ಗುಡ್ಡೆಹೊಸೂರು, ಮಾ. ೨೮: ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಮೂರು ದಿನಗಳ ಕಾಲ ಕಳಿಯಾಟ ಕಾರ್ಯಕ್ರಮ ಸಾವಿರಾರು ಮಂದಿ ದೈವಭಕ್ತರ ಸಮ್ಮುಖದಲ್ಲಿ ನಡೆಯಿತು.
ಶ್ರೀ ವಿಷ್ಣುಮೂರ್ತಿ, ಶ್ರೀ ಧರ್ಮದೈವ, ಪಾಷಾಣಮೂರ್ತಿ, ರಕ್ತೇಶ್ವರಿ ದೈವ, ಪಂಜುರ್ಳಿ ದೈವ, ಪೋಟ್ಟ ದೈವ, ಗುರುಕಾರ್ಣೋ ದೈವ ಗಳ ಕೋಲ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ಸೇರಿದಂತೆ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಹಲವು ಗ್ರಾಮಗಳಿಂದ ಜಾತಿ ಹಾಗೂ ಧರ್ಮಗಳ ಭೇದವಿಲ್ಲದೆ ಸಾವಿರಾರು ಮಂದಿ ಭಾಗವಹಿಸಿದ್ದರು. ಆಲೆಟ್ಟಿ ಗ್ರಾಮದ ಶ್ರೀ ಕುಡೆಕಲ್ಲು ವಿಷ್ಣುಮೂರ್ತಿ ದೈವ ಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ರಾತ್ರಿ ನಿರಂತರ ಅನ್ನಸಂತರ್ಪಣೆ ಕಾರ್ಯ ನಡೆಸಲಾಯಿತು.
ನೂರಾರು ವರ್ಷಗಳಿಂದ ನಡೆಯುತ್ತಿರುವ ಈ ಕಳಿಯಾಟ ಕಾರ್ಯಕ್ರಮ ಹಲವು ವಿಶೇಷತೆಗಳಿಂದ ಕೂಡಿರುತ್ತದೆ. ಶ್ರೀ ವಯನಾಟ್ ಕುಲವನ್ ಕ್ಷೇತ್ರವಿದ್ದು, ಆ ದೇವಸ್ಥಾನದಿಂದ ಕಲಶ ತಂದು ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ತುಲಾಭಾರ ಸೇವೆ ವಿವಿಧ ಸೇವೆಗಳು ನಡೆಯಿತು.