ಕಡಂಗ, ಮಾ. ೨೮: ಸಿ.ಎಂ ವಲಿಯವರ ಹೆಸರಿನಲ್ಲಿ ಕಡಂಗದ ಶಾದಿ ಮಹಲ್ ಸಭಾಂಗಣದಲ್ಲಿ ೫ನೇ ವರ್ಷದ ಬೃಹತ್ ಇಫ್ತಾರ್ ಕೂಟ ಆಯೋಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕರಾದ ರಾಶಿದ್ ಅವರು ಕೊರೊನಾ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡುವ ಉದ್ದೇಶದಲ್ಲಿ ಆಯೋಜನೆಗೊಂಡ ಸಿ.ಎಂ. ಮಜಲೀಸ್ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನೆಡೆಸುತ್ತಾ ಬಂದ್ದಿದ್ದು, ಎಲ್ಲಾ ವರ್ಷವು ಕೂಡ ಬೃಹತ್ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಾಗಿದ್ದು ಈ ವರ್ಷ ಕೂಡ ಬೃಹತ್ ಇಫ್ತಾರ್ ಆಯೋಜಿಸಲಾಗಿದ್ದು ಸಂತೋಷ ತಂದಿದೆ ಎಂದರು.

ಸAಜೆ ೬ ಗಂಟೆಗೆ ದುಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಹಿಯದ್ದಿನ್ ಮಸೀದಿಯ ಇಮಾಮರಾದ ರಫೀಕ್ ಲತೀಫೀ, ಬದ್ರಿಯಾ ಜುಮಾ ಮಸೀದಿ ಇಮಾಮರದ ಸತ್ತರ್ ಆಹಸನಿ, ಉಭಯ ಜಮಾಅತ್ ಅಧ್ಯಕ್ಷರು ಗಳಾದ ಉಸ್ಮಾನ್ ಎವರ್ ಗ್ರೀನ್, ಅಬ್ದುಲ್ಲ ಪಿ.ಎ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಬ್ಬೀರ್ ಸಿ.ಇ ಮತ್ತು ಮಜಲಿಸ್ ಕಾರ್ಯಕರ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಜುನೈದ್ ನಿರ್ವಹಿಸಿದರು.