ಪೊನ್ನಂಪೇಟೆ, ಮಾ. ೨೬: ನೇರಳೆ ಹಣ್ಣು ಕೀಳಲು ಮರವೇರಿದ ಬಾಲಕನೊಬ್ಬ ಆಯತಪ್ಪಿ ಬಿದ್ದು ಸಾವಿಗೀಡಾದ ಘಟನೆ ತಿತಿಮತಿ ಸಮೀಪದ ಮರಪಾಲ ಚೀನಿಹಡ್ಲು ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ದೇವಮ್ಮ ಎಂಬವರ ಪುತ್ರ, ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಮೇಶ್ ಎಂಬತಾನೇ ಮರದಿಂದ ಬಿದ್ದು ಮೃತಪಟ್ಟ

ದುರ್ದೈವಿ.

(ಮೊದಲ ಪುಟದಿಂದ) ತಾ. ೨೬ ರಂದು ಶಾಲೆಗೆ ತೆರಳದೆ ಸ್ನೇಹಿತರೊಂದಿಗೆ ಮನೆಯ ಪಕ್ಕದಲ್ಲಿರುವ ನೇರಳೆ ಮರದಲ್ಲಿ ನೇರಳೆ ಹಣ್ಣನ್ನು ಕೀಳಲು ಮರವೇರುತ್ತಿದ್ದ ಸಂದರ್ಭ ಆಯ ತಪ್ಪಿ ಬಿದ್ದು ಕೊನೆಯುಸಿರೆಳೆದಿದ್ದಾನೆ.

ಘಟನಾ ಸ್ಥಳಕ್ಕೆ ಗೋಣಿಕೊಪ್ಪಲು ಠಾಣಾಧಿಕಾರಿ ಪ್ರದೀಪ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.