ಅಮ್ಮತ್ತಿ, ಮಾ. ೨೭: ಇಲ್ಲಿನ ನಿತ್ಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಸ್ಥಾನದ ೫೧ನೇ ವರ್ಷದ ತೆರೆ ಮಹೋತ್ಸವ ತಾ. ೨೯ ಮತ್ತು ೩೦ ರಂದು ವಿವಿಧ ದೇವರುಗಳ ತೆರೆಗಳೊಂದಿಗೆ ವಿಜೃಂಭಣೆಯಿAದ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಸಿ.ಕೆ. ರವಿ ತಿಳಿಸಿದ್ದಾರೆ.

ತಾ. ೨೯ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವ ಪ್ರಾರಂಭವಾಗುತ್ತದೆ. ೧೦ ಗಂಟೆಗೆ ಧ್ವಜಾರೋಹಣ ನಡೆಯಲಿದೆ.

ನಂತರ ಮುತ್ತಪ್ಪನ ಮಲೆ ಇಳಿಸುವುದು ಹಾಗೂ ವಿವಿಧ ದೇವರುಗಳ ವೆಳ್ಳಾಟಂ ನಡೆಯುತ್ತದೆ. ತಾ. ೩೦ ರಂದು ಪ್ರಾತಃಕಾಲ ೩ ಗಂಟೆಗೆ ಗುಳಿಗನ ತೆರೆ, ೪ ಗಂಟೆಗೆ ಕಂಡಕರ್ಣನ ತೆರೆ, ೫ ಗಂಟೆಗೆ ಮುತ್ತಪ್ಪ ತಿರುವಪ್ಪನ ತೆರೆ, ೬ ಗಂಟೆಗೆ ಶಾಸ್ತಪ್ಪನ ತೆರೆ, ೯ ಗಂಟೆಗೆ ಪೊಟ್ಟನ್ ತೆರೆ, ೧೦ ಗಂಟೆಗೆ ವಸೂರಿಮಾಲ ತೆರೆ, ಮಧ್ಯಾಹ್ನ ೧೨ ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ವಾರ್ಷಿಕೋತ್ಸವದ ಅಂಗವಾಗಿ ಅನ್ನಸಂತರ್ಪಣೆ ನಡೆಯಲಿದೆ.