ಸೋಮವಾರಪೇಟೆ, ಮಾ.೨೨: ತಥಾಸ್ತು ಸಾತ್ವಿಕ ಸಂಸ್ಥೆ, ಅಬಕಾರಿ ಇಲಾಖೆ, ಶ್ರೀ ಶಿವಕುಮಾರ ಸ್ವಾಮಿ ಜಯಂತ್ಯೋತ್ಸವ ಸಮಿತಿ ಹಾಗೂ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ತಾ. ೨೪ರ ಬೆಳಿಗ್ಗೆ ೯ಕ್ಕೆ ಮಹಿಳಾ ಸಹಕಾರ ಸಂಘದ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ ಮಾಳವ ತಿಳಿಸಿದ್ದಾರೆ.