ವೀರಾಜಪೇಟೆ, ಮಾ. ೨೨: ಕುಟುಂಬಕ್ಕೆ ಮಾತ್ರ ಸಿಮೀತವಾಗಿದ್ದ ಕೊಡವ ಕುಟುಂಬಗಳ ಮಧ್ಯೆ ಕೊಡಗು ಕಪ್ ಹೆಸರಿನಲ್ಲಿ ೧೩ನೇ ವರ್ಷದ ಕೌಟುಂಬಿಕ ಗಾಲ್ಫ್ ಪಂದ್ಯಾಟವು ಪ್ರಸ್ತುತ ಕರ್ನಂಡ ಕುಟುಂಬ ಆಯೋಜಿಸಿದ್ದು, ಎರಡು ದಿನಗಳು ನಡೆದ ಪಂದ್ಯಾವಳಿ ಮುಕ್ತಾಯಗೊಂಡಿತು.

ಕರ್ನಂಡ ಒಕ್ಕ ಕೊಡಗು ಕೌಟುಂಬಿಕ ಗಾಲ್ಫ್ ಪಂದ್ಯಾವಳಿ ೨೦೨೫, ವೀರಾಜಪೇಟೆ ಹೊರ ವಲಯದ ಕೂರ್ಗ್ ಗಾಲ್ಫ್ ಲಿಂಕ್ ಅಂಬಟ್ಟಿ ಗ್ರಾಮದ ಹುಲ್ಲು ಹಾಸಿನ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಿತು. ಅಯೋಜಕರಾದ ಅಪ್ಪಣ್ಣ ಮತ್ತು ಬೋಪಣ್ಣ ಅವರು ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕುಟುಂಬದ ಹಿರಿಯರಾದ ಬೊಳ್ಳಮ್ಮ ಅವರು, ಜಿಲ್ಲೆಯಲ್ಲಿ ಹಾಕಿ ಕ್ರೀಡೆಯು ಮೊತ್ತ ಮೊದಲ ಬಾರಿಗೆ ಕೊಡವ ಕುಟುಂಬಗಳ ಮಧ್ಯೆ ಅಯೋಜನೆಗೊಂಡಿತ್ತು, ಇದೀಗ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಹಗ್ಗಜಗ್ಗಾಟ, ಹೀಗೆ ಮುಂದುವರೆದು ಪ್ರತಿಷ್ಟಿತ ಕ್ರೀಡೆಯಾದ ಗಾಲ್ಫ್ ಕ್ರೀಡೆಯು ಸೇರ್ಪಡೆಗೊಂಡು ಸುಮಾರು ೧೩ ವರ್ಷಗಳ ಹೊಸ್ತಿಲಲ್ಲಿದೆ. ಕುಟುಂಬಗಳ ಮಧ್ಯೆ ನಡೆಯುವ ಕ್ರೀಡೆಗಳಿಂದ ಭಾತೃತ್ವದೊಂದಿಗೆ ಸಂಬAಧಗಳು ವೃದ್ಧಿಸುತ್ತದೆ. ಹಿರಿಯ ಕಿರಿಯ, ಸಿರಿತನ ಬಡತನ ಎಂಬ ಭೇದಭಾವಗಳು ಅಳಿಸಿ ಸಹೋದರತ್ವದ ಚಿಂತನೆಯು ಜಾಗೃತವಾಗುತ್ತದೆ.

ಕೂರ್ಗ್ ಗಾಲ್ಫ್ ಲಿಂಕ್ ನ ಕ್ಯಾಪ್ಟನ್ ಭರತ್ ಮಂದಣ್ಣ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕೊಡವ ಕೌಟುಂಬಿಕ ಕೊಡಗು ಗಾಲ್ಫ್ ಕಪ್ ಸುಮಾರು ೨೦೧೦ ರಲ್ಲಿ ಪ್ರಥಮ ಭಾರಿಗೆ ಅಯೋಜನೆಗೊಂಡಿತ್ತು. ಕೊರೊನಾ ನಡುವೆ ಎರಡು ವರ್ಷಗಳ ಕಾಲ ಕ್ರೀಡೆಯು ಸ್ಥಗಿತಗೊಂಡಿತ್ತು. ಬಳಿಕ ಅರಂಭವಾಗಿ ೧೩ನೇ ವರ್ಷದ ಪಂದ್ಯಾಟವನ್ನು ಕರ್ನಂಡ ಕುಟುಂಬವು ಅಯೋಜಿಸಿ ಹೊಸ ಅಯಾಮವನ್ನು ಸೃಷ್ಟಿ ಮಾಡಿದೆ. ಸುಮಾರು ೧೫೦ ಮಂದಿ ಕ್ರೀಡಾಪಟುಗಳು ಭಾಗವಹಿಸಿರುವುದು ವಿಶೇಷವಾಗಿತ್ತು. ಮುಂದೆಯೂ ಗಾಲ್ಫ್ ಪಂದ್ಯಾಟಗಳು ಮುಂದುವರೆಯಲಿದೆ. ೨೦೨೬ ರಲ್ಲಿ ಮಲ್ಚೀರ ಕುಟುಂಬವು ಪಂದ್ಯಾಟಗಳನ್ನು ಅಯೋಜಿಸುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಆಯೋಜಕ ಕರ್ನಂಡ ಕುಟುಂಬದ ಪ್ರಮುಖರಾದ ಡಾ. ಬೋಪಣ್ಣ ಅವರು ಮಾತನಾಡಿ, ಗಾಲ್ಫ್ ಕ್ರೀಡೆಯನ್ನು ಎರಡು ದಿನಗಳ ಕಾಲ ಯಾವುದೇ ಚ್ಯುತಿಬಾರದ ರೀತಿಯಲ್ಲಿ ಅಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪಂದ್ಯಾಟದಲ್ಲಿ ಅಂತರರಾಷ್ಟಿçÃಯ ಗಾಲ್ಫ್ ತೀರ್ಪುಗಾರ್ತಿ ಗುಡ್ಡಂಡ ಕಾವೇರಿ ಮುತ್ತಣ್ಣ ಮತ್ತು ದೇಶದ ಗಾಲ್ಫ್ ಆಟಗಾರ ತ್ರಿಶೂಲ್ ಚಿಣ್ಣಪ್ಪ ಅವರನ್ನು ಪರಿಚಯಿಸಿದ್ದು ಶ್ಲಾಘನೀಯ. ಪ್ರತಿಭೆಗಳನ್ನು ಗುರುತಿಸಿ ಗೌರವ ಸೂಚಿಸುವುದು ಕರ್ತವ್ಯವಾಗಬೇಕು. ವೇದಿಕೆಯಲ್ಲಿ ಪ್ರಾಯೋಜಕರು, ತೀರ್ಪುಗಾರರು, ಪಂದ್ಯಾಟಕ್ಕೆ ಸಹಕಾರ ನೀಡಿದ ಆಟಗಾರರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕರ್ನಂಡ ಪ್ರಮುಖರಾದ ಡಾ. ಬೋಪಣ್ಣ ಸ್ವಾಗತಿಸಿದರು, ಕೂರ್ಗ್ ಗಾಲ್ಫ್ ಲಿಂಕ್ ಅಂಬಟ್ಟಿಯ ಕಾರ್ಯದರ್ಶಿಗಳಾದ ಮುಕ್ಕಾಟೀರ ಸುನೀಲ್ ನಾಣಯ್ಯ ವಂದಿಸಿದರು.

ವಿಜೇತರು

ಚಾಂಪಿಯನ್‌ಶಿಪ್ ತಂಡ ಗ್ರಾಸ್ ಸ್ಟೊçÃಕ್ ಪ್ಲೆ. ಪ್ರಥಮ ರಂಜಿತ್ ಕೆ.ಪಿ. ಮತ್ತು ಗಣೇಶ್ ಮಹೀಂದ್ರ ಜೋಡಿ ೧೬೫ ಗ್ರಾಸ್, ದ್ವಿತೀಯ ಅಮೋಘ್ ದೇವಯ್ಯ ಮತ್ತು ಆಯೂಷ್ ಕಾರ್ಯಪ್ಪ ಜೋಡಿ ೧೭೧ ಗ್ರಾಸ್ (ನಡಿಕೇರಿಯಂಡ ಕುಟುಂಬ) ಚಾಂಪಿಯನ್‌ಶಿಪ್ ತಂಡ ಹ್ಯಾಂಡಿಕ್ಯಾಪ್ ಸ್ಟೋಕ್ ಪ್ಲೇ (೦-೧೮). ಪ್ರಥಮ ಪಿ.ಬಿ. ಚೆಂಗಪ್ಪ ಮತ್ತು ದೇವ್ ಉತ್ತಪ್ಪ ೧೫೧ ನೆಟ್ (ಪಟ್ಟಡ ಕುಟುಂಬ) ದ್ವಿತೀಯ ಜೀವನ್ ಬೆಳ್ಯಪ್ಪ ಮತ್ತು ಅಖಿಲ್ ಮುತ್ತಣ್ಣ ೧೫೨ ನೆಟ್ (ಪಾಲೆಕಂಡ ಕುಟುಂಬ) ವೈಯಕ್ತಿಕ- ಸ್ಟೋಕ್ ಪ್ಲೇ : ಪ್ರಥಮ ಮುಕ್ಕಾಟೀರ ಪೂವಯ್ಯ ೭೮ ಗ್ರಾಸ್ ದ್ವಿತೀಯ ನಾಪಂಡ ತಿಮ್ಮಯ್ಯ ೮೨ ಗ್ರಾಸ್, ವೈಯಕ್ತಿಕ- ಹ್ಯಾಂಡಿಕ್ಯಾಪ್ ಸ್ಟೋಕ್ ಪ್ಲೇ (೦-೧೮): ಅಜಯ್ ಅಯ್ಯಪ್ಪ ಪಿ.ಎಸ್. ೭೨ ನೆಟ್ ದ್ವಿತೀಯ ಸಂಜಯ್ ಡಿಸೋಜಾ ೭೪ ನೆಟ್, ವ್ಯಯಕ್ತಿಕ- ಹ್ಯಾಂಡಿಕ್ಯಾಪ್ ಸ್ಟೇಬಲ್‌ಪೋರ್ಡ್ ೧೯-೨೪) : ಪ್ರಥಮ ಸಿ.ಸಿ. ತಿಮ್ಮಯ್ಯ ೩೭ ಅಂಕಗಳು, ದ್ವಿತೀಯ ಮೇಜರ್ ಬಿ.ಎ. ನಂಜಪ್ಪ ೩೫ ಅಂಕಗಳು, ವೈಯಕ್ತಿಕ-ಹ್ಯಾಂಡಿಕ್ಯಾಪ್ ಸ್ಟೋಕ್ ಪ್ಲೇ ಆಹ್ವಾನಿತರ ವಿಭಾಗ: ಪ್ರಥಮ ಅಜಯ್ ವಿಜ್ ೭೪ ನೆಟ್ , ದ್ವಿತೀಯ ಸಶಾಂಕ್ ಭಂಟ್ವಾಳ ೭೬ ನೆಟ್, ಹ್ಯಾಂಡಿಕ್ಯಾಪ್ ಸ್ಟೇಬಲ್ ಪೋರ್ಡ್ ಹಿರಿಯರ ವಿಭಾಗ (೦-೨೪) ಎಂ.ಎ. ಪೊನ್ನಣ್ಣ ೩೨ ಅಂಕಗಳೋAದಿಗೆ ವಿಜೇತರಾದರು, ಅತ್ಯುತ್ತಮ ಮಹಿಳಾ ಗಾಲ್ಫರ್ -ಹ್ಯಾಂಡಿಕ್ಯಾಪ್ ಸ್ಟೇಬಲ್ ಪೋರ್ಡ್ ವಿಭಾಗ (೦-೨೪) ಎಂ.ಎಸ್ ಮಿರ್ನಾಲಿನಿ ಚಿನ್ನಪ್ಪ ೨೯ ಅಂಕಗಳೋAದಿಗೆ ವಿಜೇತರಾದರು. ನೇರ ಡ್ರೆöÊವ್ ವಿಭಾಗ: ಸ್ಮರನ್ ಸುಭಾಷ್, ಪಿನ್‌ಗೆ ಹತ್ತಿರ: ಸಿ.ಪಿ. ಗಣಪತಿ, ಸೆಕೆಂಡ್ ಶಾಟ್ ಪಿನ್‌ಗೆ ಹತ್ತಿರ : ಅಜಯ್ ವಿಜ್, ಅತ್ಯುತ್ತಮ ೫ ಪಿನ್ ಹತ್ತಿರ ವಿಭಾಗದಲ್ಲಿ: ಮಾಚಯ್ಯ ಕೆ.ಎಸ್. ೪ ಆಡಿ, ದಿನೇಶ್ ಕಾರ್ಯಪ್ಪ ೦೬ ಅಡಿ, ವರುಣ್ ಗಣಪತಿ ೦೯ ಅಡಿ, ಕೋದಂಡ ರಾಮ್ ೧೨ ಅಡಿ, ಸುಭಾಷ್ ಬಲ್ಲಚಂಡ ೧೩ ಅಡಿ ಅಂತರದಲ್ಲಿ ತಮ್ಮ ಗುರಿಮುಟ್ಟಿದರು. ವಿಜೇತರಿಗೆ ಟ್ರೋಫಿ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. -(ಟಿ.ಜೆ. ಕಿಶೋರ್ ಕುಮಾರ್ ಶೆಟ್ಟಿ)