ಐಗೂರು, ಮಾ. ೨೭: ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಮತ್ತು ಅಲ್ಪಸಂಖ್ಯಾತರ ವಿವಿಧ ಸಮುದಾಯಗಳ ಅಭಿವೃದ್ಧಿ ಯೋಜನೆ ಯಡಿಯಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿಗಾಗಿ ೨೦೨೩-೨೦೨೪ನೇ ಸಾಲಿನಲ್ಲಿ ರೂ. ೪೯ ಲಕ್ಷದ ೯೯ ಸಾವಿರ ಹಣ ಹರದೂರು ಗ್ರಾಮ ಪಂಚಾಯಿತಿಗೆ ಮಂಜೂರಾಗಿತ್ತು. ಮಂಜೂರಾದ ಹಣದಲ್ಲಿ ಅನುಷ್ಠಾನ ಏಜೆನ್ಸಿ ಕೆಆರ್‌ಐಡಿಎಲ್ ಇಲಾಖೆ ವತಿಯಿಂದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟಕನಳ್ಳಿಯ ಅಕ್ಬರ್ ಪಾಷಾ ಅವರ ಮನೆಯಿಂದ ಜಾಮಿಯಾ ಮಸೀದಿಯವರೆಗೆ ಕಾಂಕ್ರೀಟ್ ರಸ್ತೆ ಪೂರ್ಣಗೊಂಡಿದೆ.
ಅನುದಾನಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸಹಕಾರ ನೀಡಿದ್ದಾರೆ ಎಂದು ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಲೀಂ ಹೊಸತೋಟ, ವಾರ್ಡ್ ಸದಸ್ಯರಾದ ಉಷಾ ಕುಂಬಾರಬಾಣೆ, ಸರೋಜಾ ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.