ಮಡಿಕೇರಿ, ಮಾ. ೨೧: ಕೊಡಗು ಜಿಲ್ಲೆಯಲ್ಲಿ ನೂತನವಾಗಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯ ವಿಚಾರವಾಗಿ ವರದಿಗಳು ಸರಕಾರಕ್ಕೆ ಸಲ್ಲಿಕೆಯಾಗಿದ್ದು, ವಿದ್ಯಾರ್ಥಿಗಳು ನೀಡುವ ಒಮ್ಮತದ ಅಭಿಪ್ರಾಯದಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟವಾಗಿ ತಿಳಿಸಿದ್ದಾರೆ.

ಭಾಗಮಂಡಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವಿದ್ಯಾರ್ಥಿಗಳು ಪ್ರತಿಷ್ಠಿತ ಹಾಗೂ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಮೈಸೂರು ವಿಶ್ವವಿದ್ಯಾನಿಲಯದ ಸರ್ಟಿಫಿಕೇಟ್ ಬೇಕೆಂದು ಬಯಸುತ್ತಿದ್ದಾರೆ. ಕೊಡಗಿನಲ್ಲಿ ೨೭-೨೮ ಕಾಲೇಜು ಸೇರಿ ಒಂದು ವಿವಿಯಾಗಿದ್ದು, ಇದಕ್ಕಾಗಿ ಕೇವಲ ರೂ. ೨ ಕೋಟಿ ಹಣ ಈ ಹಿಂದಿನ ಸರಕಾರ ಮೀಸಲಿಟ್ಟಿದೆ. ಅದು ಕೂಡ ಇನ್ನೂ ಬಿಡುಗಡೆಯಾಗಿಲ್ಲ. ವಿಶ್ವವಿದ್ಯಾನಿಲಯಗಳಿಗೆ ಬೇರೆ ಲೆಕ್ಕಾಚಾರವೇ ಇದೆ. ಈ ನಿಟ್ಟಿನಲ್ಲಿ ಸರಕಾರದ ಮುಂದೆ ಕೆಲ ಪ್ರಸ್ತಾವನೆಗಳಿವೆ. ಹಲವು ವಿದ್ಯಾರ್ಥಿಗಳು ಈ ಹಿಂದೆಯಿದ್ದ ಮಂಗಳೂರು ವಿವಿ ಬೇಕೆಂಬ ಒಲವು ಹೊಂದಿರುವುದು ಸರಕಾರದ ಗಮನಕ್ಕೆ ಬಂದಿದೆ. ಬೋಧಕ ಹಾಗೂ ಸಿಬ್ಬಂದಿ ವೃಂದದವರು ಕೊಡಗು ವಿವಿಯಲ್ಲಿ ಕೆಲಸ ಮಾಡಲು ಕೆಲ ಕಾರಣದಿಂದ ಒಪ್ಪುತ್ತಿಲ್ಲ ಎಂದು ಹೇಳಿಕೆ ನೀಡಿದರು. ಯಾವುದೇ ಕಾರಣಕ್ಕೂ ವಿವಿಯನ್ನು ಮುಚ್ಚಲಾಗುವುದಿಲ್ಲ. ಕೇವಲ ವಿಲೀನ ಮಾಡಬೇಕಾಗುತ್ತದೆ. ಇಲ್ಲಿನ ಇಬ್ಬರು ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಶಾಸಕರು ಕೊಡಗು ವಿವಿ ಉಳಿಸಬೇಕೆಂದು ಮನವಿ ಮಾಡಿದ್ದಾರೆ. ಇದು ಸರಕಾರದ ಪ್ರತಿಷ್ಠೆ ಪ್ರಶ್ನೆ ಅಲ್ಲ. ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎಂದರು. ವಿವಿ ಸಂಬAಧ ಅಧಿಕಾರಿಗಳ ವರದಿಯೂ ಬಂದಿದೆ. ಅದಕ್ಕೆ ನಮ್ಮ ವರದಿಯನ್ನು ನೀಡಿದ್ದೇವೆ. ಮುಂದೆ ಕ್ಯಾಬಿನೆಟ್ ಮುಂದೆ ಇದು ಮಂಡನೆಯಾಗುತ್ತದೆ.

ಮೊದಲು ಮಕ್ಕಳ ಅಭಿಪ್ರಾಯ ಕಲೆಹಾಕಿ, ಪೂರಕವಾಗಿ ಅಭಿಯಾನ ಕೈಗೊಳ್ಳುವಂತೆ ಶಾಸಕರಿಗೆ ಸಲಹೆ ನೀಡಿದ್ದೇನೆ. ಅಭಿಯಾನ ಮೂಲಕ ಸ್ಪಷ್ಟ ಅಭಿಪ್ರಾಯವನ್ನು ವಿದ್ಯಾರ್ಥಿಗಳಿಂದ ಪಡೆದುಕೊಳ್ಳಬೇಕಾಗಿದೆ. ಯಾರು, ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ. ಇಬ್ಬರು ಶಾಸಕರು ೨ ಕಿವಿ ಹಿಡಿದು ವಿವಿ ಬೇಕೆಂದು ಕೇಳುತ್ತಿದ್ದಾರೆ. ಖಾಸಗಿ ಅಥವಾ ನೂತನ ವಿವಿಗಳಿಗೆ ಭವಿಷ್ಯದಲ್ಲಿ ಮಾನ್ಯತೆ ಸಿಗುವುದಿಲ್ಲ ಎಂಬ ಕಳವಳವೂ ಇದ್ದು, ಇದಕ್ಕೆ ಅಭಿಯಾನದಿಂದ ದೊರೆಯುವ ಅಭಿಪ್ರಾಯ ಅಗತ್ಯವಾಗಿದೆ ಎಂದು ಹೇಳಿದರು.