ಕುಶಾಲನಗರ, ಮಾ. ೨೨: ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಟೌನ್ ಕಾಲೋನಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಅವರ ೯೧ನೇ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಸಿದ್ದಪ್ಪ ಅವರು ಕಾನ್ಶಿರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸಮಾಜದಲ್ಲಿ ಹಿಂದುಳಿದ ದಲಿತ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಬೇಕು. ಜೊತೆ ಬಹುಜನರು ರಾಜಕೀಯ ಅಧಿಕಾರ ಪಡೆಯಬೇಕೆಂಬ ಹೆಬ್ಬಯಕೆಯಿಂದ ಕಾನ್ಶಿರಾಮ್ ಅವರು ಬಿಎಸ್ಪಿ ಪಕ್ಷ ಆರಂಭಿಸಿದರು. ಬಹುಜನರ ಏಳಿಗೆಗಾಗಿ ಅವರ ಕೊಡುಗೆ ಅಪಾರ ಎಂದರು.ಸAಘದ ಸಂಘಟನಾ ಕಾರ್ಯದರ್ಶಿ ಜಯಪ್ಪ ಹಾನಗಲ್, ಕಾನ್ಶಿರಾಮ್ ಅವರ ಜೀವನ, ರಾಜಕೀಯ ಚಿಂತನೆ ಹಾಗೂ ಸಾಧನೆಯ ಬಗ್ಗೆ ತಿಳಿಸಿದರು. ಈ ಸಂದರ್ಭ ಬುದ್ಧವಂದನೆ, ಸಂವಿಧಾನ ಪೀಠಿಕೆ ಓದುವುದರ ಜೊತೆಗೆ ಕೇಕ್ ಕತ್ತರಿಸಿ ಕಾರ್ಯಕ್ರಮ ಆಚರಿಸಲಾಯಿತು. ಸಂಘದ ಉಪಾಧ್ಯಕ್ಷ ಬಿ.ಸಿ. ರಾಜು, ಕಾರ್ಯದರ್ಶಿ ಯು.ಟಿ. ರಾಮಯ್ಯ, ಖಜಾಂಜಿ ಲಿಂಗರಾಜು ಹಾಗೂ ಸದಸ್ಯರು ಭಾಗವಹಿಸಿದ್ದರು.