ಮಡಿಕೇರಿ, ಮಾ. ೨೧: ಕೊಡಗಿನಲ್ಲಿ ಹುಟ್ಟಿ ಇಲ್ಲಿಂದ ಹರಿದು ದಕ್ಷಿಣ ಭಾರತಕ್ಕೆ ನೀರುಣಿಸುವ ಕಾವೇರಿ ನದಿಯನ್ನು ರಕ್ಷಣೆ ಮಾಡಬೇಕೆಂಬ ಕೂಗು ಹಲವು ದಶಕಗಳ ಹಿಂದಿನಿAದಲೇ ಎದ್ದಿದೆ. ಇತ್ತೀಚಿನ ದಿನಗಳಲ್ಲಂತೂ ಕಾವೇರಿ ಸಿ-ಡಿ ದರ್ಜೆಗಿಳಿದು ಕುಡಿಯಲು ಯೋಗ್ಯವಲ್ಲದ ಹಂತಕ್ಕೆ ತಲುಪಿದೆ. ಪೌರಾಣಿಕ ಹಿನ್ನೆಲೆಯುಳ್ಳ ಕಾವೇರಿ ಕೇವಲ ನದಿಯಲ್ಲ ಅದು ಕನ್ನಡಿಗರ ಜೀವನಾಡಿಯಾಗಿ ಪೂಜನೀಯ ಸ್ಥಾನವನ್ನು ಪಡೆದುಕೊಂಡಿದೆ. ಇಡೀ ದೇಶದ ಜನರು ಕಾವೇರಿಗೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಜನ ತೀರ್ಥಸ್ವರೂಪಿಣಿಯನ್ನು ತಾಯಿ ಎಂಬ ಭಾವದಲ್ಲಿ ಕಾಣುತ್ತಾರೆ. ಇದೀಗ ರಾಜ್ಯ ಸರಕಾರ ಜಲಸಂರಕ್ಷಣೆಗಾಗಿ ಪಣತೊಟ್ಟು ‘ಕಾವೇರಿ ಆರತಿ’ ಕಾರ್ಯಕ್ರಮವನ್ನು ರೂಪಿಸಿದ್ದು, ಅದರ ಪ್ರಥಮ ಹಂತವಾಗಿ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕಾವೇರಿ ತವರಿನಿಂದ ಅಭಿಯಾನ ಕೈಗೊಂಡು ಮಹತ್ವದ ಕಾರ್ಯಕ್ಕೆ ಮುನ್ನುಡಿ ಇಟ್ಟಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ಮೂಲಕ ರಾಜ್ಯ ಸರಕಾರ ಕಾವೇರಿ ಆರತಿ ಕಾರ್ಯಕ್ರಮವನ್ನು ತಾ. ೨೧ ರಂದು ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಆಯೋಜಿಸಿದ್ದು, ಕಾರ್ಯಕ್ರಮದ ಚಾಲನೆಗೂ ಮುನ್ನ ಬೆಳಿಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾವೇರಿ ಹುಟ್ಟೂರಾದ ತಲಕಾವೇರಿಗೆ ಆಗಮಿಸಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಭಕ್ತಿಭಾವದಿಂದ ನೆರವೇರಿಸುವ ಮೂಲಕ ಹೊಸ ಮನ್ವಂತರವನ್ನು ಸೃಷ್ಟಿಸುವ ಬಯಕೆಯನ್ನು ಅನಾವರಣ ಮಾಡಿದರು. ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಈಗಾಗಲೇ ಕೇಂದ್ರ ಸರಕಾರ ವಾರಣಾಸಿಯಲ್ಲಿ ಗಂಗಾರತಿ ಮೂಲಕ ಗಂಗೆಯ ಶುದ್ಧೀಕರಣಕ್ಕೆ ಮುಂದಾದ ರೀತಿಯಲ್ಲಿ ಕರ್ನಾಟಕದಲ್ಲಿ ದಕ್ಷಿಣದ ಗಂಗೆ ಕಾವೇರಿಯನ್ನು ಕಲುಷಿತ ಮುಕ್ತಗೊಳಿಸುವ ಪ್ರತಿಜ್ಞೆಯನ್ನು ಸರಕಾರ ಮಾಡಿದ್ದು, ಇದಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಾಯಿ ಕಾವೇರಿಯ ಆಶೀರ್ವಾದ ಪಡೆಯಲು ಸನ್ನಿಧಿಗೆ ಆಗಮಿಸಿದ್ದರು.
ಬೆಳಿಗ್ಗೆ ಭಾಗಮಂಡಲದ ಹೆಲಿಪ್ಯಾಡ್‌ಗೆ ಶಾಸಕರುಗಳಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರೊಂದಿಗೆ ಬಂದಿಳಿದ ಅವರಿಗೆ ಕಾರ್ಯಕರ್ತರಿಂದ ಸ್ವಾಗತ, ಪೊಲೀಸ್ ಇಲಾಖೆ ಗೌರವ ವಂದನೆ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ ನೇರವಾಗಿ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ತೆರಳಿದರು.
ತ್ರಿವೇಣಿ ಸಂಗಮದಲ್ಲಿ ಡಿಕೆಶಿ
ಕನ್ನಿಕೆ, ಕಾವೇರಿ, ಸುಜ್ಯೋತಿ ಸಂಗಮಿಸುವ ಭಾಗಮಂಡಲದ ಪವಿತ್ರ ತ್ರಿವೇಣಿ ಸಂಗಮವನ್ನು ಕಣ್ತುಂಬಿಕೊAಡು ಜಲಸ್ವರೂಪಿಣಿಗೆ ಶಿರಭಾಗಿ ನಮಿಸಿ ತಲೆಗೆ ನೀರನ್ನು ಪ್ರೋಕ್ಷಿಸಿಕೊಂಡು ಪುನೀತರಾಗಿ ಭಗಂಡೇಶ್ವರ ಸನ್ನಿಧಿಗೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ ಪ್ರಾರ್ಥನೆ ಮಾಡಿದರು.
ಅನಂತರ ಕಾವೇರಿ ಉಗಮಸ್ಥಳ ತಲಕಾವೇರಿಯತ್ತ ತೆರಳಿದ ಡಿ.ಕೆ.ಶಿವಕುಮಾರ್ ಅವರಿಗೆ ನಾದಸ್ವರದೊಂದಿಗೆ ಆತ್ಮೀಯ ಸ್ವಾಗತವನ್ನು ದೇವಾಲಯದ ಪ್ರಮುಖರು ನೀಡಿದರು. ಕಾವೇರಿ ಸನ್ನಿಧಿಗೆ ಕಾಲಿಡುತ್ತಿದ್ದಂತೆ ಭಕ್ತಿ ಪರವಶರಾದ ಡಿ.ಕೆ.ಶಿ. ತನ್ನ ಮೇಲಂಗಿಯನ್ನು ಕಳಚಿಟ್ಟು ಕಾವೇರಿ ಕುಂಡಿಕೆ ಮುಂದಿನ ಕಲ್ಯಾಣಿ ಮೆಟ್ಟಿಲಿನಲ್ಲಿ ಕೆಲಕಾಲ ಕುಳಿತು ದೇವರನ್ನು ಜಪಿಸಿ ಒಳಿತಿಗಾಗಿ ಪ್ರಾರ್ಥನೆ ಕೈಗೊಂಡು ಬಿಸಿಲಿನ ಝಳದ ನಡುವೆ ಸದಾ ತಂಪಾಗಿರುವ ಕಾವೇರಿ ಕೊಳಕ್ಕೆ ಮಡಿಕೇರಿ ಶಾಸಕ ಮಂತರ್ ಗೌಡ ಅವರೊಂದಿಗೆ ಇಳಿದರು.
ಭದ್ರತೆ ಬಯಸದೆ, ಯಾರ ಸಹಾಯವನ್ನು ಪಡೆಯದೆ ನೀರಿಗಿಳಿದ ಅವರು, ಮುಳುಗು ಹಾಕುತ್ತ ಕಾವೇರಮ್ಮನಿಗೆ ಭಕ್ತಿಯ ನಮನಗೈಯುತ್ತಿರುವಾಗಲೇ ಅರ್ಚಕರು ಕಾವೇರಿ ಕುಂಡಿಕೆಯಿAದ ಡಿಕೆಶಿ ಶಿರಕ್ಕೆ ತೀರ್ಥವನ್ನು ಪ್ರೋಕ್ಷಿಸಿದರು. ತೀರ್ಥ ಸ್ನಾನಕ್ಕೆ ತಯಾರಾಗಿ ಬಂದಿದ್ದ ಸಚಿವ ಡಿ.ಕೆ. ಶಿವಕುಮಾರ್ ಕೆಲಹೊತ್ತಿನಲ್ಲಿಯೇ ಬಟ್ಟೆ ಬದಲಾಯಿಸಿಕೊಂಡು ನೇರವಾಗಿ ಗಣಪತಿ, ಅಗಸ್ತೆö್ಯÃಶ್ವರ ಗುಡಿಗಳಿಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮಂಗಳಾರತಿ ಪಡೆದುಕೊಂಡು ಪವಿತ್ರ ಕಾವೇರಿ ಕುಂಡಿಕೆ ಬಳಿ ಆಗಮಿಸಿ ವಿಶೇಷ ಪೂಜೆಯನ್ನು ನೆರವೇರಿಸಿದರು.
ಜಲ, ಜನ ಉಳಿವಿಗಾಗಿ ಪ್ರಾರ್ಥನೆ
ಕರ್ನಾಟಕದ ಜೀವಜಲ ಕಾವೇರಿಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕೆಂಬ ನಿಟ್ಟಿನಲ್ಲಿ ಸರಕಾರ ಧಾರ್ಮಿಕ ಕಾರ್ಯಗಳ ಮೂಲಕ ಜನರನ್ನು ಜಾಗರೂಕಗೊಳಿಸುವ ಪ್ರಯತ್ನ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅಭಿಯಾನದ ನೇತೃತ್ವವನ್ನು ಡಿ.ಕೆ. ಶಿವಕುಮಾರ್ ವಹಿಸಿ ಭಕ್ತಿಯ ಭಾವನೆಯೊಂದಿಗೆ ಸೇರಿಕೊಂಡರು.
ಜಲಸAಪನ್ಮೂಲ ಸಚಿವರಾಗಿರುವ ಕಾರಣ ಅವರು ಕಾವೇರಿ ಸ್ವಚ್ಛತೆಗೆ ಹೆಚ್ಚಿನ ಆಸಕ್ತಿಯನ್ನು ತೋರಿ, ಈ ಹಿಂದೆ ಮೇಕೆದಾಟು ಹೋರಾಟವನ್ನು ತಲಕಾವೇರಿಯಿಂದ ಆರಂಭಿಸಿದನ್ನು ನೆನಪಿಸಿಕೊಂಡ ಡಿ.ಕೆ. ಶಿವಕುಮಾರ್, ಕಾವೇರಮ್ಮ ಇಡೀ ನಾಡನ್ನು ಸಮೃದ್ಧವಾಗಿಡುವ ತಾಯಿಯಾಗಿದ್ದು, ಆಕೆ ಕರ್ನಾಟಕದ ಜನರನ್ನು ಕಾಪಾಡಬೇಕು. ಉತ್ತಮ ಮಳೆ, ಬೆಳೆಯಾಗಬೇಕೆಂದು ಪ್ರಾರ್ಥನೆಗೈದರು.
ಬೆಳ್ಳಿ ಬಿಂದಿಗೆಯಲ್ಲಿ ಕಾವೇರಿ ತೀರ್ಥ
ಸಂಜೆ ನಡೆಯಬೇಕಾಗಿದ್ದ ಆರತಿ ಕಾರ್ಯಕ್ರಮಕ್ಕೆ ಕಾವೇರಿ ತೀರ್ಥ ಕೊಂಡೊಯ್ಯಲೆAದು ವಿಶೇಷ ವಿನ್ಯಾಸದಲ್ಲಿ ಬೆಳ್ಳಿಯಲ್ಲಿ ತಯಾರಿಸಿದ ಬಿಂದಿಗೆಯಲ್ಲಿ ಕಾವೇರಿ ತೀರ್ಥವನ್ನು ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷ, ಐಎಎಸ್ ಅಧಿಕಾರಿ ರಾಮ್‌ಪ್ರಸಾದ್ ಪಡೆದು ಬೆಂಗಳೂರಿಗೆ ಕೊಂಡೊಯ್ದರು.
ಅರ್ಚಕ ಪವನ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು, ದ್ವಾದಶ ನಾಮಾರ್ಚನೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ಕುಂಡಿಕೆ ಬಳಿ ನಡೆದವು. ಡಿ.ಕೆ. ಶಿವಕುಮಾರ್ ಕಾವೇರಿ ಮಾತೆಗೆ ಹಸಿರು ಬಣ್ಣದ ಸೀರೆ, ಗಾಜಿನ ಬಳೆಗಳನ್ನು ಅರ್ಪಿಸಿ, ಆರತಿ ಬೆಳಗಿ ತೀರ್ಥ ಪೂಜೆಯ ನಂತರ ತಾಮ್ರದ ಕಳಸ ಹಾಗೂ ಬೆಳ್ಳಿಯ ಬಿಂದಿಗೆಯಲ್ಲಿ ಪವಿತ್ರ ತೀರ್ಥ ಪಡೆದುಕೊಂಡು ನಿರ್ಗಮಿಸಿದರು.
ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಆಯೋಜಿತ ಕಾವೇರಿ ನದಿ ಆರತಿಗೆ ಈಗಾಗಲೇ ಪ್ಲಾಸ್ಟಿಕ್ ಬಾಟಲ್‌ಗಳ ಮೂಲಕ ಕಾವೇರಿ ತೀರ್ಥ ತಲಕಾವೇರಿಯಿಂದ ರವಾನೆಯಾಗಿದ್ದು, ಅಲ್ಲಿ ಪಾಲ್ಗೊಳ್ಳುವವರಿಗೆ ಇದನ್ನು ವಿತರಿಸಲಾಗುವುದು.
- ವರದಿ : ರಾಕೇಶ್, ಚಿತ್ರಗಳು : ಲಕ್ಷಿö್ಮÃಶ್, ಸುನಿಲ್