ಮಡಿಕೇರಿ, ಮಾ. ೨೨: ಮಡಿಕೇರಿಯ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ಲಬ್‌ನ ಅಧ್ಯಕ್ಷ ಹಾಗೂ ಹಾಕಿ ತರಬೇತುದಾರರೂ ಆಗಿರುವ ಕೋಟೇರ ಎನ್. ಮುದ್ದಯ್ಯ ಅವರು; ಕಳೆದ ೩೦ ವರ್ಷಗಳಿಂದ ಮಕ್ಕಳಿಗಾಗಿ ಉಚಿತ ಬೇಸಿಗೆ ಕ್ರೀಡಾ ಶಿಬಿರ ಏರ್ಪಡಿಸಿಕೊಂಡು ಬರಲಾಗುತ್ತಿದ್ದು, ಇದು ೩೧ನೇ ವರ್ಷದ ಶಿಬಿರವಾಗಿದೆ.

೬ ವರ್ಷದಿಂದ ೧೬ ವರ್ಷದೊಳಗಿನ ವಯೋಮಿತಿಯ ಬಾಲಕ - ಬಾಲಕಿಯರಿಗೆ ಉಚಿತವಾಗಿ ಹಾಕಿ, ಅಥ್ಲೆಟಿಕ್ಸ್, ಯೋಗ, ಪ್ರಾಣಾಯಾಮ ಮುಂತಾದವುಗಳ ಬಗ್ಗೆ ನುರಿತ, ಅನುಭವಿ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಒಂದು ತಿಂಗಳ ಕಾಲ ಶಿಬಿರ ನಡೆಯಲಿದ್ದು, ಅನೌಪಚಾರಿಕವಾಗಿ ತಾ. ೨೪ರ ಸೋಮವಾರದಿಂದ ಶಿಬಿರ ಆರಂಭಿಸಲಾಗುವುದು.

ಆಸಕ್ತ ಮಕ್ಕಳು ಅಂದು ಶಿಬಿರ ನಡೆಯುವ ಜ. ತಿಮ್ಮಯ್ಯ ಕ್ರೀಡಾಂಗಣಕ್ಕೆ ಆಗಮಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಶಿಬಿರ ಪ್ರತಿದಿನ ಬೆಳಿಗ್ಗೆ ೬.೩೦ ಗಂಟೆಯಿAದ ೮.೩೦ ಗಂಟೆವರೆಗೆ ನಡೆಯಲಿದೆ ಎಂದು ತಿಳಿಸಿದರು.

ವಾಂಡರ‍್ಸ್ ಕ್ಲಬ್‌ನ ತರಬೇತುದಾರರಾದ ಬೊಪ್ಪಂಡ ಶ್ಯಾಂ ಪೂಣಚ್ಚ ಮಾತನಾಡಿ, ತಾ. ೨೪ ರಿಂದ ಶಿಬಿರಕ್ಕೆ ಚಾಲನೆ ನೀಡಲಾಗುವುದು. ಆದರೆ, ಏ. ೧ ರಂದು ಹಿರಿಯ ಕ್ರೀಡಾಪಟು ದಿ. ಸಿ.ವಿ. ಶಂಕರ್ ಅವರ ಜನುಮ ದಿನದಂದು ಅಧಿಕೃತವಾಗಿ ಶಿಬಿರದ ಉದ್ಘಾಟನೆ ನಡೆಯಲಿದೆ. ಮೇ. ೧ರವರೆಗೆ ನಡೆಯುವ ಒಂದು ತಿಂಗಳ ಶಿಬಿರದಲ್ಲಿ ನುರಿತ ತರಬೇತುದಾರರು ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಉಚಿತವಾಗಿ ಹಾಲು, ಬ್ರೆಡ್, ಮೊಟ್ಟೆ, ಬಾಳೆ ಹಣ್ಣನ್ನು ನೀಡಲಾಗುವುದು ಎಂದು ತಿಳಿಸಿದರು.

ಮ್ಯಾನ್ಸ್ ಕಾಂಪೌAಡ್ ಎಂದು ಕರೆಯಲಾಗುತ್ತಿದ್ದ ಜಿಲ್ಲಾ ಕ್ರೀಡಾಂಗಣಕ್ಕೆ ದೊಡ್ಡ ಇತಿಹಾಸವೇ ಇದ್ದು, ಈ ಮೈದಾನದಲ್ಲಿ ಆಡಿದ ಹಲವಾರು ಮಂದಿ ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಆಟವಾಡಿ ಖ್ಯಾತಿಗಳಿಸಿದ್ದಾರೆ. ಅವರುಗಳೆಲ್ಲ ಶಿಬಿರಕ್ಕೆ ಆಗಮಿಸಿ, ಶಿಬಿರಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ಶಿಬಿರದ ಸಂಚಾಲಕ ಬಾಬು ಸೋಮಯ್ಯ ಮಾತನಾಡಿ, ವಾಂಡರ‍್ಸ್ ಕ್ಲಬ್‌ನಲ್ಲಿ ಇರುವವರೆಲ್ಲರೂ ದಿ.ಸಿ.ವಿ. ಶಂಕರ್ ಅವರುಗಳ ಶಿಷ್ಯಂದಿರಾಗಿದ್ದು, ಅವರ ಹೆಸರಿನಲ್ಲಿ ಮಕ್ಕಳ ಭವಿಷ್ಯಕ್ಕೋಸ್ಕರ ಈ ಉಚಿತ ತರಬೇತಿ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಪದಾಧಿಕಾರಿ ಹಾಗೂ ತರಬೇತುದಾರ ಕುಡೆಕಲ್ ಸಂತೋಷ್ ಮಾತನಾಡಿ; ಕೊಡಗಿನ ದ್ರೋಣಾಚಾರ್ಯ ಎಂದೇ ಕೀರ್ತಿವೆತ್ತಿರುವ ದಿ. ಸಿ.ವಿ. ಶಂಕರ್ ಸ್ವಾಮಿ ಅವರ ಹೆಸರಿನಲ್ಲಿ ಈ ತರಬೇತಿ ಶಿಬಿರ ಏರ್ಪಡಿಸಿಕೊಂಡು ಬರಲಾಗುತ್ತಿದೆ. ಶಂಕರ್ ಸ್ವಾಮಿ ಅವರ ಗರಡಿಯಲ್ಲಿ ಪಳಗಿದ ಎಲ್ಲಾ ಕ್ರೀಡಾಪಟುಗಳು, ಅಭಿಮಾನಿಗಳು ಶಿಬಿರಕ್ಕೆ ಸಹಕಾರ ನೀಡುತ್ತಿದ್ದಾರೆ. ಮುಖ್ಯ ಹಾಕಿ ತರಬೇತುದಾರರಾಗಿ ಕೋಟೇರ ಮುದ್ದಯ್ಯ, ಬಾಬು ಸೋಮಯ್ಯ, ಶ್ಯಾಂ ಪೂಣಚ್ಚ, ಲೋಕೇಶ್ ನಾಯ್ಡು ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಆಟವಾಡಿದ ಆಟಗಾರರು ಕೆಲವು ಪೋಷಕರು ಕೂಡ ಆಗಮಿಸಿ ತರಬೇತಿ ನೀಡುತ್ತಾರೆ.

ಅಥ್ಲೆಟಿಕ್ಸ್ನಲ್ಲಿ ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕರಾದ ಎಸ್.ಟಿ. ವೆಂಕಟೇಶ್, ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಹರೇಂದ್ರ, ಯೋಗ, ಪ್ರಾಣಾಯಾಮವನ್ನು ಯೋಗ ಶಿಕ್ಷಕ ಕೆ.ಕೆ. ಮಹೇಶ್‌ಕುಮಾರ್ ಅವರುಗಳು ಕಲಿಸಿಕೊಡಲಿದ್ದಾರೆ. ಇದರೊಂದಿಗೆ ಭಾರತೀಯ ಸೇನೆಯಲ್ಲಿ ಅಥ್ಲೆಟಿಕ್ಸ್ ತರಬೇತುದಾರರಾಗಿರುವ ಮಡಿಕೇರಿಯವರೇ ಆಗಿರುವ ತಿಲಕ್ ಅವರು ಕೂಡ ತರಬೇತಿ, ಮಾರ್ಗದರ್ಶನ ನೀಡಲಿದ್ದಾರೆ. ಅಂತರರಾಷ್ಟಿçÃಯ ಹಾಕಿ ಆಟಗಾರರು, ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಕೊನೆಯ ಹಂತದಲ್ಲಿ ತಂಡಗಳನ್ನಾಗಿ ವಿಂಗಡಿಸಿ ಹಾಕಿ ಪಂದ್ಯಾವಳಿ, ಅಥ್ಲೆಟಿಕ್ಸ್ ಕ್ರೀಡಾಕೂಟ, ಮ್ಯಾರಾಥಾನ್ ಮುಂತಾದವುಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ಕೂಡ ನೀಡಲಾಗುವುದು. ಭಾಗವಹಿಸುವ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ಕೂಡ ನೀಡಲಾಗುವುದು. ಇದರೊಂದಿಗೆ ಶಿಬಿರಾರ್ಥಿಗಳಿಗೆ ಪ್ರಕೃತಿ - ಪರಿಸರದ ಅರಿವು ಮೂಡಿಸುವ ಸಲುವಾಗಿ ಚಾರಣ ಕೂಡ ಹಮ್ಮಿಕೊಳ್ಳಲಾಗುವುದು. ನಿಸ್ವಾರ್ಥವಾಗಿ ನಡೆಸಲಾಗುವ ಈ ಒಂದು ಶಿಬಿರಕ್ಕೆ ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು.

ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕುಡೆಕಲ್ ಸಂತೋಷ್ (೯೯೭೨೫೩೮೫೮೪), ಬೊಪ್ಪಂಡ ಶ್ಯಾಂ ಪೂಣಚ್ಚ (೯೪೪೮೨೭೮೦೮೧) ಇವರುಗಳನ್ನು ಸಂಪರ್ಕಿಸಬಹುದಾಗಿದೆ.