ಶ್ರೀಮAಗಲ, ಮಾ. ೨೭: ಕೋತೂರು - ಕಾನೂರು ಮಹಿಳಾ ಮಂಡಲದಲ್ಲಿ ಮಂಡಲದ ಗೋಲ್ಡ್ ತಂಡದಿAದ ಅದ್ದೂರಿಯಾಗಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಾನಸಿಕ ತಜ್ಞೆ ಡಾ. ಕಂಗAಡ ಸಿಂಧೂರ ಅಯ್ಯಪ್ಪ ಮಾತನಾಡಿ, ಹೆಣ್ಣಿಗೆ ಸಮಾನತೆ ಹಕ್ಕು ಹಾಗೂ ಸಬಲೀಕರಣ ಮಹತ್ವ ಹೆಣ್ಣಿನ ಮಾನಸಿಕ ತುಮಳಗಳು, ಭಯವನ್ನು ನಿಯಂತ್ರಿಸುವ ವಿಧಾನಗಳು, ಸದಾ ಕ್ರಿಯಾಶೀಲರಾಗಿ ಇರಬೇಕಾದ ಮಹತ್ವ ಹಾಗೂ ಅಮ್ಮಂದಿರು ಮಕ್ಕಳನ್ನು ಮಾನಸಿಕವಾಗಿ ಸ್ವಸ್ಥರನ್ನಾಗಿಸಬೇಕಾದ ಅನಿವಾರ್ಯತೆಯನ್ನು ಸಭೆಯಲ್ಲಿ ತಿಳಿಸಿದರು.
ಮಹಿಳಾ ಮಂಡಲದ ಅಧ್ಯಕ್ಷೆ ಮಾಯಮ್ಮ ಬೋಪಯ್ಯ ಮಾತನಾಡಿ, ಹೆಣ್ಣಿನ ಮಹತ್ವ ಮತ್ತು ದೇಶದ ಮಾದರಿ ಮಹಿಳೆಯರನ್ನು ಸ್ಮರಿಸಿ ಅವರ ಸಾಧನೆಯನ್ನು ನೆನೆದು ಸಾರುವ ದಿನ ಇಂದು ಎಂದು ತಿಳಿಸಿದರು. ಹೆಣ್ಣಾಗಿ ಹುಟ್ಟಿರುವುದು ನಮ್ಮ ಅದೃಷ್ಟ ಎಂದು ಅವರು ಅಭಿಪ್ರಾಯಪಟ್ಟರು.
ಮಂಡಲದ ಉಮಾ ಕೃಪಾ ತಂಡದವರು ಪ್ರಾರ್ಥಿಸಿದರು. ಮಂಡಲದ ಕಾರ್ಯದರ್ಶಿ ನವೀನ ಮುತ್ತಪ್ಪ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಬಿಂದು ಪೂಣಚ್ಚ ಅತಿಥಿ ಪರಿಚಯ ಹಾಗೂ ಸರ್ವರನ್ನು ಸ್ವಾಗತಿಸಿದರು. ತಂಡದ ಸದಸ್ಯರು ನಡೆಸಿಕೊಟ್ಟ ನೃತ್ಯ ರೂಪಕಗಳು, ಹಾಸ್ಯ ಪ್ರಹಸನ ಹಾಗೂ ಆಟದ ಸ್ಪರ್ಧೆಗಳು ಎಲ್ಲರ ಗಮನ ಸೆಳೆಯಿತು. ಉಮಾಕೃಪಾ ಸರ್ವರನ್ನು ವಂದಿಸಿದರು. ಮಂಡಲದ ಸದಸ್ಯರಿಗೆ ಉಚಿತ ಕೊಡವ ಚಲನಚಿತ್ರ ಪ್ರದರ್ಶನ ವನ್ನು ಏರ್ಪಡಿಸಲಾಗಿತ್ತು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.