ಮಡಿಕೇರಿ, ಮಾ. ೨೨: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ನೇತೃತ್ವದಲ್ಲಿ ಸಮಾನಮನಸ್ಕರ ಮುಖಂಡರುಗಳ, ದಕ್ಷಿಣ ಭಾರತದ ಪ್ರಮುಖ ನಾಯಕರು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಹಲವು ಪ್ರಮುಖ ಬೇಡಿಕೆಗಳ ಹಕ್ಕೊತ್ತಾಯಕ್ಕೆ ಸಂಬAಧಪಟ್ಟ ಸಭೆಯು ತಮಿಳುನಾಡಿನಲ್ಲಿ ನಡೆಯಿತು.
ಕೇಂದ್ರ ಸರಕಾರದ ಮಲತಾಯಿ ಧೋರಣೆ, ದಕ್ಷಿಣ ರಾಜ್ಯಗಳಲ್ಲಿ ಉದ್ದೇಶಿತ ಲೋಕಸಭಾ ಸ್ಥಾನಗಳಲ್ಲಿ ಏರುಪೇರು ಮಾಡುವ ಹುನ್ನಾರ, ರಾಜ್ಯ ಸರಕಾರಗಳಿಗೆ ಕೇಂದ್ರದಿAದ ಬರಬೇಕಾದ ಪಾಲುದಾರಿಕೆಯ ಸಂಪೂರ್ಣ ಮೊತ್ತದ ಪೂರೈಕೆ ಹಾಗೂ ಮತ್ತಿತರ ಪ್ರಮುಖ ವಿಷಯಗಳು ಕುರಿತು ಸಂಘಟಿತರಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಕರ್ನಾಟಕ ರಾಜ್ಯದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹರಗಾರರು ಹಾಗೂ ವೀರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಭಾಗವಹಿಸಿದ್ದರು.