನ್ನಿತರ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಅಗತ್ಯತೆಯನ್ನು ಮನಗಂಡು ಚಿಕ್ಕತ್ತೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೂಮಿಪೂಜೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೆರವೇರಿಸಿದರು.
ಈ ಸಂದರ್ಭ ಸದಸ್ಯರಾದ ಪಾರ್ವತಮ್ಮ ರಾಮೆಗೌಡ, ಖತೀಜ, ದಿನೇಶ್, ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ಎಸ್. ಗಣೇಶ್, ಕಾರ್ಯದರ್ಶಿ ರಾಮೇಗೌಡ ಎನ್., ಗ್ರಾಮದ ಪ್ರಮುಖವಾದ ಗುಜೇಂದ್ರ, ಕುಮಾರ್ ಕೆ.ಜೆ., ಶಿವಾನಂದ ರೈ, ಆನಂದ, ಮಂಜುಳಾ, ಕುಮಾರಸ್ವಾಮಿ, ಮಹಿಳಾ ಸಂಘದ ಸದಸ್ಯರುಗಳು ಹಾಗೂ ಶ್ರೀ ವಿನಾಯಕ ಯುವಕ ಸಂಘ ಅಧ್ಯಕ್ಷ ಸಿ.ಸಿ. ಸ್ವಾಮಿ, ಸದಸ್ಯರುಗಳಾದ ತೀರ್ಥಾನಂದ, ಅಭಿಷೇಕ್, ಶ್ರೀನಿವಾಸ್ ಸಿ.ಎ., ಉಮೇಶ್ ಹಾಗೂ ಎಸ್.ಎಲ್.ಎನ್. ಲೆವಿಸ್ಟಾ ವ್ಯವಸ್ಥಾಪಕ ಸೋಮಯ್ಯ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.