ಪೊನ್ನಂಪೇಟೆ, ಮಾ. ೨೮: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ಕತ್ತಿಯಿಂದ ಕಡಿದು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಜೇನು ಕುರುಬ ಸಮುದಾಯದ ಕರಿಯ (೭೦), ಗೌರಿ (೭೮), ನಾಗಿ (೩೦), ಕಾವೇರಿ (೬) ಎಂಬವರೇ ಅಮಾನುಷವಾಗಿ ಕೊಲೆಯಾದ ದುರ್ದೈವಿಗಳು. ಕೊಲೆಯಾದ ಮಹಿಳೆ ನಾಗಿಯ ಪತಿ, ಕೇರಳ ಮೂಲದ ಗಿರೀಶ್ (೪೨) ಎಂಬವನು ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಕೊಂದು ಹಾಕಿದ್ದಾನೆ.
ತಾ. ೨೮ ರಂದು ಬೆಳಿಗ್ಗೆ ಸುಮಾರು ೧೧.೩೦ ರ ಸಮಯದಲ್ಲಿ ಕರಿಯ ಹಾಗೂ ಮನೆಯವರು ಹೊರಗೆ ಕಾಣಿಸದೆ ಇದ್ದ ಕಾರಣ ಸ್ಥಳೀಯರೊಬ್ಬರು ಮನೆಯ ಕಡೆ ತೆರಳಿ ನೋಡಿದಾಗ ಮನೆಯ ಒಳಗೆ ೫ ವರ್ಷದ ಹೆಣ್ಣು ಮಗು ಸೇರಿದಂತೆ ನಾಲ್ವರು ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೋಚರಿಸಿದೆ.
ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಗಿರೀಶ್ ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಬೇಗೂರು ಗ್ರಾಮದ ನಾಗಿಯ ಸೊಂಟದ ಭಾಗಕ್ಕೆ ಕತ್ತಿಯಿಂದ ಹಲ್ಲೆ ಮಾಡಿ, ತಲೆ ಭಾಗಕ್ಕೆ ಕಡಿದು ಕೊಂದು ಹಾಕಿದ್ದಾನೆ. ತನ್ನ ಪತ್ನಿ ನಾಗಿಯ ಎರಡನೇ ಗಂಡನಿಗೆ ಜನಿಸಿದ್ದ ೫ ತಿಂಗಳ ಪುಟ್ಟ ಮಗುವಿನ ಮೇಲೆಯೂ ಕರುಣೆ ತೋರದೆ ಮಗುವಿನ ತಲೆಯ ಭಾಗಕ್ಕೆ ಕಡಿದು ವಿಕೃತಿ ಮೆರೆದು ಕೊಲೆ ಮಾಡಿದ್ದಾನೆ.
ವಯಸ್ಸಾದ ಹಿರಿಯ ಜೀವಗಳಾದ ನಾಗಿಯ ಅಜ್ಜ ಕರಿಯ ಮತ್ತು ಅಜ್ಜಿ ಗೌರಿಯ ತಲೆ ಹಾಗೂ ಮುಖದ ಭಾಗವನ್ನು ಕೊಚ್ಚಿ ಹಾಕಿದ್ದಾನೆ. ಬೇಗೂರು ಗ್ರಾಮದಲ್ಲಿ ನಡೆದಿರುವ ಈ ಬರ್ಬರ ಹತ್ಯೆಯನ್ನು ಕಂಡು ನಾಗರಿಕರು ಬೆಚ್ಚಿಬಿದ್ದಿದ್ದಾರೆ.
(ಮೊದಲ ಪುಟದಿಂದ) ಮಾಹಿತಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಐ ಜಿ ಪಿ ಬೋರಲಿಂಗಯ್ಯ ಎಂ. ಬಿ., ಕೊಡಗು ಎಸ್. ಪಿ. ರಾಮರಾಜನ್, ಅಡಿಷನಲ್ ಎಸ್ಪಿ ಸುಂದರ್ ರಾಜ್ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
ಕಾರಣ ತಿಳಿದಿಲ್ಲ..!ಕುಟ್ಟ ಸರ್ಕಲ್ ಇನ್ಸ್ಪೆಕ್ಟರ್ ಶಿವರುದ್ರಪ್ಪ, ಪೊನ್ನಂಪೇಟೆ ಸಬ್ ಇನ್ಸ್ಪೆಕ್ಟರ್ ನವೀನ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು. - ಚನ್ನನಾಯಕ
ಕೊಲೆಯಾದ ಕರಿಯ ಅವರಿಗೆ ಸ್ವಲ್ಪ ಕಾಫಿ ತೋಟವಿದ್ದು, ಮನೆಯಲ್ಲಿ ೧೦ ಚೀಲ ಕಾಫಿ ಮೂಟೆಗಳು ಇದ್ದು, ಕಾಫಿ ಮಾರುವ ವಿಚಾರವಾಗಿ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ಭೀಕರ ಕೊಲೆಗೆ ಕಾರಣ ತಿಳಿಯಬೇಕಿದೆ.
ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ಘಟನಾ ಸ್ಥಳದಲ್ಲಿ ವೀರಾಜಪೇಟೆ ವಿಭಾಗ ಡಿವೈಎಸ್ಪಿ ಮಹೇಶ್ ಕುಮಾರ್, ಕುಶಾಲನಗರ ವಿಭಾಗ ಡಿವೈಎಸ್ಪಿ ಗಂಗಾಧರಪ್ಪ, ಗೋಣಿಕೊಪ್ಪಲು ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್,
ಕೊಲೆ ಮಾಡಿದ ಗಿರೀಶ್‌ನನ್ನು ಕೇರಳದ ಮಾನಂದವಾಡಿಯ ತಾಲಪೋಯದಲ್ಲಿ ಕೇರಳ ಪೊಲೀಸರು ಬಂಧಿಸಿದ್ದಾರೆ.
ಪರಾರಿಯಾಗಿದ್ದ ಆರೋಪಿಯನ್ನು ಕೇರಳ ರಾಜ್ಯದ ವೈನಾಡು ಜಿಲ್ಲೆಯ ತಾಲಪೋಯ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅಲ್ಲಿನ ಪೊಲೀಸ್ ಠಾಣೆಯ ಎಎಸ್‌ಐ ಟಿ.ಅನೀಶ್, ವಿಶೇಷ ಶಾಖೆಯ ಠಾಣಾಧಿಕಾರಿ ಜಿ . ಅನಿಲ್, ಸಿಬ್ಬಂದಿ ಶಫೀರ್ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಗಿರೀಶ್ ವೈನಾಡು ಜಿಲ್ಲೆಯ ತಿರುನಲ್ಲಿಯ ಉಣಿತು ಪರಂಬು ಗ್ರಾಮದವನಾಗಿದ್ದಾನೆ ಎಂದು ತಿಳಿದು ಬಂದಿದೆ. ಕೇರಳ ಪೊಲೀಸರು ಆರೋಪಿಯನ್ನು ಗೋಣಿಕೊಪ್ಪ ಪೊಲೀಸರಿಗೆ ಹಸ್ತಾಂತರಿಸಿರುವುದಾಗಿ ತಿಳಿದು ಬಂದಿದೆ.
ಕೊಲೆಯಾದ ಕರಿಯ ಅವರ ಕುಟುಂಬ ಕಳೆದ ೪೦ ವರ್ಷದಿಂದ ಬೇಗೂರಿನಲ್ಲಿ ಜನದಟ್ಟಣೆ ಕಡಿಮೆ ಇರುವ ಪ್ರದೇಶದಲ್ಲಿ ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದರು.
ಕಳೆದ ಒಂದು ವರ್ಷದ ಹಿಂದೆ ಕರಿಯನ ಮಗಳಾದ ಜಯ ಎಂಬವರ ಮಗಳು ನಾಗಿಯನ್ನು ಕೇರಳ ಮೂಲದ ಗಿರೀಶ್ ಮದುವೆಯಾಗಿದ್ದ. ಕೆಲವೊಮ್ಮೆ ಕೇರಳದಿಂದ ಇಲ್ಲಿಗೆ ಬಂದು ಹೋಗುತ್ತಿದ್ದ. ತಾ. ೨೮ ರ ರಾತ್ರಿ ಅಥವಾ ಬೆಳಿಗ್ಗೆ ಈ ಕೊಲೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಕೊಲೆ ಆರೋಪಿಯ ವಿಚಾರಣೆ ಬಳಿಕವಷ್ಟೇ ನೈಜಾಂಶ ಹೊರಬರಬೇಕಿದೆ.
-ಬೋರಲಿಂಗಯ್ಯ. ಎಂ. ಬಿ. ದಕ್ಷಿಣ ವಲಯ ಡಿಐಜಿ