ಮೂರ್ನಾಡು, ಮಾ ೨೭: ಕೊಡಗು ಜಿಲ್ಲೆಯ ಐರಿ ಜನಾಂಗದ ನಡುವಿನ ೧೧ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಈ ಬಾರಿ ಮೂರ್ನಾಡು ಹೋಬಳಿ, ಹೊದ್ದೂರು ಗ್ರಾಮದ ಅಮ್ಮಣಂಡ ಕುಟುಂಬಸ್ಥರು ಆತಿಥ್ಯ ವಹಿಸಲಿದ್ದು, ಏಪ್ರಿಲ್ ೨೫, ೨೬ ಮತ್ತು ೨೭ ರಂದು ಮೂರ್ನಾಡುವಿನ ದಿ. ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸಂಬAಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅಮ್ಮಣಂಡ ಕಪ್ ಕ್ರಿಕೆಟ್ ಕ್ರೀಡಾಕೂಟದ ಸಂಚಾಲಕ ಅಮ್ಮಣಂಡ ದೀಪಕ್ ಮತ್ತು ಅಮ್ಮಣಂಡ ನಿಖಿಲ್, ಕ್ರಿಕೆಟ್ ಸ್ಪರ್ಧೆಯ ಜೊತೆಗೆ ಮಹಿಳೆಯರಿಗೆ ಹಗ್ಗಜಗ್ಗಾಟ, ಹಿರಿಯರಿಗೆ ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಪಂದ್ಯಾವಳಿಯಲ್ಲಿ ೨೦ಕ್ಕೂ ಅಧಿಕ ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇದೆ. ಐರಿ ಜನಾಂಗದಲ್ಲಿ ೮೦ಕ್ಕೂ ಹೆಚ್ಚು ಮನೆತನಗಳಿದ್ದು, ಎಲ್ಲಾ ಕುಟುಂಬಗಳು ಕ್ರಿಕೆಟ್ ಹಾಗೂ ಹಗ್ಗಜಗ್ಗಾಟದಲ್ಲಿ ಪಾಲ್ಗೊಳ್ಳುವ ಮೂಲಕ ಜನಾಂಗ ಬಾಂಧವರು ಪರಸ್ಪರ ಅರಿಯಲು ನೆರವಾಗುವಂತೆ ಕರೆ ನೀಡಿದ್ದಾರೆ. ಕ್ರೀಡಾ ಹಬ್ಬದ ಸಂದರ್ಭ ಐರಿ ಜನಾಂಗದಲ್ಲಿ ಆಯ್ದ ೧೦ ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಗುತ್ತದೆ.
ಏ. ೨೫ ರಂದು ನಡೆಯುವ ಸಮಾರಂಭವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಸೋಮವಾರಪೇಟೆ ವಲಯದ ಎಸಿಎಫ್ ಐರೀರ ಗೋಪಾಲ್, ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಅಮ್ಮಣಂಡ ಕುಟುಂಬದ ಪಟ್ಟೆದಾರ ಸುಬ್ಬಯ್ಯ, ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಪೊಲೀಸ್ ಇಲಾಖೆಯ ನಿವೃತ್ತ ಎ.ಎಸ್.ಐ. ಐಮಾಲಂಡ ಬಿದ್ದಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಏ. ೨೭ ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ಚಿಕ್ಕಮಗಳೂರು ಎ.ಸಿ.ಎಫ್. ಮಾಲೆರ ಚರಣ್, ವೀರಾಜಪೇಟೆ ಶಿರಸ್ತೇದಾರ್ ಅಂಜಪAಡ ಪ್ರಕಾಶ್, ರೈಲ್ವೇ ಇಲಾಖೆಯ ಹಿರಿಯ ಅಭಿಯಂತರ ಅಪ್ಪಚ್ಚಂಡ ಸುರೇಶ್, ಮಾಜಿ ಸೈನಿಕ ಬಬ್ಬೀರ ತಿಮ್ಮಯ್ಯ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಕ್ರೀಡಾಕೂಟದಲ್ಲಿ ವಿಜೇತರಾಗುವ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಕ್ರಿಕೆಟ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳು ಏಪ್ರಿಲ್ ೧೫ ರೊಳಗೆ ಹೆಸರು ನೋಂದಾಯಿಸಿಕೊಳ್ಳುವAತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ೯೧೪೧೨೯೨೧೫೫, ೭೩೪೯೦೬೩೬೮೮ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಲಾಗಿದೆ.