ಪೆರಾಜೆ, ಮಾ. ೨೭: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಛಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಆರಂಭಗೊAಡಿದ್ದು, ಏ.೧೦ರವರೆಗೆ ನಡೆಯಲಿದೆ. ಇಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು.

ತಾ.೨೮ರ ಮಧ್ಯಾಹ್ನ ೧೨ ರಿಂದ ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ೮ ಗಂಟೆಯಿAದ ತುಳು ಕೋಲ ೨ರ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು ನಡೆಯಲಿದೆ. ತಾ.೨೯ ರಂದು ಮಧ್ಯಾಹ್ನ ಗಂಟೆ ೧೨ ರಿಂದ ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ ೬-೩೦ ರಿಂದ ಪಳ್ಳಿಯಾರ ಬಾಗಿಲು ತೆರೆಯುವುದು, ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು ೨ ಮತ್ತು ಅವುಗಳ ತಿರುವಪ್ಪಗಳು ೨ ನಡೆಯಲಿದೆ.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೆಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜ ಪ್ರಸಾದ ಅಮಚೂರು, ತಕ್ಕ ಮುಖ್ಯಸ್ಥರು, ಆಡಳಿತ ಸಮಿತಿಯ ಸದಸ್ಯರು ಸೇರಿದಂತೆ ಭಕ್ತರು ಹಾಜರಿದ್ದರು.