ಕೊಡಗು ಅಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಹಚ್ಚ ಹಸಿರಿನ ಬನಕಾಡು, ಗಿರಿಕಂದರಗಳು. ಜುಳುಜುಳು ಹರಿವ, ಧುಮ್ಮುಕ್ಕುವ ಕೆರೆ-ತೋಡು, ಹೊಳೆ ಜಲಧಾರೆಗಳು. ಇದರ ಮಧ್ಯೆ ಕಾನನದಿ ಪಕ್ಷಿ-ಪ್ರಾಣಿಗಳ ಕಲರವ, ಕಂಪನ್ನು ಸೂಸಿ ಇಂಪನ್ನು ಪಸರಿಸುವ ವಿವಿಧ ಬಗೆಯ ಸೃಷ್ಟಿಯ ಗಿಡ-ಮರಗಳ ಹೂಬಳ್ಳಿಗಳು.
ಹಿಂದಿನ ಕಾಲಘಟ್ಟದ ಪ್ರಕಾರ ನಾಡು ಅಂದಾಗ ನೆಮ್ಮದಿಯ ಬದುಕನ್ನು ಸಾಗಿಸುವ ಸಂಸಾರ, ಅವರ ಬದುಕಿಗೆ ತಕ್ಕುದಾದ ಭೂಮಿ-ತೋಟಗಳು, ಒಂದಾಗಿ ನಕ್ಕು-ನಲಿದು ಜೀವಿಸುವ ಕೂಡು ಕುಟುಂಬದ ಐನ್‌ಮನೆಗಳು, ಮನೆಗಳ ರಕ್ಷಣೆಯಲ್ಲಿ ಆರಾಧಿಸುವ ಅಂಜಿಕೂಟ್ ಮೂರ್ತಿಗಳು, ನಾಡಿನ ರಕ್ಷಣೆಗಾಗಿ ನಾಡದೇವತೆಗಳು, ಅದಕ್ಕೊಪ್ಪುವ ರೀತಿಯ ಪದ್ಧತಿ-ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳು, ನಾಡಹಬ್ಬಗಳ ಆಚರಣೆಗಳು...ಹೀಗೆ ನಾಡು ತನ್ನದೆಯಾದ ವಿಭಿನ್ನ ರೀತಿಯಲ್ಲಿ ಮುನ್ನಡಿಯಿಡುತ್ತಾ ಸಾಗುತ್ತಿದೆ.
ಇವೆಲ್ಲವೂ ಪ್ರಕೃತಿಯ ಸೊಬಗಿಗೆ ಹಿಡಿದ ಕೈಗನ್ನಡಿಯಾದರೆ ಅಂದಿನ ಕಾಲದಲ್ಲಿ ಹೊರ ರಾಜ್ಯದಿಂದ ಸಂಸಾರದ ಕುಡಿಯೊಂದಿಗೆ ಆಗಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಅಲ್ಲಲ್ಲಿ ನೆಲೆ ನಿಂತು ಆರಾಧಿಸುತ್ತಿರುವ ನಾಡ ದೇವತೆಗಳು ಒಂದೇ-ಎರಡೇ..? ಅಪ್ಪನ ಸ್ಥಾನದಲ್ಲಿ ನೆಲನಿಂತು ಮಳೆರಾಯನೆಂದೇ ಖ್ಯಾತವೆತ್ತ ಇಗ್ಗುತ್ತಪ್ಪ ದೇವ. ಸದಾ ಹಸಿರಾಗಿ ಭೂತಾಯಿ ಕಂಗೊಳಿಸಲಿ, ನಾಡಿನ ಜನತೆ ಸುಖಮಯ ಬದುಕನ್ನು ಸಾಗಿಸಲಿಯೆಂದು ಗುಪ್ತಗಾಮಿನಿಯಾಗಿ ಹರಿದು, ನಾಡಿನೆಲ್ಲೆಡೆ ತನ್ನ ಛಾಪನ್ನು ಮೂಡಿಸುತ್ತಾ, ಹೊಳೆಯಾಗಿ ಹರಿದು, ಬಂಗಾಳಕೊಲ್ಲಿಯನ್ನು ಸೇರಿ ವಿಶ್ವವಿಖ್ಯಾತದೊಂದಿಗೆ, ಸಹಸ್ರಾರು ರೈತ ಕುಲಕ್ಕೆ ಅನ್ನವನ್ನಿಕ್ಕಿದ ಕರುಣಾಮಯಿ ಕಾವೇರಿಮಾತೆ. ಇವರೊಂದಿಗೆ ನಾಡಿನ ಜನತೆ ಸುಭಿಕ್ಷೆಯಿಂದ ಬದುಕಲಿ, ಯಾವುದೇ ಕಷ್ಟ-ಕಾರ್ಪಣ್ಯಗಳು ಬಾರದಿರಲಿ, ವರ್ಷಂಪ್ರತಿ ನಾಡಿಮಿಡಿತದ ನಾಗರೀಕರೊಂದಿಗೆ ನಾನಿರುತ್ತೇನೆ... ನನ್ನನ್ನು ನಂಬಿ... ಎಂದೂ ಬಿಸಿಲು-ಗಾಳಿ-ಮಳೆಯನ್ನು ಲೆಕ್ಕಿಸದೇ ನೆಲೆನಿಂತು ಆಶೀರ್ವಾದಿಸುವ ಹಲವಾರು ನಾಡ ದೇವತೆಗಳು...!
ಇದರ ಮಧ್ಯೆ ವರ್ಷವಿಡೀ ರಕ್ಷಿಸಿ, ಆಶೀರ್ವಾದಿಸುವ ನಾಡ ದೇವತೆಗಳನ್ನು ವರ್ಷಕ್ಕೊಮ್ಮೆ ಸಂಬAಧಿಸಿದ ಕುಟುಂಬಗಳು, ಭಯ-ಭಕ್ತಿಯಿಂದ ಪೂಜಿಸಿ, ದೈವಕೋಲಗಳನ್ನು ನಡೆಸುವುದರ ಮೂಲಕ ವರ್ಷಕ್ಕೊಮ್ಮೆ ನೈವೇದ್ಯ, ಆಹಾರ-ಹರಕೆಗಳನ್ನು ನೀಡಿ ಆಶೀರ್ವಾದ ಬೇಡುತ್ತಾರೆ. ಇಂತಹ ವರ್ಷದ ದೈವಕಾರ್ಯ ನಡೆಸುವಲ್ಲಿ, ನಾಡಿನ ಹಿತ ಕಾಪಾಡುವ ನಿಟ್ಟಿನಲ್ಲಿ, ನಾಡಕಟ್ಟು, ಊರುಕಟ್ಟು ಎಂಬ ಸಾಂಪ್ರದಾಯಿಕ ಕಟ್ಟಳೆಯೊಂದಿಗೆ ಒಂದಿಷ್ಟು ದಿನಗಳ ತನಕ ನೀತಿ ನಿಯಮ ನಿಬಂಧನೆಗಳನ್ನು ರೂಪಿಸಿ, ಪಾಲಿಸುವದನ್ನು ಅಲ್ಲಲ್ಲಿ ಕಾಣಬಹುದಾಗಿದೆ.
ಸಾಮಾನ್ಯವಾಗಿ ವರ್ಷದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಅಲ್ಲಲ್ಲಿ ನಾಡ ದೇವತೆಗಳ ಕೋಲ, ಮನೆದೇವತಾ ಕೋಲಗಳನ್ನು ಸಂಬAಧಿಸಿದವರು ನಡೆಸುವುದನ್ನು ನೋಡಬಹುದು. ಈ ಎರಡು ತಿಂಗಳು ದೇವತಾಕಾರ್ಯಕ್ಕೆ ಮೀಸಲಾಗಿದೆಯೆಂದು ಹೇಳಿದರೂ ತಪ್ಪಾಗಲಾರದು. ಇನ್ನುಳಿದ ತಿಂಗಳಲ್ಲಿ ರೈತಾಪಿವರ್ಗದವರು ಕಷ್ಟಪಟ್ಟು ಬೆವರು ಸುರಿಸಿ, ಮಳೆ-ಗಾಳಿ-ಬಿಸಿಲೆನ್ನದೆ ಮಣ್ಣಲ್ಲಿ ಮಣ್ಣಾಗಿ ಬೆರೆತು, ಭತ್ತ ಸೇರಿದಂತೆ, ಕಾಫಿಯೇತರ ಫಸಲನ್ನು ಗಳಿಸುವಲ್ಲಿ ಶಕ್ತರಾಗುತ್ತಾರೆ. ಬಳಿಕ ಒಂದಿಷ್ಟು ವಿಶ್ರಾಂತಿಯನ್ನು ಪಡೆಯುವು ದರ ಮೂಲಕ ನಾಡಿನ ಕಟ್ಟುಪಾಡುಗಳನ್ನು ಪಾಲಿಸುವ ದೈವತಾಕಾರ್ಯ ನಡೆಸುತ್ತಾರೆ.
ಹಿಂದಿನ ಕಾಲದಲ್ಲಿ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದ ಎಲ್ಲಾ ಸಂಪ್ರದಾಯ, ಕಟ್ಟುಪಾಡುಗಳಿಗೆ ತನ್ನದೇಯಾದ ಅರ್ಥವಿದೆ. ಅದರ ಫಲವಾಗಿ ನಾಡಿನಲ್ಲಿ ಸಂತಸ, ನೆಮ್ಮದಿ, ಸುಖ-ಶಾಂತಿ, ಭಯ-ಭಕ್ತಿ ತಾಂಡವವಾಡುತ್ತಿತ್ತು. ಇಂದು ನಾಡಿನಲ್ಲಿ ಕಟ್ಟು-ಪಾಡುಗಳು ಇರಲಿ, ಅದನ್ನು ನಡೆಸಲು ನಾಗರೀಕರೇ ಇಲ್ಲದಾಗಿದೆ. ಕಾರಣ ಇಂದಿನ ಮಕ್ಕಳು ಹೊರ ಪ್ರಪಂಚ, ಹೊರ ಜ್ಞಾನ, ಹೊರ ಬದುಕಿನ ಜಂಜಾಟಕ್ಕೆ ದಾಸರಾಗಿದ್ದಾರೆಯೇ ವಿನಹಃ ನಾಡಿನ ನಾಡಿಮಿಡಿತದ ಬಗ್ಗೆ ಕಿಂಚಿತ್ತೂ ಅರಿವು ಮೂಡಿಸುವಲ್ಲಿ ಶಕ್ತರಾಗಿಲ್ಲ. ಇದ್ದವರಲ್ಲಿ ಹೊಂದಾಣಿಕೆಯ ಮನೋಭಾವವಿಲ್ಲ. ನಾನು ನನ್ನದು ಎನ್ನುವ ದುಷ್ಟಭಾವನೆ, ಮೇಲು-ಕೀಳುಗಳೆಂಬ ಬೇಧ-ಭಾವ, ಆಸೆ-ಅಕ್ಕರೆಗಳಿಲ್ಲ, ಪ್ರೀತಿ-ವಿಶ್ವಾಸವಿಲ್ಲ, ಎಲ್ಲವೂ ನಗಣ್ಯ...ಅದಲ್ಲಿರಲಿ.
ಇಗ್ಗುತ್ತಪ್ಪ ದೇವರ ಕುಂಬ್ಯಾರ್ ಕಲಾಡ್ಚದ ಹಬ್ಬ ಕಟ್ಟು ಪ್ರಾರಂಭವಾದ ಬಳಿಕ ನಾಡಿನೆಲ್ಲೆಡೆ ಆಯಾ ದೇವತಾ ನೆಲೆಗಟ್ಟಿನಲ್ಲಿ ತಕ್ಕ-ಮುಖ್ಯಸ್ಥರು, ನಾಡಿನ ಜನತೆ ಸೇರಿ ನಮ್ಮೆ ಕಟ್ಟ್ (ಕಟ್ಟಳೆ) ಹಾಕುವ ಸಂಪ್ರದಾಯವಿದೆ. ಇದರ ಪ್ರಕಾರ ಮುಂದಿನ ೧೫-೨೦ ದಿವಸಗಳ ತನಕ ನಾಡಿನ ಹದ್ದೋಬಸ್ತಿಗೆ ಸಂಬAಧಿಸಿದAತೆ, ಗ್ರಾಮಸ್ಥರು ಯಾವುದೇ ಹಸಿಮರ-ಗಿಡಗಳನ್ನು ಕಡಿಯುವಂತಿಲ್ಲ. ಕೊಲ್ಲು, ಕೊಲೆ ಮುಂತಾದ ಹಿಂಸೆ ಮಾಡುವಂತಿಲ್ಲ; ರಕ್ತದ ಕಲೆಗಳು ನಾಡಿನಲ್ಲಿ, ಸಂಸಾರದಲ್ಲಿ ಜಿನುಗುವಂತಿಲ್ಲ, ಬೀಳುವಂತಿಲ್ಲ. ಕೆರೆ-ತೋಡು-ಹೊಳೆ ದಾಟು ವಂತಿಲ್ಲ, ಮದುವೆ-ನಾಮಕರಣ ದಂತಹ ಯಾವುದೇ ಶುಭಕಾರ್ಯಗಳನ್ನು ನಡೆಸುವಂತಿಲ್ಲ. ನಾಡನ್ನು ಬಿಟ್ಟು ಹೊರನಾಡು ನೆಂಟರಿಷ್ಟರ ಮನೆಯಲ್ಲಿ ತಂಗುವAತಿಲ್ಲ, ಒಲೆ ಯಲ್ಲಿ ಓಡು ಇಡುವುದಾಗಲಿ, ಸಾಸಿವೆ ಹುರಿಯುವುದಾಗಲಿ ಕೂಡದು, ದೋಸೆ ಮಾಡಬಾರದು, ಕೋಳಿ ಮೊಟ್ಟೆಯನ್ನು ಒಡೆಯ ಬಾರದು, ಹಲಸು-ಮಾವು ಇನ್ನಿತರ ಫಸಲನ್ನು ನೀಡುವ ಮಿಡಿಗಳನ್ನು ಕೊಯ್ಯಬಾರದು, ನಾಡಿನಲ್ಲಿ ಸಾವು ಸಂಭವಿಸಿದರೆ ಸುಡಬಾರದು, ಸಣ್ಣ ಮಕ್ಕಳನ್ನು ಮಣ್ಣು ಮಾಡುವ ರೀತಿ ಯಲ್ಲಿ ಕ್ರಿಯಾವಿಧಾನ ಮಾಡಬೇಕು, ಸತ್ತವರ ಕ್ರಿಯಾವಿಧಾನವನ್ನು ಹಬ್ಬ ಕಳೆದ ನಂತರ ನಡೆಸಬೇಕು, ಸಂಬAಧಿಸಿದ ಕುಟುಂಬ ದೇವತಾ ಕಾರ್ಯ ಗಳಲ್ಲಿ ಪಾಲ್ಗೊಳ್ಳುವಂತಿಲ್ಲ, ವಾದ್ಯ ನುಡಿಸುವಂತಿಲ್ಲ, ಗುಂಡು ಹಾರಿಸುವಂತಿಲ್ಲ, ನಾಡಿನಲ್ಲಿ ಒಬ್ಬರಿಗೊಬ್ಬರು ಕೆಟ್ಟ ಶಬ್ದದ ಮಾತು ಬಳಸು ವಂತಿಲ್ಲ, ರಜಶೋಲೆಯಾದ ಹೆಣ್ಣು ಮನೆಯ ಹೊರಗಡೆ ವಾಸಿಸತಕ್ಕದ್ದು, ಇಲ್ಲವಾದಲ್ಲಿ ನಾಡನ್ನು ಬಿಟ್ಟು ಪಕ್ಕದ ನಾಡಿಗೆ ತೆರಳಬೇಕಾಗಿತ್ತು. ಕೆಲವು ಕಡೆಗಳಲ್ಲಿ ತೆಂಗಿನಕಾಯಿ ಒಡೆಯುವಂತಿಲ್ಲ, ಮಧು-ಮಾಂಸದAತಹ ಮಾಂಸಹಾರಿ ಪದಾರ್ಥ ಸೇವಿಸುವಂತಿಲ್ಲ, ಕೇವಲ ಸಸ್ಯಹಾರಿ ಬಳಸಬೇಕು. ನಾಡಿನ ಹದ್ದು ಮೀರಿ ಪ್ರಯಾಣಿಸುವಂತಿಲ್ಲ. ಒಂದು ವೇಳೆ ತುರ್ತಾಗಿ ಬೆಳಿಗ್ಗೆ ಮನೆಯಿಂದ ಹೊರಗೋದವರು ಸಂಜೆ ಸೂರ್ಯ ಮುಳುಗಿದ ನಂತರ ಮನೆ ಹೊರಗಡೆ ಸ್ನಾನ ಮಾಡಿ ಒಳಗಡೆ ಸೇರಬೇಕಾಗಿತ್ತು. ಕಟ್ಟು ಪಾಲಿಸುವ ನಾಡಿನವರು ಹೊರ ನಾಡಿನ ಮನೆಯಲ್ಲಿ ತಂಗುವAತಿಲ್ಲ.
ಈ ರೀತಿಯಾದ ಹಲವಾರು ಕಟ್ಟುಪಾಡುಗಳ ಕಟ್ಟಳೆಗಳನ್ನು ಹಿರಿತಲೆಗಳು ನಡೆಸಿಕೊಂಡು, ಪಾಲಿಸಿಕೊಂಡು ಬರುತ್ತಿದ್ದರು. ಇದು ಕೇವಲ ದೇವತೆಗಳಿಗೆ ನೀಡುವ ಗೌರವ ಮಾತ್ರವಲ್ಲ, ಪರಿಸರದ ಸ್ವಚ್ಛತೆ, ಉಳಿವಿಗಾಗಿ ನಡೆಸಿಕೊಂಡು ಬರುವ ಸಂಪ್ರದಾಯವು ಕೂಡ ಹೌದು. ಅಂದಿನ ಕಾಲದ ನಾಡನ್ನು ಮತ್ತು ಇಂದಿನ ಕಾಲದ ನಾಡನ್ನು ಒಂದಿಷ್ಟು ಊಹಿಸಿನೋಡಿ. ಕತ್ತಲು ಕವಿದಿರುವ ಕಾಡುಗಳು ಅದರೊಳಗೆ ರಾಜಾರೋಷವಾಗಿ ನಲಿದಾಡುವ ಕಾಡುಪ್ರಾಣಿ-ಪಕ್ಷಿಗಳು ಇಂದು ಕಾಡುಗಳೆಲ್ಲಾ ಕಾಣೆಯಾಗಿ ಕೆಲವು ವ್ಯಕ್ತಿಗಳ ಬೊಕ್ಕ ತಲೆಯಂತೆ ಬಟ್ಟ ಬಯಲಾಗಿ ಬರಡಾಗಿದೆ.
ಕಾಡನ್ನು ಉಳಿಸಬೇಕು, ಹಸಿರನ್ನು ಬೆಳೆಸಬೇಕೆನ್ನುವ ನಿಟ್ಟಿನಲ್ಲಿ ಮಾತ್ರವಲ್ಲ, ಇಂದಿನ ನಾಗರೀಕತೆಗೆ ತಕ್ಕಂತೆ ಬಿಸಿಲಿನ ಧಗೆಯನ್ನು ತಡೆಯಲು, ಭೂತಾಯಿಯ ಒಡಲು ತಂಪಾಗಿರುವಲ್ಲಿ, ನೀರಿನ ಮಟ್ಟ ಇಳಿಕೆಯಾಗದಂತೆ ಈ ತಿಂಗಳಲ್ಲಿ ಮರ-ಗಿಡಗಳನ್ನು ಕಡಿಯಬಾರದೆಂಬ ಕಟ್ಟಳೆಯನ್ನು ಮಾಡಿರುತ್ತಾರಲ್ಲವೇ ? ಈ ಮಾಸದಲ್ಲಿ ಎಲ್ಲೆಲ್ಲೂ ಬಿಸಿಲಿನ ತಾಪ, ಕುಡಿಯುವ ನೀರಿಗೆ ಹಾಹಾಕಾರ, ಪರಿಸರದಲ್ಲಿ ಸಮತೋಲನ... ಪರಿಣಾಮ ಜೀವರಾಶಿಗಳ ಮಾರಣಹೋಮ...! ಅದಕ್ಕಾಗಿಯೇ ಈ ತಿಂಗಳಲ್ಲಿ ಮರ-ಗಿಡಗಳ ಹನನ ನಡೆಯದಂತೆ ಎಚ್ಚರಿಕೆಯ ಕಟ್ಟಳೆಯನ್ನು ವಿಧಿಸಲಾಗಿದೆ. ಪ್ರಾಣಿ ಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಲೆ ಮಾಡಬಾರದೆಂದು ಕಟ್ಟಳೆ ವಿಧಿಸಲಾಗಿದೆ, ಒಂದೆಡೆ ದೇವತೆಗಳ ಅವಭೃತಸ್ನಾನ ಕೆರೆ-ಹೊಳೆಯಲ್ಲಿ ನಡೆಯಬೇಕಾಗಿರುವುದರಿಂದ ಪರಿಶುದ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ನೀರಿಗೆ ಇಳಿಯಬಾರದೆಂದು ಹಿರಿಯರು ನಿಯಮ ಮಾಡಿರುತ್ತಾರೆ. ಗುಂಡಿನ ಹಾಗೂ ವಾದ್ಯದ ಸದ್ದಿನಿಂದ ನಾಡಿನಲ್ಲಿ ಮಣ್ಣು ಕಂಪಿಸುವುದರಿAದ ಭೂಕಂಪದAತಹ ಪ್ರಕೃತಿವಿಕೋಪ ಸಂಭವಿಸುವ ಸಂಭವವನ್ನು ಅರಿತ ಹಿರಿ ತಲೆಗಳು ಸದ್ದಾಗದಂತೆ ಎಚ್ಚರಿಕೆಯ ಗಂಟೆಯನ್ನು ಅಳವಡಿಸಿರುವುದು ಕಂಡುಬರುತ್ತಿದೆ.
ಇAದಿನ ಬಿರು ಬಿಸಿಲಿನಲ್ಲಿ ಶವ ಸಂಸ್ಕಾರ ಮಾಡುವ ಸಂದರ್ಭ ಸ್ಮಶಾನದ ಸುತ್ತ-ಮುತ್ತಲಿನ ತೋಟ-ಕಾಡುಗಳಲ್ಲಿನ ನೆಲ ಒಣಗಿ ಒಮ್ಮೆಲೆ ಶವದ ಮೇಲಿನ ಬೆಂಕಿ ಕಿಡಿ ಹಾರಿ ಹೊತ್ತಿಕೊಂಡಾಗ ಪರಿಸರ ನಾಶವಾಗು ತ್ತದೆ ಎಂಬ ಮುಂದಾಲೋಚನೆಯನ್ನರಿತ ಹಿರಿಯರು ಇಂತಹ ಕಟ್ಟಳೆ ಯನ್ನು ಶೂನ್ಯ ಮಾಸದಂತಹ ತಿಂಗಳಲ್ಲಿ ಅಳವಡಿಸಿದ್ದಾರೆ. ಮಕ್ಕಳಲ್ಲಿ ಭಯ-ಭಕ್ತಿ ಬರಲಿ, ಒಂದಿಷ್ಟು ದಿನ ಮಾಂಸಹಾರ ಸೇವನೆ ತೊರೆದು; ನಾಡಿನಲ್ಲಿ ಸಿಗತಕ್ಕಂತಹ ಸೊಪ್ಪು ಇನ್ನಿತರ ವಸ್ತುಗಳನ್ನು ಸಸ್ಯಹಾರಿಯಾಗಿ ಸೇವಿಸುವಲ್ಲಿ ಶಾರೀರಿಕ ಬದಲಾವಣೆಗೆ ಸಹಕಾರಿ ಯಾಗಲಿದೆಯೆಂದು ಕಟ್ಟಳೆಯನ್ನು ಮಾಡಿರುತ್ತಾರೆ.
ಶೂನ್ಯ ಮಾಸದಂತಹ ತಿಂಗಳಲ್ಲಿ ಬಿರು ಬಿಸಿಲನ್ನು ಕಡಿತಗೊಳಿಸಲು, ಶಮನಗೊಳಿಸಲು ಅಗ್ನಿ ದೇವರನ್ನು ಆರಾಧಿಸುವ, ಉರಿಬಿಸಿಲಿನ ಧಗೆಗೆ ಇಳೆಯ ಸುರಿಸಿ, ತಂಪೆರೆಗಿಸಿ ಜೀವರಾಶಿ ಗಳಿಗೆ ಮರುಜನ್ಮವನ್ನು ನೀಡೆಂದು ನಾಡಿನಾದ್ಯಂತಹ ನೆಲೆನಿಂತಿರುವ ದೇವತೆಗಳನ್ನು ಭಯ-ಭಕ್ತಿಯಿಂದ ಪೂಜಿಸುವ, ಸ್ತುತಿಸುವ ಕಾಲವಿದು. ಒಟ್ಟಿನಲ್ಲಿ ಶಬರಿಮಲಾ ವ್ರತಧಾರಿಗಳಂತೆ ನಾಡಿನ ಜನತೆ ಪರಿಶುದ್ಧತೆಯಲ್ಲಿ ಬದುಕನ್ನು ಸಾಗಿಸುವ ತಿಂಗಳಿದು. ನಾಡು ಸುಭೀಕ್ಷೆಯಾಗಲಿ, ಸಂಸಾರದಲ್ಲಿ ಅನ್ಯೋನ್ಯತೆ ಮೂಡಲಿ, ಸಂಬAಧಗಳಲ್ಲಿ ಬಾಂಧವ್ಯ ವೃದ್ಧಿಸಲಿ, ನಾಡು ಕಂಗೊಳಿಸಿ ದೇವಲೋಕ ಸೃಷ್ಟಿಯಾಗಲಿ...
- ಕೂಡಂಡ ಸಾಬ ಸುಬ್ರಮಣಿ,
ಹೊದ್ದೂರು., ಮೊ: ೯೮೪೫೫೭೧೨೯೦