ಗೋಣಿಕೊಪ್ಪ, ಮಾ. ೨೮: ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆಚರಿಸುವ ಪಾರ್ವತಿ ದೇವಿ ವಾರ್ಷಿಕೋತ್ಸವ ತಾ. ೩೦ ರಿಂದ ಏಪ್ರಿಲ್ ೨ ರವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ತಾ. ೩೦ ರಂದು ಪ್ರಾತಃಕಾಲ ೭.೩೦ಕ್ಕೆ ಸಾಮೂಹಿಕ ಪ್ರಾರ್ಥನೆ, ೮ಕ್ಕೆ ಮಹಾಗಣಪತಿ ಹೋಮ, ೧೨.೩೦ಕ್ಕೆ ಮಹಾಮಂಗಳಾರತಿ, ರಾತ್ರಿ ೭ ಗಂಟೆಗೆ ದೀಪಾರಾಧನೆ, ೭.೩೦ಕ್ಕೆ ೫ ಸುತ್ತು ತೂಚಂಬಲಿ, ೮ಕ್ಕೆ ಮಹಾಮಂಗಳಾರತಿ ನಡೆಯಲಿದೆ. ತಾ. ೩೧ ರಂದು ಬೆಳಿಗ್ಗೆ ೫ ಗಂಟೆಗೆ ಇರುಬಳಕು, ೧೦ಕ್ಕೆ ಇರುಬಳಕು, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಅನ್ನದಾನ, ರಾತ್ರಿ.೭ ಗಂಟೆಗೆ ದೇವರ ನೃತ್ಯ ಪ್ರದಕ್ಷಿಣೆ, ೮ ಗಂಟೆಗೆ ಸಾಮೂಹಿಕ ವಸಂತ ಪೂಜೆ, ನಂತರ ಮಹಾ ಮಂಗಳಾರತಿ, ಅನ್ನಪ್ರಸಾದ ನೆರವೇರಲಿದೆ.

ಏ. ೧ ರಂದು ಬೆಳಿಗ್ಗೆ ೧೦ ಗಂಟೆಗೆ ಸಾಮೂಹಿಕ ಪಂಚಾಮೃತ ಅಭಿಷೇಕ, ಮಳೆಗಾಗಿ ವಿಶೇಷ ಪ್ರಾರ್ಥನೆ, ಮಧ್ಯಾಹ್ನ ಮಹಾ ಮಂಗಳಾರತಿ, ಅನ್ನಪ್ರಸಾದ, ದೇವಸ್ಥಾನದ ಕೆರೆಯಲ್ಲಿ ಉತ್ಸವ ಮೂರ್ತಿಯ ಅವಭೃತ ಸ್ನಾನ, ೮ ಗಂಟೆಗೆ ೧೧ ಸುತ್ತು ದೇವಿಯ ಉತ್ಸವ ಮೂರ್ತಿ ಹೊತ್ತು ನೃತ್ಯ ಪ್ರದಕ್ಷಿಣೆ ನಡೆಯಲಿದೆ.

ಏ. ೨ ರಂದು ಬೆಳಿಗ್ಗೆ ೭ ಗಂಟೆಗೆ, ಕಲಶಾಭಿಷೇಕ ನಂತರ ಮಹಾಪೂಜೆ ಮಂತ್ರಾಕ್ಷತೆ ಸೇರಿದಂತೆ ವಿವಿಧ ಪೂಜಾ ಆಚರಣೆಗಳು ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿಗಳಾದ ಮನೆಯಪಂಡ ಮೇಜರ್ ಬೋಪಣ್ಣ, ಜಪ್ಪೆಕೋಡಿ ಉತ್ತಪ್ಪ, ವಿ.ಟಿ. ವಾಸು, ಕುಲ್ಲಚಂಡ ಪ್ರಮೋದ್ ಗಣಪತಿ,' ಶೋಭಿತ್, ಕೊಪ್ಪಿರ ಸನ್ನಿ ಸೋಮಯ್ಯ ತಿಳಿಸಿದ್ದಾರೆ.