ಮಡಿಕೇರಿ, ಮಾ. ೨೭: ಮೂರ್ನಾಡು ಸಮೀಪ ಕಿಗ್ಗಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ದೊಡ್ಡಮುಡಿ ತೆರೆ ಮಹೋತ್ಸವ ತಾ. ೩೧ ರಿಂದ ಆರಂಭಗೊಳ್ಳಲಿದೆ. ತಾ. ೩೧ ರಂದು ಕೊಟ್ಟಿ ಹಾಡುವುದು (ದೇವರ ಹಾಡುವುದು), ಏಪ್ರಿಲ್ ೧ ರಂದು ೩ ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಅಂಬಲಕ್ಕೆ ತಂದು ಶ್ರೀ ಚಾಮುಂಡೇಶ್ವರಿ ದರ್ಶನ ತದನಂತರ ಎತ್ತುಪೋರಾಟವಾಗಿ ಭಂಡಾರ ಸಮೇತವಾಗಿ ಬನಕ್ಕೆ ಹೋಗುವುದು, ಅಲ್ಲಿ ದೇವರ ದರ್ಶನ ಮತ್ತು ದೇವಕೋಲ ಕುಟ್ಟಿಚಾತ ತೆರೆ, ತೆಂಗಿನಕಾಯಿಗೆ ಗುಂಡು ಹೊಡೆದು ಕಟ್ಟು ಮುರಿಯುವುದು. ನಂತರ ಅಂದೇ ರಾತ್ರಿ ವಾಪಾಸ್ಸು ಬಂದು ಅಂಬಲದಲ್ಲಿ ೯ ಗಂಟೆಗೆ ಮೇಲೇರಿಗೆ ಬೆಂಕಿ ಕೊಡುವುದು ನಡೆಯಲಿದೆ. ನಂತರ ವಿಷ್ಟುಮೂರ್ತಿ ತೋತ, ಕುಟ್ಟಿಚಾತ, ಭೈರವ, ಭಗವತಿ, ನುಚ್ಚುಟ್ಟೆ ದೈವದ ಕೋಲಗಳು ನಡೆಯಲಿವೆ. ಏ. ೨ ರಂದು ಬೆಳಿಗ್ಗೆ ೬ ಗಂಟೆಗೆ ವಿಷ್ಣುಮೂರ್ತಿ ಮೇಲೇರಿ ನಂತರ ಕಿಗ್ಗಾಲು ಶ್ರೀ ಚಾಮುಂಡೇಶ್ವರಿ ದೊಡ್ಡಮುಡಿ ತೆರೆ ನಡೆಯಲಿದೆ.