ಮಡಿಕೇರಿ, ಮಾ. ೨೭: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜ ಸಭಾಂಗಣದಲ್ಲಿ ಪೊಮ್ಮಕ್ಕಡ ನಾಳ್ ಕಾರ್ಯಕ್ರಮ ವಿಜೃಂಭಣೆಯಿAದ ಜರುಗಿತು.
ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರ ಅಧ್ಯಕ್ಷತೆ ಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ಸಾಧಕರಿಗೆ ಸನ್ಮಾನ, ವಿಚಾರ ಮಂಡನೆಯAತಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಜಿರೆಯ ಎಸ್.ಡಿ.ಎಂ.ಸಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಕಾಳೇಂಗಡ ಶಲೀಫ್, ಮೈಸೂರು ಯುವರಾಜ ಕಾಲೇಜಿನ ಪ್ರೊಫೇಸರ್ ಡಾ. ತೀತಿರ ರೇಖಾ ವಸಂತ್ ಅವರುಗಳು ವಿಚಾರ ಮಂಡನೆ ಮಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಧೈರ್ಯದಿಂದ ಮುನ್ನುಗ್ಗಿ ಸಾಧನೆ ಮಾಡಬೇಕು. ಸಂಸ್ಕೃತಿ, ಆಚಾರ, ವಿಚಾರಗಳನ್ನು ಪಾಲಿಸುವದರೊಂದಿಗೆ ಯುವ ಪೀಳಿಗೆಗೂ ಆಸಕ್ತಿ ಮೂಡಿಸುವಂತೆ ಸಲಹೆ ನೀಡಿದರು.
ಈ ಸಂದರ್ಭ ಸಾಧಕ ಮಹಿಳೆಯರಾದ ಸಣ್ಣುವಂಡ ಉಷಾ ಅಯ್ಯಣ್ಣ, ಶಿಕ್ಷಕಿ ಚೋಕಿರ ಅನಿತಾ ದೇವಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಪಾಡಂಡ ಸವಿತಾ ಕೀರ್ತನ್ ಅವರುಗಳನ್ನು ಸನ್ಮಾನಿಸಲಾಯಿತು. ಇವರೊಂದಿಗೆ ಇತರ ಕ್ಷೇತ್ರದಲ್ಲಿ ಸಾಧನೆ ತೋರಿದ ಬಾಲಕಿಯರಾದ ಮುಕ್ಕಾಟಿರ ದೇಚಮ್ಮ ಸುಬ್ರಮಣಿ, ಕನ್ನಂಡ ವರ್ಣ ಪೊನ್ನಪ್ಪ, ಅಚ್ಚಪಂಡ ಪರ್ಲಿನ್ ಉತ್ತಪ್ಪ, ಚೇನಂಡ ರಕ್ಷಾ ಮುತ್ತಮ್ಮ ಅವರುಗಳನ್ನು ಗೌರವಿಸಲಾಯಿತು.
ಸಾಧಕರ ಪರಿಚಯವನ್ನು ಪಾಲೆಯಡ ರೂಪ ಸುಬ್ಬಯ್ಯ, ಕಾಳೇಂಗಡ ಸಾವಿತ್ರಿ, ಚೊಟ್ಟಂಡ ದಿವ್ಯ ಪ್ರದೀಪ್, ಓಡಿಯಂಡ ಜಾನ್ಸಿ, ಬೊಪ್ಪಂಡ ಸರಳ ಕರುಂಬಯ್ಯ, ಪಟ್ಟಡ ಪ್ರೇಮ, ಕನ್ನಂಡ ಸುನೀತ ಮಾಡಿದರು. ವೇದಿಕೆಯಲ್ಲಿ ಕಲಿಯಂಡ ಸರಸ್ವತಿ, ಕಾರ್ಯದರ್ಶಿ ಕೂಪದಿರ ಜೂನಾ ವಿಜಯ, ಖಜಾಂಚಿ ಉಳ್ಳಿಯಡ ಸಚಿತ ನಂಜಪ್ಪ, ಕೊಡವ ಸಮಾಜ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ ಹಾಜರಿದ್ದರು.
ಪಾಲೆಯಡ ಕಾವ್ಯ ಪ್ರಾರ್ಥಿಸಿ, ಮುಕ್ಕಾಟಿರ ಪೊನ್ನಮ್ಮ ಸ್ವಾಗತಿಸಿ, ಚೋಕಿರ ಅನಿತಾ ನಿರೂಪಿಸಿದರು. ಸಾಂಸ್ಕೃತಿಕ ವರದಿಯನ್ನು ಮೂವೆರ ಸರಿತಾ ನೀಡಿದರೆ, ಚೆಟ್ರಂಡ ವಸಂತಿ ಪೂಣಚ್ಚ ವಂದಿಸಿದರು.