ಮಡಿಕೇರಿ: ನಗರದ ಶ್ರೀ ರಾಮಲಿಂಗ ಚೌಡೇಶ್ವರಿ ಮಹಿಳಾ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ಸಮಾಜದ ಅಧ್ಯಕ್ಷೆ ಭಾರತಿ ರಮೇಶ್ ಮಹಿಳಾ ದಿನಾಚರಣೆಯ ಮಹತ್ವ ಹಾಗೂ ಸಮಾಜದಲ್ಲಿ ಮಹಿಳೆಯರ ಜವಾಬ್ದಾರಿಯ ಬಗ್ಗೆ ತಿಳಿಸಿದರು.
ಪ್ರಣವ ಯೋಗ ಕೇಂದ್ರದ ಸಂಸ್ಥಾಪಕಿ ಶಿಲ್ಪಾ ರೈ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಭಾಗ್ಯ ಪ್ರಕಾಶ್ ಇವರನ್ನು ಪರಿಚಯ ಮಾಡಿಕೊಟ್ಟರು. ಸನ್ಮಾನಿತರು ಸಭೆಯನ್ನುದ್ದೇಶಿಸಿ ಹೆಣ್ಣಿನಲ್ಲಿ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು. ಪ್ರಸ್ತುತ ಸಮಾಜದಲ್ಲಿ ಯೋಗದ ಅಗತ್ಯ, ಪ್ರಯೋಜನ ಅದರ ಮಹತ್ವವನ್ನು ಕೂಲಂಕಶವಾಗಿ ತಿಳಿಯಪಡಿಸಿದರು.
ಪೂರ್ಣಿಮ ಸೋಮು, ನಂದಿನಿ ಗಣೇಶ್ ಹಾಗೂ ವಿದ್ಯಾ ದೇವರಾಜ್ ಸಮಾಜದ ಪರವಾಗಿ ಮಹಿಳೆಯರಿಗೆ ಕ್ರೀಡೆ ನಡೆಸಿ ಬಹುಮಾನ ನೀಡಿದರು. ಜಯಶ್ರೀ ನಾಗೇಶ್ ಗವಿ, ಭಾಗ್ಯ ಪ್ರಕಾಶ್ ಹಾಗೂ ಪೂರ್ಣಿಮ ಜಗದೀಶ್ ಪ್ರಾರ್ಥನೆ ಮಾಡಿದರು. ಉಪಾಧ್ಯಕ್ಷೆ ಪದ್ಮಾ ಮೋಹನ್ ಸ್ವಾಗತಿಸಿದರು. ಕಾರ್ಯದರ್ಶಿ ಜಯಶ್ರೀ ನಾಗೇಶ್ ಗವಿ ನಿರೂಪಿಸಿ, ನಿರ್ಮಲ ದಿವಾಕರ್ ವಂದಿಸಿದರು.
ಆಡಳಿತ ಮಂಡಳಿಯ ಶಶಿಕಲಾ ಲೋಕೇಶ್, ಭಾರತಿ ಸುಬ್ರಮಣ್ಯ, ಇಂದಿರಾ ಜಯರಾಂ, ಸರೋಜ ರಾಜು, ಲಕ್ಷ್ಮಿ ಮೋಹನ್, ಮನೋನ್ಮಣಿ ಬಾಲ್ ರಾಜ್ ಹಾಗೂ ಭಾರತಿ ಮಂಜುನಾಥ್ ಉಪಸ್ಥಿತರಿದ್ದರು.ಪೊನ್ನಂಪೇಟೆ: ಮಹಿಳೆಯರು ಅಕ್ಷರಸ್ಥರಾಗಿ, ಸ್ವಾವಲಂಬಿ ಗಳಾಗುವ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕರು ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್‌ನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಕರೆ ನೀಡಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಸಾಕ್ಷರಸ್ಥರಾಗಿ, ಸಂಘಟನೆಗಳ ಮೂಲಕ ವಿವಾಹ ವಿಚ್ಛೇದನ, ವರದಕ್ಷಿಣೆ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹದ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ, ಶಾಲೆಗೆ ಹೋಗದ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡಬೇಕು. ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು.
ಮಹಿಳಾ ದಿನದ ಅಂಗವಾಗಿ ಮಹಿಳಾ ಸಿಬ್ಬಂದಿಗಳಿಗೆ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬಾಂಬಿAಗ್ ದ ಸಿಟಿ ಸ್ಪರ್ಧೆಯಲ್ಲಿ ಹೆಚ್.ವಿ. ದಿವ್ಯ, ಪ್ರಥಮ, ಕಾವೇರಿ ಅಣ್ಣಯ್ಯ ದ್ವಿತೀಯ, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಎನ್.ಪಿ. ರೀತಾ ಪ್ರಥಮ, ಪಿ.ಪಿ. ಸವಿತ ದ್ವಿತೀಯ ಸ್ಥಾನ ಪಡೆದುಕೊಂಡರು.
ಮಹಿಳೆಯರು ನೃತ್ಯ ಹಾಗೂ ಗಾಯನದ ಮೂಲಕ ರಂಜಿಸಿದರು. ಈ ಸಂದರ್ಭ ಬಾಚರಣಿಯಂಡ ರಾಣು ಅಪ್ಪಣ್ಣ, ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕಿಯಾಗಿ ೨೫ ವರ್ಷಗಳ ಸೇವೆ ಪೂರೈಸಿದ ಕೆ.ಎಂ. ಕುಸುಮ್ ಹಾಗೂ ಇತ್ತೀಚೆಗೆ ಪಿಹೆಚ್‌ಡಿ ಪದವಿ ಪಡೆದುಕೊಂಡ ಕಾವೇರಿ ಕಾಲೇಜಿನ ಇತಿಹಾಸ ಉಪನ್ಯಾಸಕಿ ಎಂ.ಸಿ. ಸೀಮ ಅವರನ್ನು ಸನ್ಮಾನಿಸಲಾಯಿತು. ಕಾವೇರಿ ಕಾಲೇಜು ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಪದವಿಪೂರ್ವ ಕಾಲೇಜು ಉಪ ಪ್ರಾಂಶುಪಾಲೆ ಎಂ.ಕೆ. ಪದ್ಮ, ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಐಕ್ಯೂಎಸಿ ಸಂಚಾಲಕಿ ಡಾ. ನಯನ ತಮ್ಮಯ್ಯ, ಕಾರ್ಯಕ್ರಮ ಸಂಚಾಲಕರಾದ ಕೆ.ಕೆ. ಚಿತ್ರಾವತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎಂ.ಡಿ. ರೇಷ್ಮ, ಬಿ.ಎಸ್. ದೀಪ್ತಿ, ಎಂ.ಜೆ. ಜಸಿಂತ, ಕಚೇರಿ ಅಧೀಕ್ಷಕಿ ಟಿ.ಕೆ. ಕುಸುಮ್ ಪ್ರಾರ್ಥಿಸಿ, ಚಿತ್ರಾವತಿ ಸ್ವಾಗತಿಸಿ, ಪಿ.ಎಸ್. ದಿವ್ಯ ವಂದಿಸಿ, ಪೊನ್ನಮ್ಮ ಮತ್ತು ಪಲ್ಲವಿ ನಿರೂಪಿಸಿದರು.ಕುಶಾಲನಗರ: ಕುಶಾಲನಗರ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಹಾರಂಗಿ ಜಲಾಶಯದ ಹಿನ್ನೀರಿನ ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಸಾಂಸ್ಕೃತಿಕ, ಮತ್ತಿತರ ಕಾರ್ಯಕ್ರಮಗಳನ್ನು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಡಿಕೇರಿ: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ದಿಂದ ತಾ. ೨೩ ರಂದು (ನಾಳೆ) ಕೊಡವ ಸಮಾಜದಲ್ಲಿ ಪೊಮ್ಮಕ್ಕಡ ನಾಳ್ ಕಾರ್ಯಕ್ರಮ ಜರುಗಲಿದೆ.
ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಹಾಗೂ ಮಾಜಿ ವಿಧಾನಸಭಾ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉಪನ್ಯಾಸಕಿ ಡಾ. ತೀತಿರ ರೇಖಾ ವಸಂತ್ ಭಾಗವಹಿಸಲಿದ್ದಾರೆ. ‘ಹೆಣ್ಣು ಮಕ್ಕಳ ಬಲಗೊಳಿಸುವ ದಾರಿ’ ವಿಚಾರದ ಬಗ್ಗೆ ನಿವೃತ್ತ ಉಪಪ್ರಾಂಶುಪಾಲ ಡಾ. ಕಾಳೇಂಗಡ ಶಲೀಫ ವಿಚಾರ ಮಂಡನೆ ಮಾಡಲಿದ್ದಾರೆ.
ಈ ಸಂದರ್ಭ ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯರು ಮತ್ತು ಕಾನೂನು ಸಲಹೆಗಾರ್ತಿ ಸಣ್ಣುವಂಡ ಉಷಾ ಅಯ್ಯಣ್ಣ, ಶಿಕ್ಷಕಿ ಚೋಕಿರ ಅನಿತಾ ದೇವಯ್ಯ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ಹಾಗೂ ಪೊಮ್ಮಕ್ಕಡ ಒಕ್ಕೂಟದ ಸದಸ್ಯರಾದ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದ ರಾಷ್ಟçಮಟ್ಟದ ಇನ್ಸೆ÷್ಪöÊರ್ ಪ್ರಶಸ್ತಿ ವಿಜೇತೆ ಮುಕ್ಕಾಟಿರ ದೇಚಮ್ಮ ಸುಬ್ರಮಣಿ, ರಾಷ್ಟçಮಟ್ಟದ ಹಾಕಿ ಆಟಗಾರ್ತಿ ಚೇನಂಡ ರಕ್ಷಾ ಮುತ್ತಮ್ಮ, ಅಚ್ಚಪಂಡ ಪರ್ಲಿನ್ ಪೊನ್ನಮ್ಮ ಹಾಗೂ ಕನ್ನಂಡ ವರ್ಣ ಪೊನ್ನಮ್ಮ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.