ಮಡಿಕೇರಿ, ಮಾ. ೨೭: ಚೆಟ್ಟಳ್ಳಿ ಕಾಫಿ ಬೋರ್ಡ್ನಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಾಲಯದ ೨೫ ನೇ ವರ್ಷದ ಬೆಳ್ಳಿ ಮಹೋತ್ಸವ ಮತ್ತು ದೇವಾಲಯ ನವೀಕರಣ ಅಷ್ಟಬಂಧ ಬ್ರಹ್ಮ ಕಲಶಾಭಿಷೇಕ ಕಾರ್ಯಕ್ರಮಗಳು ತಾ. ೨೯ ಮತ್ತು ೩೦ ರಂದು ನೆರವೇರಲಿದೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ಅಪ್ಪುಕುಟ್ಟನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾ. ೨೯ ಮತ್ತು ೩೦ ರಂದು ಎರಡು ದಿನಗಳ ಕಾಲ ಕೇರಳದ ಬ್ರಹ್ಮಶ್ರೀ ವೇದಮೂರ್ತಿ ಶಿವಸುಬ್ರಮಣ್ಯ ಭಟ್ಟ ಶುಳುವಾಲಮೂಲೆ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಲಿದೆ. ತಾ. ೨೯ ರಂದು ಬೆಳಿಗ್ಗೆ ೯ ಗಂಟೆಗೆ ಸಪ್ತಶುದ್ದಿ ಪುಣ್ಯಕ್ಷದೇವತಾ ಪ್ರಾರ್ಥನೆ, ಆಚಾರ್ಯವರಣ, ಪ್ರಸಾದಶುದ್ಧಿ, ಅನುಜ್ಞ ಕಳಶ. ಕಳಶ ಪ್ರತಿಷ್ಟೆ, ವೇದಪಾರಾಯಾಣ ನಡೆಯಲಿದ್ದು, ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುತ್ತದೆ. ಸಂಜೆ ೫ ಗಂಟೆಗೆ ಶ್ರೀ ಲಕ್ಷಿö್ಮಸಹಿತ ಶ್ರೀ ಸತ್ಯನಾರಾಯಣ ಪೂಜೆ, ರಾಕ್ತೋಘ್ನ ಹವನ, ವಾಸ್ತು ಪೂಜೆ, ವಾಸ್ತು ಬಲಿ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

ತಾ. ೩೦ ರಂದು ಬೆಳಿಗ್ಗೆ ೬ ಗಂಟೆಯಿAದ ೪೮ ತೆಂಗಿನಕಾಯಿ ಅಷ್ಟದ್ರವ್ಯದಿಂದ ಗಣಪತಿ ಹವನ, ಗಣಪತಿ ಅಥರ್ವ ಶೀರ್ಷ ಹವನ, ಬಿಂಬ ಸಾನಿಧ್ಯ ಹವನ, ಬೆಳಿಗ್ಗೆ ೯ ಗಂಟೆಗೆ ಪೂರ್ಣಾಹುತಿ, ೯.೪೦ ಗಂಟೆ ನಂತರ ವೃಷಭ ಲಗ್ನದಲ್ಲಿ ಗಣಪತಿಗೆ ಕಲಶಾಭಿಷೇಕ, ನಂತರ ನಾಗದೇವರಿಗೆ ಕಳಶಾಭಿಷೇಕ, ಕಷೋಕ್ತ ಪೂಜೆ, ಮಂಗಳಾರತಿ, ಪ್ರಸಾದ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಅಪ್ಪುಕುಟ್ಟನ್ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಎಸ್. ಮಹಾದೇವ, ಉಪಾಧ್ಯಕ್ಷ ಎಂ.ಎಸ್. ದಿಲೀಪ್‌ಕುಮಾರ್ ಉಪಸ್ಥಿತರಿದ್ದರು.