ಮಡಿಕೇರಿ, ಮಾ. ೨೭: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಯುವಕ ದುರ್ಮರಣಕ್ಕೀಡಾದ ಘಟನೆ ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ಕಾಟಕೇರಿಯಲ್ಲಿ ನಡೆದಿದೆ.

ಮೂಲತಃ ಕಕ್ಕಬೆ ಗ್ರಾಮದ ನಿವಾಸಿ, ಪ್ರಸ್ತುತ ಮಡಿಕೇರಿಯ ಅಶೋಕಪುರದಲ್ಲಿ ನೆಲೆಸಿದ್ದ ದಿ. ಬೆಳ್ಯಪ್ಪ, ಅರುಣಿ ದಂಪತಿಯ ಪುತ್ರ ಶರತ್ (೨೨) ಮೃತ ಯುವಕ.

ಮದೆನಾಡು ಬಳಿ ಕಟ್ಟಡ ಕೆಲಸಕ್ಕೆಂದು ತೆರಳಿ ತನ್ನ ಬೈಕ್‌ನಲ್ಲಿ ಮಧ್ಯಾಹ್ನ ಮಡಿಕೇರಿಗೆ ಹಿಂದಿರುಗುವ

ಸಂದರ್ಭ ಮಂಗಳೂರು

ಅಪಘಾತದಲ್ಲಿ ಯುವಕ ದುರ್ಮರಣ

(ಮೊದಲ ಪುಟದಿಂದ) ಕಡೆ ತೆರಳುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದ ಶರತ್ ತಲೆಗೆ ಲಾರಿ ಚಕ್ರ ಹರಿದ ಹಿನ್ನೆಲೆ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾನೆ.

ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ತಾಯಿ, ಮೂವರು ಸಹೋದರರನ್ನು ಅಗಲಿದ್ದಾನೆ.