ಪೊನ್ನಂಪೇಟೆ, ಮಾ. ೨೭: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ೧೯೭೯ನೇ ಸಾಲಿನ ಬಿಎ ವಿಭಾಗದ ವಿದ್ಯಾರ್ಥಿಗಳ ೫ನೇ ವರ್ಷದ ಸ್ನೇಹ ಸಮ್ಮಿಲನ ಸಂತೋಷಕೂಟ ಕಾರ್ಯಕ್ರಮ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಪಳಂಗAಡ ವಾಣಿ ಚಂಗಪ್ಪ, ಗುಮ್ಮಟೀರ ಗಂಗಮ್ಮ, ಬೇಬಿ ರೈ ಮತ್ತು ದೀಪಾ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸದಸ್ಯರು ತಮ್ಮ ಕಾಲೇಜು ದಿನಗಳ ಸಹಪಾಠಿಗಳನ್ನು ಕಂಡು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಖುಷಿಪಟ್ಟರು.

ಈ ಸಂದರ್ಭ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಿಸ್ಸಿಂಗ್ ದಿ ನಂಬರ್ ಸ್ಪರ್ಧೆಯಲ್ಲಿ ತಾತಂಡ ಗೀತಾ ಪೊನ್ನಪ್ಪ ಪ್ರಥಮ, ಪ್ರೊ. ತಿರುನೆಲ್ಲಿಮಾಡ ಎಂ. ದೇವಯ್ಯ ದ್ವಿತೀಯ ಸ್ಥಾನ ಪಡೆದುಕೊಂಡರು. ಬಾಂಬಿAಗ್ ದ ಸಿಟಿ ಸ್ಪರ್ಧೆಯಲ್ಲಿ ಚೇಂದ್ರಿಮಾಡ ಹರೀಶ್ ಅಪ್ಪಯ್ಯ ಪ್ರಥಮ, ಚಿರಿಯಪಂಡ ಲೋಹಿತ್ ದ್ವಿತೀಯ, ಪಾಸಿಂಗ್ ದಿ ಬಾಲ್ ಸ್ಪರ್ಧೆಯಲ್ಲಿ ಪಳಂಗಡ ವಾಣಿ ಚಂಗಪ್ಪ ಪ್ರಥಮ, ಅಮ್ಮಾಟಂಡ ರತಿ ಪ್ರಸಾದ್ ದ್ವಿತೀಯ ಸ್ಥಾನ ಪಡೆದು ಕೊಂಡರು.

ಇದೇ ಸಂದರ್ಭ ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಅಕಾಡಮಿ ವತಿಯಿಂದ ನಡೆದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದ ತಮ್ಮ ಸಹಪಾಠಿ ಪಳಂಗAಡ ವಾಣಿ ಚಂಗಪ್ಪ ಅವರನ್ನು ಸನ್ಮಾನಿಸಿದರು.

ನಾಮೆರ ರವಿ ದೇವಯ್ಯ, ಚೋನಿರ ದಿನಕರ್ ಮಾದಪ್ಪ ಅವರು ತಮ್ಮ ಸಂಘ ನಡೆದುಬಂದ ದಾರಿ ಮತ್ತು ಮುಂದಿನ ದಿನಗಳಲ್ಲಿ ಸಂಘವನ್ನು ಯಾವರೀತಿ ಮುನ್ನಡೆಸಿಕೊಂಡು ಹೋಗಬೇಕು ಎಂಬ ಬಗ್ಗೆ ಸಲಹೆ ಸೂಚನೆ ನೀಡಿದರು.

ಇದೇ ಸಂದರ್ಭ ತಾವು ವಿದ್ಯೆ ಕಲಿತ ಕಾವೇರಿ ಕಾಲೇಜಿಗೆ ಕೊಡುಗೆ ನೀಡುವ ಬಗ್ಗೆ ಚಿಂತನೆ ನಡೆಸಿದ ಸದಸ್ಯರು ಗೋಣಿಕೊಪ್ಪಲು ಕಾವೇರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಕಟ್ಟಡ ನಿಧಿಗೆ ಮುಂದಿನ ದಿನಗಳಲ್ಲಿ ೧೯೭೯ ನೇ ವರ್ಷದ ಬಿ ಎ ಬ್ಯಾಚ್‌ನ ಎಲ್ಲಾ ಸದಸ್ಯರು ಸೇರಿ ರೂ. ೩ ಲಕ್ಷ ಹಣ ನೀಡುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸಲು ತೀರ್ಮಾನಿಸಲಾಯಿತು.

ಸಂಜೆ ನಡೆದ ಮನರಂಜನೆ ಕಾರ್ಯಕ್ರಮದಲ್ಲಿ ಕೊಟ್ರಮಾಡ ಸಾವಿತ್ರಿ, ಪಳಂಗAಡ ವಾಣಿಚಂಗಪ್ಪ, ಕೊಡವ, ಕನ್ನಡ, ಹಿಂದಿ ಹಾಡು ಹಾಡಿದರು. ಕಳ್ಳಿಚಂಡ ವಿಜು ಕಾವೇರಮ್ಮ ಸ್ವರಚಿತ ಕವನ ವಾಚಿಸಿದರು.

ತಾತಂಡ ಗೀತಾ ಮೊಣ್ಣಪ್ಪ, ರವಿ ದೇವಯ್ಯ ತಾಂಬೂಲ ಆಟ ನಡೆಸಿಕೊಟ್ಟರು. ಮಧು ಕುಶಾಲಪ್ಪ ನಗೆಹನಿ ಹಾಗೂ ರಸ ಪ್ರಶ್ನೆ ನಡೆಸಿಕೊಟ್ಟು, ವಾರ್ಷಿಕ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಲ್ಲಚಂಡ ಮೀರಾ, ಬೇಬಿ ರೈ ಮತ್ತು ದೀಪ ಬಹುಮಾನ ವಿತರಿಸಿದರು. ಕೊಟ್ರಮಾಡ ಸಾವಿತ್ರಿ ಪ್ರಾರ್ಥಿಸಿ, ಬೊಳ್ಳಂಡ ಸುಶೀಲ ಸ್ವಾಗತಿಸಿ, ತಿರುನೆಲ್ಲಿಮಾಡ ದೇವಯ್ಯ ವಂದಿಸಿದರು.