ಕಡAಗ, ಮಾ. ೨೨: ಕಡಂಗ ಸಮೀಪದ ಪೊದ್ದಮಾನಿ ಗ್ರಾಮದಲ್ಲಿ ಮತ್ತೆ ಆನೆಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರು ತಮ್ಮ ತೋಟಕ್ಕೆ ಮತ್ತು ಮನೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.
ಶುಕ್ರವಾರ ಸಂಜೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ತೋಟದಲ್ಲಿ ಆನೆಗಳು ಸ್ಪಿçಂಕ್ಲರ್ ಪೈಪ್ ಮತ್ತು ಜೆಟ್‌ನ್ನು ಹಾನಿ ಮಾಡಿರುವ ಘಟನೆ ನಡೆದಿದೆ.
ಕಳೆದ ವರ್ಷವೂ ಕೂಡ ಇದೇ ರೀತಿ ಹಾನಿಯಾಗಿದ್ದು, ಈ ವರ್ಷವು ಹಾನಿಯಾಗಿದೆ. ಕೂಡಲೇ ಅರಣ್ಯ ಅಧಿಕಾರಿಗಳು ಕಾಡಾನೆ ದಾಳಿಯನ್ನು ನಿಯಂತ್ರಿಸಲು ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಕಿರಣ್ ಒತ್ತಾಯಿಸಿದರು.