ಮಡಿಕೇರಿ, ಮಾ. ೨೭: ೨೫ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆ ಅಂಗವಾಗಿ ಸಂಚರಿಸುತ್ತಿರುವ ಕ್ರೀಡಾಜ್ಯೋತಿಗೆ ಇಂದು ಬಲ್ಲಮಾವಟಿ ಭಾಗದಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜಿಸಿದ ಕುಟುಂಬಗಳ ಐನ್‌ಮನೆಗೆ ತೆರಳಿ ಕ್ರೀಡಾಜ್ಯೋತಿಯನ್ನು ಶುಕ್ರವಾರ ಮಡಿಕೇರಿಗೆ ತರಲಾಗುತ್ತಿದ್ದು, ಅಪ್ಪಚೆಟ್ಟೋಳಂಡ ಕುಟುಂಬದವರು ಕ್ರೀಡಾಜ್ಯೋತಿಯನ್ನು ಸ್ವಾಗತಿಸಿ ಕೊಂಡರು. ಐನ್‌ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಯಶಸ್ಸಿಗೆ ಹಾರೈಸಿದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ಮಾತನಾಡಿ, ೨೫ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಕೊಡವ ಹಾಕಿ ಪಂದ್ಯಾಟದ ಅಂಗವಾಗಿ ವಿನೂತನ ರೀತಿಯಲ್ಲಿ ಒಲಂಪಿಕ್ ಜ್ಯೋತಿಯನ್ನು ಇದುವರೆಗೆ ೨೪ ಪಂದ್ಯಾಟಗಳನ್ನು ಆಯೋಜಿಸಿದ ಕುಟುಂಬಗಳ ಐನ್ ಮನೆಗೆ ತೆರಳಿ ಗುರುಕಾರೋಣರ ಆಶೀರ್ವಾದ ಪಡೆಯಲಾಗುತ್ತದೆ ಎಂದರು.

ಬಲ್ಲಮಾವಟಿ ಕೂಡು ರಸ್ತೆಯಲ್ಲಿ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್‌ನೊಂದಿಗೆ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮುದ್ದಂಡ ಹಾಕಿ ಟೂರ್ನಿಯ ಕ್ರೀಡಾಜ್ಯೋತಿಯನ್ನು ಸ್ವಾಗತಿಸಿ ಕೊಂಡರು.

ಈ ಸಂದರ್ಭ ಅಪ್ಪಚೆಟ್ಟೋಳಂಡ ಕುಟುಂಬದ ಅಧ್ಯಕ್ಷ ಮನು ಮುತ್ತಪ್ಪ, ಉಪಾಧ್ಯಕ್ಷ ರಾಜಾ ಭೀಮಯ್ಯ, ಖಜಾಂಜಿ ನವೀನ್, ಕಾರ್ಯದರ್ಶಿ ರೀನಾ ಪೂವಯ್ಯ, ಬಲ್ಲಮಾವಟಿ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಮೂವೇರ ನಾಣಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ನಾಲ್‌ನಾಡ್ ಹಾಕಿ ಕ್ಲಬ್‌ನÀ ಅಧ್ಯಕ್ಷ ಕರವಂಡ ಸುರೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಅಪ್ಪಚೆಟ್ಟೋಳಂಡ ಐನ್‌ಮನೆ ನಂತರ ನಾಪೋಕ್ಲು ಕುಲ್ಲೇಟಿರ ಐನ್‌ಮನೆ, ಬಿದ್ದಾಟಂಡ ಐನ್‌ಮನೆ, ಕೊಳಕೇರಿ ಕುಂಡ್ಯೋಳAಡ ಐನ್‌ಮನೆಗಳಲ್ಲಿ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಯಿತು. ನಂತರ ನಾಪೋಕ್ಲು ಪಟ್ಟಣದಲ್ಲಿ ಸಾಗಿ ಮುಕ್ಕೋಡ್ಲು ಶಾಂತೆಯAಡ ಕುಟುಂಬದ ಮನೆಗೆ ತೆರಳಿತು.

-ದುಗ್ಗಳ