ಪೊನ್ನAಪೇಟೆ, ಮಾ. ೨೭: ಏರುತ್ತಿರುವ ತಾಪಮಾನ ತಗ್ಗಿಸಬೇಕು. ಅಳಿಯುತ್ತಿರುವ ಜೀವ ವೈವಿಧ್ಯತೆ ಉಳಿಸಬೇಕು. ಇದಕ್ಕಾಗಿ ಕೇವಲ ವಿಜ್ಞಾನಿಗಳಷ್ಟೇ ಅಲ್ಲ ಕಾನೂನು ರೂಪಿಸುವ ಪ್ರಭುತ್ವ ಹಾಗೂ ಜಾರಿ ಮಾಡುವ ಅಧಿಕಾರ ವರ್ಗ ಕೂಡ ಗಂಭೀರವಾಗಿ ಚಿಂತನೆ ಮಾಡಲೇಬೇಕು ಎಂಬ ಒಕ್ಕೊರಲಿನ ಅಭಿಪ್ರಾಯ ಇಲ್ಲಿನ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ವ್ಯಕ್ತವಾಯಿತು.

ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆಯನ್ನು ತಗ್ಗಿಸುವಿಕೆ ಎಂಬ ವಿಷಯದ ಮೇಲಿನ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಹಲವು ತಜ್ಞರು ತಮ್ಮ ವಿಚಾರಗಳನ್ನು ಮಂಡಿಸಿ ಗಮನ ಸೆಳೆದರು. ಇಂದಿನ ಹವಾಮಾನ ಬದಲಾವಣೆಗೆ ಮನುಷ್ಯನೇ ಕಾರಣ. ಅಣೆಕಟ್ಟು ರಸ್ತೆ ಕಟ್ಟಡಗಳ ನಿರ್ಮಾಣಕ್ಕಾಗಿ ಅರಣ್ಯ ನಾಶವಾಗಿ ತಾಪಮಾನ ಏರಲು ಕಾರಣವಾಗಿದೆ. ಏರುತ್ತಿರುವ ತಾಪಮಾನವನ್ನು ತಗ್ಗಿಸದೆ ಇದ್ದರೆ, ಭೂಮಿ ಉಳಿಯಲು ಸಾಧ್ಯವಿಲ್ಲ ಎಂಬ ಆತಂಕ ಮತ್ತು ಸಲಹೆಗಳನ್ನು ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ. ಜಗದೀಶ್ ಅವರು ಪರಿಸರದಲ್ಲಿ ಅಮೂಲ್ಯವಾದ ಜೀವ ವೈವಿಧ್ಯತೆ ಇದೆ. ಜೀವಿಗಳಿಗೆ ಶೇಕಡಾ ೯೦ ರಷ್ಟು ಆಹಾರ ಅರಣ್ಯದಿಂದ ಲಭಿಸುತ್ತದೆ. ಶೇಕಡಾ ೮೦ ರಷ್ಟು ಔಷಧಿಗಳು ಲಭಿಸುವುದು ಕೂಡ ಅರಣ್ಯದಿಂದಲೇ. ಪರಿಸರ ತನ್ನದೇ ಆದ ವ್ಯವಸ್ಥೆ ರೂಪಿಸಿಕೊಂಡಿದೆ. ಇದನ್ನು ಹಾಳು ಮಾಡುವುದರಿಂದ ತಾಪಮಾನ ಏರಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಸರದಲ್ಲಿ ಜೇನು, ಪತಂಗ, ಪಕ್ಷಿಗಳು ಉಳಿಯಬೇಕು. ಇವು ನಿಜವಾದ ಜೀವ ವೈವಿಧ್ಯತೆಯನ್ನು ಕಾಪಾಡುತ್ತವೆ ಆಹಾರ ಬೆಳೆ ಅಥವಾ ಹಣ್ಣು ಹಂಪಲು ಸಮೃದ್ಧವಾಗಬೇಕಾದರೆ ಪರಾಗ ಸ್ಪರ್ಶ ಕ್ರಿಯೆ ನಡೆಯಬೇಕು. ಇವುಗಳು ಕಡಿಮೆಯಾದರೆ ಭೂಮಿಯ ಮೇಲಿನ ಎಲ್ಲಾ ಜೀವಸಂಕುಲಗಳಿಗೆ ಮೇವು ಮತ್ತು ಆಹಾರದ ಸಮಸ್ಯೆ ತಲೆದೋರಲಿದೆ ಎಂದು ಸಮಸ್ಯೆಯನ್ನು ತೆರೆದಿಟ್ಟರು. ಜೀವವೈವಿಧ್ಯತೆ ಸಂರಕ್ಷಿಸಲು ನಿಯಮ ರೂಪಿಸುವ ಪ್ರಭುತ್ವ, ಅನುಷ್ಠಾನಗೊಳಿಸುವ ಅಧಿಕಾರ ವರ್ಗ, ಸಂಶೋಧಕರು ಹಾಗೂ ವಿಜ್ಞಾನಿಗಳು ಗಂಭೀರವಾಗಿ ಗಮನಹರಿಸಬೇಕಿದೆ. ಸಂಶೋಧಕರು ಗ್ರಾಮಗಳಿಗೆ ತೆರಳಿ ಅಲ್ಲಿನ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅರಣ್ಯ ಸಂರಕ್ಷಣೆ ಮತ್ತು ಗಿಡ-ಮರಗಳ ರಕ್ಷಣೆಗೆ ಮುಂದಾಗಬೇಕಾದ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಹೆಮ್ಲಾ ನಾಯಕ್ ಮಾತನಾಡಿ, ಶೇಕಡಾ ೫೦ ರಷ್ಟು ಜೀವ ವೈವಿಧ್ಯತೆ ಪರಿಸರದಲ್ಲಿದೆ. ಹೆಚ್ಚುತ್ತಿರುವ ಸಂಖ್ಯೆಗೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಹೆಚ್ಚಿಸಲೇಬೇಕಾಗಿದೆ ಈ ಆಹಾರ ಸಿಗುವುದು ಭೂಮಿಯ ಮೇಲಾದ್ದರಿಂದ ಭೂಮಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಯು. ಟಿ. ವಿಜಯ್ ಆನ್‌ಲೈನ್‌ನಲ್ಲಿ ಪ್ರಬಂಧ ಮಂಡಿಸಿ ಬಂಡೀಪುರ , ನಾಗರಹೊಳೆ ಅರಣ್ಯದ ಅಂಚಿನಲ್ಲಿರುವ ಬುಡಕಟ್ಟು ಜನರನ್ನು ಬಳಸಿಕೊಂಡು ಸೀಗೆಕಾಯಿ, ಜೇನು ಉತ್ಪಾದನೆ ಕಡೆಗೆ ಗಮನ ಹರಿಸಬೇಕು. ಇದರಿಂದ ಬುಡಕಟ್ಟು ಜನರ ಆರ್ಥಿಕತೆಗೆ ಅನುಕೂಲವಾಗುವುದರ ಜೊತೆಗೆ, ಅರಣ್ಯದ ಪಾರಂಪರಿಕ ವಸ್ತುಗಳ ಉತ್ಪಾದನೆ ಕಡೆಗೂ ಒತ್ತು ನೀಡಿದಂತಾಗುತ್ತದೆ ಎಂದರು.

ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ. ಎಂ. ದೇವಗಿರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಪ್ರೊ. ಬಿ. ಎನ್. ಸತೀಶ್, ಪ್ರೊ. ಟಿ. ಎಸ್. ಹರೀಶ್, ಪ್ರೊ. ಬಿ. ಜಿ. ನಾಯಕ್, ಪ್ರೊ. ಕೆಂಚರೆಡ್ಡಿ, ಪ್ರೊ. ಜಡೇಗೌಡ, ಪ್ರೊ. ರಾಮಕೃಷ್ಣ ಹೆಗಡೆ ಭಾಗವಹಿಸಿದ್ದರು.