ಗುಡ್ಡೆಹೊಸೂರು, ಮಾ. ೨೨: ಇಲ್ಲಿಗೆ ಸಮೀಪದ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಮಹಾಪೂಜೆ ತಾ. ೨೪ ರಿಂದ ೨೭ರ ತನಕ ನಡೆಯಲಿದೆ. ತಾ.೨೪ರ ಸಂಜೆ ತಕ್ಕರ ಮನೆಯಿಂದ ಭಂಡಾರ ತರುವುದು. ಶ್ರೀ ದೇವಿ ಬಲಿ ನಂತರ ಮಹಾಪೂಜೆ ನಡೆಯಲಿದೆ. ತಾ.೨೫ ರಂದು ೩ ಗಂಟೆಯಿAದ ಪಟ್ಟಣಿ, ಎತ್ತುಹೇರು, ಶ್ರೀ ದೇವಿ ಬಲಿ ಅಲಂಕಾರ ಪೂಜೆ ನಡೆಯಲಿದೆ. ತಾ.೨೬ ರಂದು ಬೆಳಿಗ್ಗೆ ೧೦.೩೦ ಗಂಟೆಯಿAದ ತುಲಾಭಾರ ಸೇವೆ, ಮಹಾಪೂಜೆ, ಶ್ರೀ ದೇವಿಯ ಅವಭೃತ ಸ್ನಾನ ನಂತರ ವಿವಿಧ ಪೂಜೆಗಳು ನಡೆಯಲಿವೆ. ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ತಾ.೨೭ ರಂದು ಬೆಳಿಗ್ಗೆ ೯ ಗಂಟೆಯಿAದ ಶುದ್ಧ ಕಳಶ, ಮಹಾಪೂಜೆ ನಂತರ ಅನ್ನದಾನ ನಡೆಯಲಿದೆ.