ಮಡಿಕೇರಿ, ಮಾ. ೨೮: ಕಕ್ಕಬ್ಬೆ ಕುಂಜಿಲ ಗ್ರಾಮದ ಅಮ್ಮಂಗೇರಿ ಶ್ರೀ ಪುದಿಯೋದಿ ದೇವಿಯ ಕೋಲ ತಾ. ೩೦ರಿಂದ (ನಾಳೆಯಿಂದ) ತಾ. ೩೧ರವರೆಗೆ ನಡೆಯಲಿದೆ. ತಾ. ೩೦ರ ಸಂಜೆ ೬ ಗಂಟೆಗೆ ಕೋಲೆಯಂಡ ಐನ್‌ಮನೆಯಿಂದ ಭಂಡಾರ ಇಳಿಯುವುದು, ರಾತ್ರಿ ೮ಕ್ಕೆ ಅನ್ನ ಸಂತರ್ಪಣೆ, ೧೦ ಗಂಟೆಗೆ ಶ್ರೀ ಪುದಿಯೋದಿ ದೇವಿಯ ತೋತ, ೧೦.೩೦ಕ್ಕೆ ಮೇಲೇರಿ ಅಗ್ನಿಸ್ಪರ್ಶ, ೧೧ಕ್ಕೆ ಶ್ರೀ ಬೀರದೇವರ ತೋತ, ರಾತ್ರಿ ೨ ಗಂಟೆಗೆ ಬೀರದೇವರ ಕೋಲ, ೪ಕ್ಕೆ ಭೀರಾಳಿ ದೇವಿಯ ಕೋಲ, ತಾ. ೩೧ರಂದು ಬೆಳಿಗ್ಗೆ ೬ ಗಂಟೆಗೆ ಶ್ರೀ ಪುದಿಯೋದಿ ದೇವಿಯ ಕೋಲ ಹಾಗೂ ೮ ಗಂಟೆಗೆ ಉಪಹಾರ ನಡೆಯಲಿದೆ ಎಂದು ಅಮ್ಮಂಗೇರಿ ಕೋಲೆಯಂಡ ಕುಟುಂಬದ ಶ್ರೀ ಪುದಿಯೋದಿ ದೇವಿ ಡೆವಲಪ್‌ಮೆಂಟ್ ಟ್ರಸ್ಟ್ನ ಅಧ್ಯಕ್ಷರಾದ ಕೋಲೆಯಂಡ ಯು. ಗಿರೀಶ್ ತಿಳಿಸಿದ್ದಾರೆ.