ಮಡಿಕೇರಿ, ಮಾ. ೨೭: ೨೦೨೪-೨೫ನೇ ಸಾಲಿಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಕ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ, ಇಲ್ಲಿಗೆ ಸ್ಟಾಫ್ ನರ್ಸ್ (೧ ಹುದ್ದೆ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. (ವಸತಿ ಸೌಲಭ್ಯ ಒದಗಿಸಲಾಗುವುದು).
ವೇತನ ಶ್ರೇಣಿ ರೂ. ೨೨,೬೬೨, ವಿದ್ಯಾರ್ಹತೆ ಜಿ.ಎನ್.ಎಂ. (ಜೆಎನ್‌ಎಂ), ಬಿ.ಎಸ್ಸಿ (ನರ್ಸಿಂಗ್) ಆಗಿರಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಎಫ್.ಎಂ.ಸಿ. ಕಾಲೇಜು ಹತ್ತಿರ, ಮಡಿಕೇರಿ, ಕಚೇರಿ ದೂರವಾಣಿ ಸಂಖ್ಯೆ: ೦೮೨೭೨-೨೨೫೫೨೮, ೯೬೮೬೧೩೮೬೮೮, ೯೬೩೨೪೦೪೩೧೪ (ವಾಟ್ಸ್ಆಫ್) ಹಾಗೂ ಪ್ರಾಂಶುಪಾಲರು, ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಖ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲೂಕು, ದೂರವಾಣಿ ಸಂಖ್ಯೆ: ೭೬೭೬೪೭೩೭೬೭ ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್. ಕೃಷ್ಣಮೂರ್ತಿ ತಿಳಿಸಿದ್ದಾರೆ.