ವೀರಾಜಪೇಟೆ, ಮಾ. ೨೨: ಜೀವನದಲ್ಲಿ ಸದಾ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ ಅಭಿಪ್ರಾಯಪಟ್ಟರು.
ವೀರಾಜಪೇಟೆ ಕಾವೇರಿ ಕಾಲೇಜು ಕೊಡವ ಹಾಕಿ ಅಕಾಡೆಮಿ ಹಾಗೂ ಹಾಕಿ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ನಡೆದ ಹಾಕಿ ತೀರ್ಪುಗಾರರ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು; ನಮ್ಮ ಕಾಲದ ಹಾಕಿ ಆಟಕ್ಕೂ, ಈ ಕಾಲದ ಆಟಕ್ಕೂ ಬಹಳ ಬದಲಾವಣೆಯಾಗಿದೆ. ಈ ರೀತಿ ಕಾರ್ಯಾಗಾರಗಳು ನಡೆದ ಸಂದರ್ಭ ನೂತನವಾಗಿ ಅಳವಡಿಸಲಾಗಿರು ನಿಯಮಗಳು ಎಲ್ಲಾ ಕ್ರೀಡಾಪಟುಗಳಿಗೂ ಇತರರಿಗೂ ತಿಳಿಯಲು ಸಾಧ್ಯ. ಕಾರ್ಯಾಗಾರದಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳು ಹೆಚ್ಚಿನ ವಿಚಾರಗಳನ್ನು ತಮಗೆ ಎರಡು ದಿನಗಳ ಕಾಲ ತಿಳಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತಿ ಮುಖ್ಯವಾಗಿ ಯಾವುದೇ ಕೆಲಸವಾಗಲಿ, ಕ್ರೀಡೆಯಾಗಲಿ ಬಿಟ್ಟುಕೊಡಬಾರದು. ಡೆಡಿಕೇಶನ್, ಡಿಟರ್ಮಿನೇಷನ್, ಡಿಸಿಪ್ಲಿನ್, ಡಿವೋಶನ್ ಈ ನಾಲ್ಕು ಡಿ ಗಳು ಅತಿ ಮುಖ್ಯ ಎಂದರು. ನಂತರ ಕೊಡವ ಕೌಟುಂಬಿಕ ಹಾಕಿ ಕ್ರೀಡಾಕೂಟ ಬೆಳೆದು ಬಂದ ವಿವಿಧ ಹಂತವನ್ನು ವಿವರಿಸಿ ಈ ವರ್ಷ ಕೌಟುಂಬಿಕ ಹಾಕಿ ಕ್ರೀಡಾಕೂಟ ಬೆಳ್ಳಿಹಬ್ಬವನ್ನು ಆಚರಿಸಲಿದೆ ಎಂದರು.
ಸಮಾರAಭವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಬೆನಡಿಕ್ಟ್ ಆರ್ ಸಾಲ್ದಾನ, ನಮಗೆ ತಪ್ಪನ್ನು ಮಾಡಲು ಯಾವುದೇ ರೀತಿಯ ಮಾರ್ಗದರ್ಶನ, ಪ್ರೇರಣೆಯ ಅಗತ್ಯವಿರುವುದಿಲ್ಲ. ಆದರೆ ಒಳ್ಳೆಯ ಕೆಲಸಗಳನ್ನು ಮಾಡಲು ಉತ್ತಮವಾದ ಮಾರ್ಗದರ್ಶನ ಅಗತ್ಯ. ಅದೇ ರೀತಿಯಾಗಿ ಒಂದು ಕ್ರೀಡಾಕೂಟವು ಯಶಸ್ಸನ್ನು ಕಾಣಬೇಕಾದರೆ ಉತ್ತಮ ಮಾರ್ಗದರ್ಶನ ಪಡೆದ ತೀರ್ಪುಗಾರರು ಅತಿಮುಖ್ಯ. ಈ ನಿಟ್ಟಿನಲ್ಲಿ ಎರಡು ದಿನ ನಡೆದಂತಹ ಹಾಕಿ ತೀರ್ಪುಗಾರರ ಕಾರ್ಯಾಗಾರ ಯಶಸ್ವಿಯಾಗಿ ನಡೆದಿದ್ದು, ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಯುವಜನರಿಗೆ ಹಾಗೂ ಶಿಬಿರಾರ್ಥಿಗಳಿಗೆ ಉತ್ತಮ ರೀತಿ ಮಾಹಿತಿ ನೀಡಲಾಗಿದೆ ಎಂದರು.
ಸAಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹಾಕಿ ಇಂಡಿಯಾದ ಅಂತರರಾಷ್ಟಿçÃಯ ಹಾಕಿ ಕ್ರೀಡಾಕೂಟದ ತಾಂತ್ರಿಕ ತೀರ್ಪುಗಾರ ಪುಲ್ಲಂಗಡ ರೋಹಿಣಿ ಬೋಪಣ್ಣ ಮಾತನಾಡಿ, ಯಾವುದೇ ಕೆಲಸ ಮಾಡುವುದಾದರೆ ಆಸಕ್ತಿಯಿಂದ ಮಾಡಬೇಕು, ಅದರಲ್ಲೂ ಕ್ರೀಡೆಯ ತೀರ್ಪುಗಾರಿಕೆಯಲ್ಲಿ ತೀರ್ಪುಗಾರರಾಗಿ ಸ್ವಹಿತಾಸಕ್ತಿಯಿಂದ ತೀರ್ಮಾನಿಸಿ ಮುಂದುವರೆದರೆ ಮಾತ್ರ ಉತ್ತಮ ತೀರ್ಪುಗಾರರಾಗಲು ಸಾಧ್ಯ. ಆಸಕ್ತಿಯಿಂದ ತೀರ್ಪುಗಾರಿಕೆಯನ್ನು ನಡೆಸುತ್ತಾ ಹೋದರೆ ವಿವಿಧ ಹಂತಗಳಲ್ಲಿ ಬೆಳವಣಿಗೆಗೆ ಬೇಕಾದಂತಹ ಎಲ್ಲಾ ರೀತಿಯ ಸಹಕಾರವನ್ನು ಶಿಬಿರಾರ್ಥಿಗಳಿಗೆ ನೀಡಲಾಗುವುದು ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಾಗಾರದಲ್ಲಿ ೫೮ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಈ ವರ್ಷ ನವೆಂಬರ್ ತಿಂಗಳಿನಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಚಾಂಪಿಯನ್ಸ್ ಲೀಗನ್ನು ನಡೆಸಲಾಗುತ್ತಿದ್ದು, ಇದಕ್ಕೂ ಮೊದಲು ಮತ್ತೊಂದು ತೀರ್ಪುಗಾರರ ಕಾರ್ಯಾಗಾರವನ್ನು ನಡೆಸಲಾಗುತ್ತದೆ. ಆಸಕ್ತರು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಬೇಕೆಂದು ವೀರಾಜಪೇಟೆ ಕೊಡವ ಹಾಕಿ ಅಕಾಡೆಮಿ ಸದಸ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ರಘು ಪ್ರಸಾದ್, ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಮಾದಂಡ ಪೂವಯ್ಯ, ಬಡಕಡ ಡೀನಾ ಪೂವಯ್ಯ, ಕಂಬೀರAಡ ರಾಖಿ ಪೂವಣ್ಣ, ನೆರಪಂಡ ಹರ್ಷ ಮಂದಣ್ಣ, ಕುಲ್ಲೇಟಿರ ಅರುಣ್ ಬೇಬ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ತಮ್ಮಯ್ಯ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.