ಮಡಿಕೇರಿ, ಮಾ. ೨೭: ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಕೊಡಗು ಬೃಹತ್ ಕಾಮಗಾರಿ ವಿಭಾಗ, ಕ.ವಿ.ಪ್ರಸ.ನಿ. ಮೈಸೂರು ಅವರು ಸೋಮವಾರಪೇಟೆ ತಾಲೂಕು ಮಾದಾಪುರ (ಜಂಬೂರು) ಗ್ರಾಮದಲ್ಲಿ ನೂತನವಾಗಿ ಟಘಿ೮ಒಗಿಂ ೬೬/೧೧ ಕೆ.ವಿ. ವಿದ್ಯುತ್ ಉಪ ಕೇಂದ್ರವನ್ನು ನಿರ್ಮಾಣ ಮಾಡಲು ಸುಂಟಿಕೊಪ್ಪ-ಸೋಮವಾರಪೇಟೆ ವಿದ್ಯುತ್ ಮಾರ್ಗದಿಂದ ೬೬ ಕೆ.ವಿ. ವಿದ್ಯುತ್ ಮಾರ್ಗ ಹಾದುಹೋಗುವ ಜಮೀನುಗಳಲ್ಲಿ ಅಡಚಣೆಯಾಗಿರುವ ಗಟ್ಟಿ ಜಾತಿಯ ಬೀಟೆ ಮತ್ತು ಇತರೆ ಜಾತಿಯ ೬೪ ಮರಗಳನ್ನು ಇಲಾಖಾ ವತಿಯಿಂದ ಕೆಪಿಟಿಸಿಎಲ್ ವೆಚ್ಚ ಭರಿಸುವ ಷರತ್ತಿಗೊಳಪಟ್ಟು ಸರ್ಕಾರಿ ಮರ ಸಂಗ್ರಹಾಲಯ, ಆನೆಕಾಡಿಗೆ ಸಾಗಿಸಲು ಹಾಗೂ ೨೫ ಮೆದು ಜಾತಿಯ ಮರಗಳನ್ನು ಸ್ಥಳದಲ್ಲಿಯೇ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಕೋರಿರುತ್ತಾರೆ.

ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಏಪ್ರಿಲ್ ೧೦ ರೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರಿಗೆ ಸಲ್ಲಿಸಬೇಕಾಗಿ ತಿಳಿಸಿದೆ. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.