ಕರಿಕೆ, ಮಾ. ೨೨: ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕಾಮಗಾರಿ ಪೂರ್ಣಗೊಂಡ ಎರಡು ತಿಂಗಳಲ್ಲಿ ಲೋಕೋಪಯೋಗಿ ರಸ್ತೆ ದುರಸ್ತಿ ಸಂದರ್ಭದಲ್ಲಿ ಮುಖ್ಯ ಪೈಪ್ ತುಂಡಾಗಿ ಒಂದು ವಾರದಿಂದ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.

ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆ ಇದಾಗಿದ್ದು, ಇದೀಗ ಮಾರ್ಚ್ ತಿಂಗಳಲ್ಲಿ ನೀರಿನ ಅಭಾವದಿಂದ ಜನ ಪರದಾಡುತ್ತಿದ್ದು, ಹಾನಿಗೊಂಡ ಪೈಪ್ ದುರಸ್ತಿಗೊಳಿಸಲು ಗುತ್ತಿಗೆದಾರನಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಲಿಖಿತ ಮಾಹಿತಿ ನೀಡಿದ್ದು, ನಿನ್ನೆ ಗ್ರಾಮಸ್ಥರಾದ ಹೊಸಮನೆ ಹರೀಶ್ ಹಾಗೂ ಇತರರು ಕಾಮಗಾರಿ ಸ್ಥಳಕ್ಕೆ ತೆರಳಿ ರಸ್ತೆ ಕಾಮಗಾರಿ ನಡೆಸುವವರನ್ನು ತರಾಟೆಗೆ ತೆಗೆದುಕೊಂಡು, ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಿ ಕೂಡಲೇ ಪೈಪ್ ದುರಸ್ತಿಪಡಿಸಲು ಒತ್ತಾಯಿಸಿದ್ದಾರೆ.