ವೀರಾಜಪೇಟೆ, ಮಾ. ೨೧: ಕೊಡವ ಹಾಕಿ ಅಕಾಡೆಮಿ, ಹಾಕಿ ಕರ್ನಾಟಕ ಹಾಗೂ ಕಾವೇರಿ ಪದವಿ ಕಾಲೇಜು, ವೀರಾಜಪೇಟೆ ಇವರ ಸಹಯೋಗದಲ್ಲಿ ಕಾವೇರಿ ಕಾಲೇಜಿನ ಕೌಸ್ತುಭ ಸಭಾ ಭವನದಲ್ಲಿ ನಡೆದ ಹಾಕಿ ತೀರ್ಪುಗಾರರ ಕಾರ್ಯಾಗಾರವನ್ನು ಕೊಡವ ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ರಘುಪ್ರಸಾದ್ ಹಾಗೂ ರೋಹಿಣಿ ಬೋಪಣ್ಣರಂತಹ ಅಂತರರಾಷ್ಟಿçÃಯ ತೀರ್ಪುಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಮೂರು ಒಲಂಪಿಕ್ಸ್ಗಳನ್ನು ಆಡಿಸಿದ ಸಾಧನೆಯನ್ನು ಮಾಡಿದಂತಹ ರಘುಪ್ರಸಾದ್‌ರಂತಹ ಅಂತರರಾಷ್ಟಿçÃಯ ತೀರ್ಪುಗಾರರನ್ನು ಕರೆಸಿರುವಂಥದ್ದು ಆಯೋಜಕರ ಸಾಧನೆಯಾಗಿದ್ದು ಕಾರ್ಯಾಗಾರದಲ್ಲಿ ಭಾಗವಹಿಸುವ ಸರ್ವರು ಹೆಚ್ಚಿನ ಪ್ರಮಾಣದಲ್ಲಿ ಹಾಕಿಯ ತೀರ್ಪುಗಾರಿಕೆಗೆ ಸಂಬAಧಿಸಿದ ವಿಚಾರಗಳನ್ನು ತಿಳಿದುಕೊಂಡು ತಮ್ಮ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟçಮಟ್ಟದಲ್ಲಿ ನಡೆಯುವಂತಹ ಹಾಕಿ ಪಂದ್ಯಾಟಗಳ ತೀರ್ಪುಗಾರರಾಗಿ ನಿಯೋಜನೆಗೊಳ್ಳುವುದರ ಮೂಲಕ ನಾಡಿಗೆ ಕೀರ್ತಿಯನ್ನು ತರಬೇಕೆಂದು ಆಶಿಸಿದರು.
ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕಿ ಕಂಬೀರAಡ ರಾಕಿ ಪೂವಣ್ಣ, ಈ ಕಾರ್ಯಾಗಾರವು ಪ್ರಮುಖವಾಗಿ ಕೊಡಗಿನ ಯುವ ಆಟಗಾರರಿಗೆ ಹಾಗೂ ಯುವ ತೀರ್ಪಗಾರರಿಗಾಗಿ ಆಯೋಜಿಸಲಾಗಿದೆ. ಕೆಲವರು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ ಸರಿಯಾದ ವೇದಿಕೆ ಸಿಗದೆ ದೂರ ಉಳಿಯುತ್ತಿದ್ದಾರೆ. ಅಂಥವರು ತೀರ್ಪುಗಾರರಾಗಿ ಮುಂದುವರಿಯಬೇಕು ಹಾಗೂ ಕೊಡಗಿನಲ್ಲಿ ಹೆಚ್ಚು ಹಾಕಿ ಕ್ರೀಡೆಯನ್ನು ಆಡುವುದರಿಂದ ಇಲ್ಲಿನ ಯುವ ಜನತೆ ತೀರ್ಪುಗಾರರಾದರೆ ಕೊಡವ ಕುಟುಂಬಗಳ ಹಾಕಿ ಪಂದ್ಯಾಟ ಹಾಗೂ ಇನ್ನಿತರ ಹಾಕಿ ಪಂದ್ಯಾಟಗಳನ್ನು ನಡೆಸಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು ಎರಡು ದಿನಗಳವರೆಗೆ ನಡೆಯುವ ಈ ಕಾರ್ಯಾಗಾರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್. ಸಲ್ದಾನ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ಕ್ರೀಡೆಗಳು ನಡೆಯುತ್ತಿರುವಂತದ್ದು ಸಾಮಾನ್ಯವಾಗಿ ಬಿಟ್ಟಿದೆ. ಒಂದು ಕ್ರೀಡೆ ಯಶಸ್ವಿಯಾಗಬೇಕಾದರೆ ಆಯೋಜಕರ ಶ್ರಮ ಎಷ್ಟಿರುತ್ತದೆಯೋ ಅದೇ ರೀತಿಯಾಗಿ ತೀರ್ಪುಗಾರರ ಪಕ್ಷಪಾತ ರಹಿತವಾದಂತಹ ತೀರ್ಪುಗಳು ಅತಿ ಮುಖ್ಯವಾಗಿರುತ್ತದೆ. ಅದರಲ್ಲೂ ಹಾಕಿಯಂತಹ ಕ್ರೀಡೆಗಳಲ್ಲಿ ತೀರ್ಪುಗಾರರು ಹೆಚ್ಚಿನ ಸೂಕ್ಷ÷್ಮತೆಯಿಂದ ಪ್ರತಿ ಹಂತವನ್ನು ಗಮನಿಸಿ ತೀರ್ಪು ನೀಡಬೇಕಾಗುತ್ತದೆ. ಇಂತಹ ಕಾರ್ಯಾಗಾರಗಳು ನಡೆದಂತಹ ಸಂದರ್ಭದಲ್ಲಿ ಕ್ರೀಡೆಗಳು ಕೂಡ ಯಾವುದೇ ಸಮಸ್ಯೆಯಾಗದೆ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವಕೀಲರು ಹಾಗೂ ಹಾಕಿ ಅಕಾಡೆಮಿ ಉಪಾಧ್ಯಕ್ಷ ಮಾದಂಡ ಪೂವಯ್ಯ, ಬಡಕಡ ಡೀನಾ ಪೂವಯ್ಯ, ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ, ಅಂತರರಾಷ್ಟಿçÃಯ ಹಾಕಿ ತೀರ್ಪುಗಾರ ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕಾವೇರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಮ್ಮಯ್ಯ, ಕೊಡಗು ಹಾಕಿ ಅಕಾಡೆಮಿಯ ಸದಸ್ಯರು ಹಾಜರಿದ್ದರು.