ವೀರಾಜಪೇಟೆ, ಮಾ. ೨೧: ಅರಣ್ಯ ಇಲ್ಲವಾದರೆ, ಪ್ರಕೃತಿಯ ರಕ್ಷಣೆ ಆಗದಿದ್ದರೆ ಮನುಕುಲದ ನಾಶ ಖಚಿತವೆಂದು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ವಿಭಾಗ ಅರಣ್ಯ ಇಲಾಖೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮಾಕುಟ್ಟ ಅರಣ್ಯ ವಿಭಾಗದ ವಾಟೆಕೊಲ್ಲಿ ಅರಣ್ಯ ಪ್ರದೇಶದಲ್ಲಿ ಏರ್ಪಡಿಸಲಾಗಿದ್ದ ಅಂತರರಾಷ್ಟಿçÃಯ ಅರಣ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಸೈನಿಕರು ಇಲ್ಲವಾದಲ್ಲಿ ದೇಶ ಉಳಿಯಲು ಸಾಧ್ಯವಿಲ್ಲ. ಪೊಲೀಸರು ಇಲ್ಲವಾದಲ್ಲಿ ಸಮಾಜದಲ್ಲಿ ಕುಟುಂಬ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಹಾಗೆಯೇ ಮನುಕುಲಕ್ಕೆ ಅವಶ್ಯವಾಗಿರುವ ಅರಣ್ಯ, ಪ್ರಕೃತಿ ಇಲ್ಲವಾದಲ್ಲಿ ಮನುಕುಲದ ನಾಶ ಖಂಡಿತ. ಅಂತಹ ಅರಣ್ಯ ಹಾಗೂ ಪ್ರಕೃತಿಯ ರಕ್ಷಣೆ ಮಾಡುವಂತಹ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅರಣ್ಯ ಇಲಾಖೆಯವರ ಕಾರ್ಯ ಶ್ಲಾಘನೀಯವಾದುದು. ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಕೂಡ ಪ್ರಕೃತಿಯ ಕಾವಲುಗಾರರಾಗಿ, ಪ್ರಕೃತಿಯ ಸೇವಕರಾಗಿ ಕೆಲಸಮಾಡುವ ಪ್ರೇರಣೆಯೊಂದಿಗೆ ಮುಂದೆ ಬರುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಣೆ ಮಾಡುವುದೇ ಒಂದು ದೊಡ್ಡ ಸವಾಲಾಗಿದೆ. ಇಲ್ಲಿ ಹೆಚ್ಚಿನ ಸಮಸ್ಯೆಯಿದೆ. ಅರಣ್ಯ ಸಂರಕ್ಷಣೆಯೊAದಿಗೆ ಮಾನವ - ವನ್ಯಜೀವಿಗಳ ಸಂಘರ್ಷವನ್ನು ಎದುರಿಸಬೇಕಾಗದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ವನ್ಯಜೀವಿ ಮಂಡಳಿ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, ಬಗೆಹರಿಯುವ ವಿಶ್ವಾಸವಿದೆ ಎಂದರು.
ಕೊಡಗು ಜಿಲ್ಲೆ ನೆರೆಯ ಕೇರಳ ರಾಜ್ಯಕ್ಕೆ ಹೊಂದಿಕೊAಡಿದ್ದು, ಗಡಿಭಾಗದಲ್ಲಿ ಕೇರಳ ರಾಜ್ಯದಿಂದ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಕೊಡಗು ಕೂಡ ದೇವರನಾಡಿನೊಂದಿಗೆ ಪ್ರಕೃತಿಯ ನೆಲೆವೀಡು ಎಂಬ ಹೆಸರು ಗಳಿಸಿದೆ. ಅಲ್ಲಿನ ಸ್ಥಳೀಯ ಆಡಳಿತ ಈ ಬಗ್ಗೆ ಗಮನ ಹರಿಸಿ, ಪ್ರಕೃತಿ ನಾಶವಾಗದಂತೆ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದರು.
ಭಾರತದಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಡ್, ಅರುಣಾಚಲ ಪ್ರದೇಶ, ಕರ್ನಾಟಕ ಸಹ ಒಂದಾಗಿದೆ. ಕರ್ನಾಟಕ ಅರಣ್ಯವು ೪೩.೩೪೮ ಚದರ ಕಿ.ಮೀ. ಭೌಗೋಳಿಕವಾಗಿ ಶೇ. ೧೨.೩ ಕಾಡಾಗಿದೆ, ಕೊಡಗು ಜಿಲ್ಲೆಯಲ್ಲಿ ೨೦,೨೦೦೦ ಹೆಕ್ಟೇರ್ ಶೇಕಡ ೪೯ ರಷ್ಟು ಕಾಡಾಗಿದ್ದು ಮೂರು ವನ್ಯಜೀವಿ ಪ್ರದೇಶವಾಗಿದೆ. ತಲಕಾವೇರಿ, ಬ್ರಹ್ಮಗಿರಿ, ಪುಷ್ಪಗಿರಿ, ನಾಗರಹೊಳೆ ಹುಲಿ ಸಂರಕ್ಷಣೆ ಪ್ರದೇಶವಾಗಿದೆ. ಅರಣ್ಯಗಳ ರಕ್ಷಣೆ ಆಗದಿದ್ದರೆ ವಾತಾವರಣ ಬದಲಾಗುತ್ತದೆ, ನೀರಿನ ಅಭಾವ ಕಂಡುಬರುತ್ತದೆ. ರೋಗ - ರುಜಿನಗಳು ಹೆಚ್ಚಾಗುತ್ತದೆ. ವನ್ಯಜೀವಿ ಸಂಘರ್ಷಣೆಯ ಬಗ್ಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಪೊನ್ನಣ್ಣ ಅವರು ಹೆಚ್ಚಿನ ಪ್ರಮಾಣದಲ್ಲಿ ಸ್ಪಂದಿಸುತಿದ್ದಾರೆ ಎಂದು ತಿಳಿಸಿದರು.
ವಿ.ಪಿ. ಕಾರ್ಯಪ್ಪ ಅರಣ್ಯ ದಿನದ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ‘ಅರಣ್ಯ ಮತ್ತು ಆಹಾರ’ ಎಂಬ ವಿಚಾರದ ಬಗ್ಗೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಕೆ.ಎಂ ನಾಣಯ್ಯ ಉಪನ್ಯಾಸ ನೀಡಿದರು.
ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕೆ.ಎ. ನೆಹರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾದೇಶಿಕ ವಿಭಾಗ ಅಧಿಕಾರಿ ಜಗನ್ನಾಥ್, ಅರಣ್ಯ ಇಲಾಖೆಯ ಮಾಕುಟ್ಟ ವನ್ಯಜೀವಿ ವಿಭಾಗದ ಅಧಿಕಾರಿ ಸಂತೋಷ್ ಹೂಗಾರ್, ಎಸಿಎಫ್ ಗೋಪಾಲ್, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮ ನಂತರ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಯಿತು.