ಸೋಮವಾರಪೇಟೆ : ಕಳೆದ ೮ ದಿನಗಳ ಹಿಂದೆ ಮತ್ತು ನಿನ್ನೆ ಸುರಿದ ಮಳೆಯಿಂದಾಗಿ ಕಾಫಿ ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿದೆ. ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸಾಧಾರಣ ಮಳೆಯಾಗಿದ್ದು, ಕೆಲವೆಡೆ ಕಾಫಿ ಹೂವಿಗೆ ವರದಾನವಾಗಿ ಪರಿಣಮಿಸಿದೆ.
ಇನ್ನು ಕಳೆದ ೮ ದಿನಗಳ ಹಿಂದೆ ಸೋಮವಾರಪೇಟೆಯ ಪಶ್ಚಿಮ ಭಾಗಕ್ಕೆ ಉತ್ತಮ ಮಳೆಯಾದ ಹಿನ್ನೆಲೆ, ಕಾಫಿ ತೋಟಗಳಲ್ಲಿ ಹೂ ಅರಳಿದ್ದವು. ಇದಾದ ನಂತರ ಬ್ಯಾಕಿಂಗ್ ಮಳೆಗಾಗಿ ಕೃಷಿಕರು ಆಗಸದತ್ತ ದೃಷ್ಟಿ ನೆಟ್ಟಿದ್ದರು.
ಆ ಸಮಯದಲ್ಲಿ ಉತ್ತರ ಭಾಗದ ಗ್ರಾಮಗಳಿಗೆ ಮಳೆಯಾಗದೇ ಬೆಳೆಗಾರರು ಚಿಂತಾಕ್ರಾAತರಾಗಿದ್ದರು. ಆದರೆ ನಿನ್ನೆ ಸಂಜೆ ಉತ್ತರ ಭಾಗದ ಹಲವು ಗ್ರಾಮಗಳಲ್ಲಿ ೮೦ ಸೆಂಟ್ಸ್ನಿAದ ೧ ಇಂಚಿನಷ್ಟು ಮಳೆ ಸುರಿದಿದ್ದು, ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ. ಇನ್ನೂ ಕೆಲವೆಡೆ ಮಳೆ ಅಬ್ಬರಕ್ಕೆ ಆಸ್ತಿಪಾಸ್ತಿ ನಷ್ಟವಾಗಿ ನೋವು ತರಿಸಿದೆ.
ಇದೀಗ ಎರಡು ಬಾರಿ ಉತ್ತಮ ಮಳೆ ಸುರಿದಿದ್ದು, ಬಹುತೇಕ ಕೃಷಿ ಪ್ರಧಾನ ಗ್ರಾಮಗಳಲ್ಲಿ ಅರೇಬಿಕಾ ಕಾಫಿ ಗಿಡಗಳಲ್ಲಿ ಹೂವುಗಳು ಸೆಟ್ ಆಗಿವೆ. ಉತ್ತಮ ಬ್ಯಾಕಿಂಗ್ ಮಳೆಯಾಗಿರುವುದರಿಂದ ಬೆಳೆಗಾರರು ಹರ್ಷಗೊಂಡಿದ್ದಾರೆ.ಪೆರಾಜೆ: ಕಳೆದ ಎರಡು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಗೆ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಹಾನಿ ಸಂಭವಿಸಿದೆ.
ಇಲ್ಲಿಯ ಗಡಿಗುಡ್ಡೆ, ಲಾಯರಡ್ಕ, ನಿಡ್ಯಮಲೆ, ಕುಂಡಾಡು, ಕುಂದಲ್ಪಾಡಿ, ಬಂಗಾರಕೋಡಿ, ಪೆರುಮುಂಡ, ಕರಂಟಡ್ಕ, ಅಮಚೂರು, ಮತ್ತಿತರ ಭಾಗಗಳಲ್ಲಿ ಗಾಳಿಯಿಂದ ಮರ ಮುರಿದು ಬಿದ್ದು, ಅಲ್ಲಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು, ವಿದ್ಯುತ್ ಲೈನ್, ಟಿ.ಸಿ, ಸೇರಿದಂತೆ ಅಂದಾಜು ೨೫ಕ್ಕಿಂತಲೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಮನೆಗಳಿಗೆ ಅಳವಡಿಸಿದ ಶೀಟ್, ಹಂಚು, ಜಾತ್ರೋತ್ಸವಕ್ಕೆ ಅಳವಡಿಸಿದ ಶಾಮಿಯಾನ ಪೆಂಡಾಲ್‌ಗಳು ಹಾರಿ ಹೋಗಿದ್ದು ಸುಮಾರು ೪ ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಡಿಕೆ, ತೆಂಗು, ಬಾಳೆ, ರಬ್ಬರ್ ಮರಗಳು ಗ್ರಾಮದ ಅಲ್ಲಲ್ಲಿ ಮುರಿದು ಅಧಿಕ ಕೃಷಿ ನಷ್ಟವಾಗಿದೆ.