ಮಡಿಕೇರಿ, ಮಾ. ೨೨: ಹಲವು ತಿಂಗಳುಗಳ ಕಾಲ ಅಂಗಡಿ ಮಳಿಗೆಯ ಬಾಡಿಗೆ ಪಾವತಿಸದ ವರ್ತಕನಿಗೆ ನ್ಯಾಯಾಲಯ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಟ್ರಸ್ಟ್ ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿ, ನಗರದ ಸಂಘದ ಮಳಿಗೆಯಲ್ಲಿ ಬಾಡಿಗೆಗಿದ್ದ ಮಂಜುನಾಥ ಕಳೆದ ಹಲವು ತಿಂಗಳುಗಳಿAದ ಬಾಡಿಗೆ ಹಣ ಪಾವತಿಸಿರಲಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಕೋರಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ರೂ.೭೯,೩೩೧ ಹಣದ ಜೊತೆಗೆ ರೂ. ೫೦೦ ದಂಡ ವಿಧಿಸಿದೆ. ರೂ. ೭೯,೩೩೧ ಹಣವನ್ನು ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ಹಣ ಪಾವತಿಸದಿದ್ದಲ್ಲಿ ೧ ವರ್ಷದ ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದೆ.