ಶನಿವಾರಸಂತೆ, ಮಾ. ೨೨: ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸರ್ಕಾರಿ ಶಾಲೆಗಳು ಶೈಕ್ಷಣಿಕ ಗುಣಮಟ್ಟ ದಲ್ಲಿ ಪ್ರಗತಿ ಸಾಧಿಸುತ್ತಾ ಗುರುತಿಸಿಕೊಳ್ಳುತ್ತಿವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ೧ನೇ ತರಗತಿಗೆ ಪ್ರವೇಶ ಪಡೆದ ಯುಕೆಜಿ ಮಕ್ಕಳ “ಗ್ರಾಜುಯೇಶನ್ ಡೆ’’ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಇಂದು ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಕರ ಪರಿಶ್ರಮ ಹಾಗೂ ಛಲದ ಸ್ವಭಾವದಿಂದ ಅಭಿವೃದ್ಧಿ ಹೊಂದುತ್ತಿವೆ. ಶಿಕ್ಷಕರ ಜತೆ ಪೋಷಕರು ಕೈಜೋಡಿಸಿ ಸಹಕರಿಸಿದರೆ ಸರ್ಕಾರಿಯಾಗಲೀ ಖಾಸಗಿ ಶಾಲೆಯಾಗಲಿ ಅಭಿವೃದ್ಧಿ ಹೊಂದುವುದು ಸಹಜ ಎಂದರು.

ಶನಿವಾರಸAತೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ಬೆಳೆವ ಸಿರಿ ಮೊಳಕೆಯಲ್ಲಿ ಎಂಬAತೆ ಸರ್ಕಾರಿ ಶಾಲೆಯಲ್ಲಿ ಆರಂಭವಾಗಿರುವ ಆಂಗ್ಲ ಮಾಧ್ಯಮ ತರಗತಿಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಉತ್ತಮವಾಗಿದೆ. ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆ ಕರ್ತವ್ಯ ಪ್ರಜ್ಞೆ ಹಾಗೂ ಸಮಯಪಾಲನೆ ಇರುವ ಶಿಕ್ಷಕರಿರಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ಶಿಕ್ಷಕರಿದ್ದರೇ ಮಕ್ಕಳ ಕಲಿಕಾ ಪ್ರಗತಿಯೊಂದಿಗೆ ಶಾಲಾಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು.

ಪೋಷಕರಾದ ಡಾ. ರಾಮಚಂದ್ರ ಹಾಗೂ ಶ್ವೇತಾ ಅನಿಸಿಕೆ ಹಂಚಿಕೊಳ್ಳುತ್ತಾ ಸರ್ಕಾರಿ ಶಾಲೆ ಎಂಬ ತಾತ್ಸಾರ ಪೋಷಕರಿಗೆ ಸಲ್ಲದು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಶನಿವಾರಸಂತೆಯ ಸರ್ಕಾರಿ ಶಾಲೆಯತ್ತ ಪೋಷಕರು ಕಣ್ತೆರೆದು ನೋಡುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕಿ ತಾರಾ ಮಾತನಾಡಿ, ಶಿಕ್ಷಣವೆಂದರೆ ಬರಿ ಓದು ಬರಹ ಮಾತ್ರವಲ್ಲ; ಉತ್ತಮ ಸಂಸ್ಕಾರ, ಸಂಸ್ಕೃತಿಯ ನಡತೆಯೂ ಇರಬೇಕು. ಶಾಲೆಯಲ್ಲಿ ಮಕ್ಕಳು ಕಲಿತದ್ದನ್ನು ಮನೆಯಲ್ಲೂ ಅಭ್ಯಾಸ ಮಾಡಿಸುವಂತಹ ಸಹಕಾರ ಪೋಷಕರಲ್ಲಿರಬೇಕು ಎಂದರು.

ಮುಖ್ಯಶಿಕ್ಷಕ ವಿಶ್ವನಾಥ್ ಮಾತನಾಡಿ, ಯುಕೆಜಿಯಿಂದ ೧ನೇ ತರಗತಿಗೆ ಸ್ವಾಗತಿಸುವ ಗ್ರಾಜುಯೇಶನ್ ಡೇ ಕಾರ್ಯಕ್ರಮದ ಹಿಂದೆ ಶಿಕ್ಷಕರ ಪರಿಶ್ರಮವಿದೆ. ನಿರ್ವಂಚನೆಯಿAದ ಕಲಿಸುತ್ತಾ ನರ್ಸರಿ ಮಕ್ಕಳ ಭವಿಷ್ಯ ರೂಪಿಸುತ್ತಿರುವವರು ಶಿಕ್ಷಕಿ ಜೆಸಿಂತಾ ಸಿಕ್ವೇರಾ. ಇತರ ಶಿಕ್ಷಕಿಯರ ಸಹಕಾರದಿಂದ ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೨೦೨೫ನೇ ಶೈಕ್ಷಣಿಕ ಸಾಲಿನಲ್ಲಿ ಆಂಗ್ಲ ಮಾಧ್ಯಮದಲ್ಲಿ ೫ನೇ ತರಗತಿಗೆ ವಿದ್ಯಾರ್ಥಿಗಳು ಪದಾರ್ಪಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಅಭಿಮಾನ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಕ್ಷಕಿ ಜೆಸಿಂತಾ ಸಿಕ್ವೇರಾ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಪೋಷಕರು ಅನಿಸಿಕೆ ಹಂಚಿಕೊAಡರು. ಯುಕೆಜಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಒಂದನೆ ತರಗತಿಗೆ ಸ್ವಾಗತಿಸಲಾಯಿತು. ಧನಸಹಾಯ ನೀಡಿದ ಪೋಷಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚರಣ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತಿ ಸಂತೋಷ್, ಮಮತಾ, ಎಲ್‌ಕೆಜಿ-ಯುಕೆಜಿ ಸಮಿತಿ ಅಧ್ಯಕ್ಷೆ ಮಮತಾ, ಶಿಕ್ಷಕಿ ರಜಿಯಾ ಇತರ ಶಿಕ್ಷಕಿಯರು ಹಾಜರಿದ್ದರು. ಮುಖ್ಯಶಿಕ್ಷಕ ವಿಶ್ವನಾಥ್ ಸ್ವಾಗತಿಸಿದರು. ಸಹಶಿಕ್ಷಕಿ ಮಮತಾ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.