ಮಡಿಕೇರಿ, ಮಾ. ೨೮: ಪ್ರಸ್ತುತ ಸಾಮಾಜಿಕ ಜಾಲ ತಾಣಗಳಲ್ಲಿ ಕೊಡಗಿಗೆ ಸಂಬAಧಿಸಿದ ಕೊಡಗಿನ ಹಾಕಿಯ ವೈಭವ ಪ್ರತಿಬಿಂಬಿಸುವ ಹಾಡೊಂದು ಜನಪ್ರಿಯವಾಗಿ ಹರಿದಾಡುತ್ತಿದೆ. ಯುವತಿಯೊಬ್ಬರ ಕಂಠದಲ್ಲಿ ಕೇಳಿಬರುತ್ತಿರುವ ಹಾಕಿ... ಹಾಕಿ... ಹಾಕಿ... ಮುದ್ದಂಡೊಕ್ಕಡ ಹಾಕಿ ನಮ್ಮೆ... ಹಾಡು ಕೊಡಗಿನ ಹಾಕಿ ವೈಭವದ ಕಥೆಯ ಇತಿಹಾಸವನ್ನು ನೆನಪಿಸುತ್ತಿದೆ. ಹೌದು ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಹಾಕಿ ನಮ್ಮೆ ಎಂದರೆ ಅದೊಂದು ಅತ್ಯಂತ ವಿಜೃಂಭಣೆಯ ಸಂದರ್ಭ. ಈ ಹಾಕಿನಮ್ಮೆಗೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮವೂ ಜತೆಯಾಗಿದೆ.
ಕಳೆದ ವರ್ಷ ಗಿನ್ನಿಸ್‌ದಾಖಲೆಯ ಸವಿನೆನಪಾದರೆ ಈ ಬಾರಿ ಮತ್ತಿನ್ನೇನೋ ಹೊಸ ನಿರೀಕ್ಷೆ ಪಾಂಡAಡ ಕಪ್‌ನಿಂದ ಪ್ರಾರಂಭಗೊAಡು ಈತನಕ ಇನ್ನಿತರ ೨೪ ಕುಟುಂಬಗಳು ಯಶಸ್ವಿಯಾಗಿ ನಡೆಸಿಕೊಂಡು ಬರುವ ಮೂಲಕ ವರ್ಷಂಪ್ರತಿ ಒಂದಲ್ಲಾ ಒಂದು ರೀತಿಯ ಬೆಳವಣಿಗೆ ಕಾಣುತ್ತಿರುವ ಕೌಟುಂಬಿಕ ಹಾಕಿನಮ್ಮೆಯ ಬೆಳ್ಳಿಹಬ್ಬದ ವರ್ಷದ ಆಯೋಜನೆಯ ಜವಾಬ್ದಾರಿ ದೊರೆತಿರುವುದು ಮಡಿಕೇರಿ ಸನಿಹದ ಮುದ್ದಂಡ ಕುಟುಂಬಸ್ಥರಿಗೆ ಇದೀಗ ಮುದ್ದಂಡ ಹಾಕಿ ಫೆÀಸ್ಟೀವಲ್ - ೨೦೨೫ ಶುಭಾರಂಭಗೊAಡಿದೆ. ತಾ. ೨೮ರ ಶುಕ್ರವಾರದಂದು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಮುದ್ದಂಡ ಕಪ್ ಹಾಕಿ ನಮ್ಮೆಗೆ ವೈಭವಯುತ ಚಾಲನೆ ದೊರೆತಿದೆ.
ಉದ್ಘಾಟನಾ ಸಂಭ್ರಮದ ಚಿತ್ರಣ ಹೇಗಿತ್ತು...?
೨೫ನೇಯ ವರ್ಷದ ಕೌಟುಂಬಿಕ ಹಾಕಿ ಪಂದ್ಯಾವಳಿಯ ಇತಿಹಾಸದಲ್ಲಿ ಮಡಿಕೇರಿಯಲ್ಲಿ ಮೂರನೆಯ ಬಾರಿಗೆ ಪಂದ್ಯಾಟ ಜರುಗುತ್ತಿದೆ. ಈ ಬಾರಿ ಮುದ್ದಂಡ ಕುಟುಂಬ ಉತ್ಸವ ಆಯೋಜನೆ ಮಾಡಿದೆ. ಪ್ರಾರಂಭೋತ್ಸವದ ಪ್ರಯುಕ್ತ ಮುದ್ದಂಡ ಕುಟಂಬಸ್ಥರು, ಕೊಡವ ಹಾಕಿ ಅಕಾಡೆಮಿಯ ಸಹಕಾರ ದೊಂದಿಗೆ ಕೆಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದರು. ವಿಶೇಷವಾಗಿ ಈ ಬಾರಿ ಕ್ರೀಡಾಜ್ಯೋತಿಯೂ ಪಂದ್ಯಾವಳಿ ಪ್ರಾರಂಭಕ್ಕೆ ಮುನ್ನವೇ ಒಂದಷ್ಟು ಜನರನ್ನು ಬೆಸೆಯುವಂತೆ ಮಾಡಿದೆ.
ಹಿಂದಿನ ವರ್ಷಗಳಲ್ಲಿ ಉತ್ಸವ ನಡೆಸಿದ ೨೪ ಕುಟುಂಬಗಳ ಐನ್‌ಮನೆಗೆ ತೆರಳಿ ನಿನ್ನೆ ಕರವಲೆ ಭಗವತಿ ದೇವಸ್ಥಾನವನ್ನು ಕ್ರೀಡಾ ಜ್ಯೋತಿ ತಲುಪಿತ್ತು. ಉದ್ಘಾಟನಾ ದಿನವಾದ ಇಂದು ಕ್ರೀಡಾ ಜ್ಯೋತಿಯನ್ನು ನಗರದ ಹೊರವಲ ಯದಲ್ಲಿರುವ ಮುದ್ದಂಡ ಕುಟುಂಬಸ್ಥರ ಸ್ಥಳವೂ ಆದ ಕರವಲೆ ಭಗವತಿ ದೇವಸ್ಥಾನದಿಂದ ಪ್ರಾರಂಭಗೊAಡು ಜನರಲ್ ತಿಮ್ಮಯ್ಯ ವೃತ್ತಕ್ಕೆ ತರಲಾಯಿತು.
ಈ ಸಂದರ್ಭ ಕ್ರೀಡಾ ಜ್ಯೋತಿ ಯನ್ನು ಒಡ್ಡೊಲಗ, ದುಡಿಕೊಟ್ಟ್ ಪಾಟ್, ಚಂಡೆವಾದ್ಯ ಸಹಿತವಾಗಿ ಸ್ವಾಗತಿಸಿ ಹೂಮಳೆ ಗೈಯ್ಯಲಾಯಿತು. ಸಾಂಪ್ರದಾಯಿಕ ಉಡುಗೆಯಲ್ಲಿ ಮುದ್ದಂಡ ಕುಟುಂಬದವರು, ಕೊಡವ ಹಾಕಿ ಅಕಾಡೆಮಿ, ತವರುಮನೆ ಹುಡುಗಿಯರು, ಬಂಧುಗಳು, ಮಡಿಕೇರಿ ಕೊಡವ ಸಮಾಜದ ಪ್ರಮುಖರು ಇನ್ನಿತರ ಅಭಿಮಾನಿಗಳು ಈ ಸಂದರ್ಭ ಪಾಲ್ಗೊಂಡಿದ್ದರು.
ಬಳಿಕ ಜನರಲ್ ತಿಮ್ಮಯ್ಯ ಪ್ರತಿಮೆಗೆ ಮಾಲಾರ್ಪಣೆಗೈದು ಸಾಂಸ್ಕೃತಿಕ ಮೆರವಣಿಗೆಗೆ ಕ್ರೀಡಾಜ್ಯೋತಿ ಸಹಿತವಾಗಿ ಚಾಲನೆ ನೀಡಲಾಯಿತು. ಚಂಡೆಮೇಳ ಕೊಂಬ್‌ಕೊಟ್ಟ್ ವಾಲಗ, ದುಡಿಕೊಟ್ಟ್ಪಾಟ್, ಜಿಪ್ಸಿವಾಹನಗಳ ಸಹಿತವಾಗಿ ಮೆರವಣಿಗೆ ಪ್ರಾರಂಭಗೊAಡು ಮೇಜರ್ ಮಂಗೇರಿರ ಮುತ್ತಣ್ಣ ಪ್ರತಿಮೆ, ಸ್ಕಾ÷್ವಡ್ರರ್ನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಗೂ ಮಾಲಾರ್ಪಣೆ ಮೂಲಕ ನಗರದ ಮುಖ್ಯರಸ್ತೆಯಲ್ಲಿ ಸಾಗಿತು.
೧೦.೧೦ರ ವೇಳೆಗೆ ಪ್ರಾರಂಭಗೊAಡ ಮೆರವಣಿಗೆ ೧೧.೪೦ರ ಸುಮಾರಿಗೆ ಪಂದ್ಯಾವಳಿ ಜರುಗುತ್ತಿರುವ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನ ತಲುಪಿತು. ಮೆರವಣಿಗೆಯಲ್ಲಿ ಸಾಗಿಬಂದವರು ಮೈದಾನದ ಸುತ್ತಲೂ ಪ್ರದಕ್ಷಿಣೆ ಹಾಕಿದರು. ಬಳಿಕ ಕ್ರೀಡಾಜ್ಯೋತಿಯನ್ನು ಹೊತ್ತು ತಂದ ತಂಡದವರು ಜ್ಯೋತಿಯೊಂದಿಗೆ ಮೈದಾನದ ಮೂರು ಸುತ್ತು ಓಡಿ ಇದನ್ನು ಮಾಜಿ ಒಲಂಪಿಯನ್ ಡಾ. ಅಂಜಪರವAಡ ಬಿ. ಸುಬ್ಬಯ್ಯ ಅವರಿಗೆ ಹಸ್ತಾಂತರಿಸಿದರು. ಸುಬ್ಬಯ್ಯ ಅವರು ಜ್ಯೋತಿ ಸ್ವೀಕರಿಸಿ ವೇದಿಕೆ ಎದುರು ನಿರ್ಮಿಸಿರುವ ಬೃಹತ್ ದೀಪವನ್ನು ಬೆಳಗುವದರ ಮೂಲಕ ಕ್ರೀಡಾಜ್ಯೋತಿ ಮತ್ತೆ ಪ್ರಜ್ವಲಿಸಿತು. ಸುಬ್ಬಯ್ಯ ಅವರು ಜ್ಯೋತಿ
ಸ್ವೀಕರಿಸಿದ ಸಂದರ್ಭ ಕೊಡವಹಾಕಿ ಅಕಾಡೆಮಿ ಅಧ್ಯಕ್ಷ
(ಮೊದಲ ಪುಟದಿಂದ) ಪಾಂಡAಡ ಬೋಪಣ್ಣ ಆಗಸಕ್ಕೆ ಗುಂಡುಹಾರಿಸಿ ಸ್ವಾಗತಿಸಿದರು.
ಒಕ್ಕಣೆ ಕಟ್ಟಿ ಪ್ರಾರ್ಥನೆ
ಈ ಬಾರಿ ವೇದಿಕೆಯನ್ನು ವಿಶೇಷವಾಗಿ ಐನ್‌ಮನೆಯ ಮಾದರಿಯಲ್ಲಿ ನಿರ್ಮಿಸಲಾಗಿದೆ. ಈ ಐನ್‌ಮನೆಯಲ್ಲಿ ನೆಲ್ಲಕ್ಕಿ ನಡುಬಾಡೆಯ ಚಿತ್ರಣ, ದೇವರಕೋಣೆಯನ್ನು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದೀಪವಿಟ್ಟು, ಗೆಜ್ಜೆತಂಡ್‌ಗೂ ಅಕ್ಕಿ ಹಾಕಿ, ಒಕ್ಕಣೆಕಟ್ಟಿ ಉತ್ಸವಕ್ಕೆ ದೇವರ ಅನುಗ್ರಹ ಕೋರಿ ಪ್ರಾರ್ಥಿಸಲಾಯಿತು. ಈ ಕಾರ್ಯವನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ನೆರವೇರಿಸಿದರು.
ಬಾಳೆ ಮರ್ಯಾದಿ
ಬೆಳ್ಳಿ ಹಬ್ಬದ ಸಂದರ್ಭವಾದ ಹಿನ್ನೆಲೆಯಲ್ಲಿ ಈ ಬಾರಿ ಆಯೋಜಕರು ಇಲ್ಲಿಯ ತನಕ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸಿ ಯಶಸ್ಸು ಕಂಡಿರುವ ೨೪ ಕುಟುಂಬದವರಿಗೆ, ಹಾಕಿ ಉತ್ಸವದ ಮುಂದಾಳತ್ವ ಹೊಂದಿರುವ ಕೊಡವ ಹಾಕಿ ಅಕಾಡೆಮಿಗೆ ಬಾಳೆ ಮರ್ಯಾದಿ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು. ಹಾಕಿ ಅಕಾಡೆಮಿ ಪ್ರಮುಖರು ಮೊದಲು ಬಾಳೆ ಕಡಿದರೆ, ನಂತರದಲ್ಲಿ ಪಾಂಡAಡ ಕುಟುಂಬದಿAದ ಮೊದಲ್ಗೊಂಡು ಕಳೆದ ಬಾರಿಯ ಕುಂಡ್ಯೋಳAಡ ಕುಟುಂಬದ ತನಕ ಬಾಳೆ ಹಸ್ತಾಂತರ ಮಾಡುವದು, ಬಾಳೆ ಕಡಿಯುವುದು. ಈ ಸಂದರ್ಭ ಆಗಸಕ್ಕೆ ಗುಂಡು ಹಾರಿಸಿ ಗೌರವ ನೀಡಲಾಯಿತು. ಒಡ್ಡೋಲಗವೂ ಸಾಥ್ ನೀಡಿತ್ತು.
ಬಾಳೆ ಮರ್ಯಾದಿ ಬಳಿಕ ಮುದ್ದಂಡ ಕುಟುಂಬದ ಹಾಗೂ ಕೊಡವ ಹಾಕಿ ಅಕಾಡೆಮಿಯ ಧ್ವಜಾರೋಹಣ ನೆವೇರಿಸಲಾಯಿತು. ಇದಾದ ಬಳಿಕ ಜಿಲ್ಲಾಡಳಿತದ ತಂಡ ಹಾಗೂ ಆಯೋಜಕ ಕುಟುಂಬ ಮುದ್ದಂಡ ನಡುವೆ ಮತ್ತು ಕರ್ನಾಟಕ ಇಲವೆನ್ ಹಾಗೂ ಕೊಡವ ಹಾಕಿ ಅಕಾಡೆಮಿ ತಂಡಗಳ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿತ್ತು. ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಇನ್ನಿತರ ಅತಿಥಿಗಳ ಜತೆಗೂಡಿ ಬೆಳ್ಳಿಯ ಸ್ಟಿಕ್‌ನಿಂದ ಬೆಳ್ಳಿಯ ಚೆಂಡನ್ನು ತಳ್ಳುವ ಮೂಲಕ ಮುದ್ದಂಡ ಕಪ್ ಶುಭಾರಂಭಗೊAಡಿತು.
ಈ ಬಾರಿ ದಾಖಲೆಯ ೩೯೬ ಕುಟುಂಬಗಳು ಮುದ್ದಂಡ ಕಪ್‌ಗೆ ಸೆಣಸಲಿದ್ದು, ೬೩೩೬ ಆಟಗಾರರು ಮೈದಾನಕ್ಕೆ ಇಳಿಯಲಿದ್ದಾರೆ. ಕೊಡವ ಕೌಟುಂಬಿಕ ಹಾಕಿ ಕೊಡವ ಜನಾಂಗದ ನಡುವೆ ಜರುಗುವ ಪಂದ್ಯಾವಳಿಯಾದರೂ ಜಿಲ್ಲೆ ಮಾತ್ರವಲ್ಲ, ರಾಜ್ಯ, ದೇಶ, ವಿಶ್ವಮಟ್ಟದಲ್ಲೂ ಪ್ರಸಿದ್ಧಿ ಪಡೆದಿದ್ದು, ತಿಂಗಳ ಕಾಲ ಹಾಕಿ ಪ್ರೇಮಿಗಳ ಗಮನ ಸೆಳೆಯಲಿದೆ.
ವರದಿ : ಕಾಯಪಂಡ ಶಶಿ ಸೋಮಯ್ಯ, ಹೆಚ್.ಜೆ. ರಾಕೇಶ್, ಚಿತ್ರಗಳು : ಲಕ್ಷಿö್ಮÃಶ್
* ಬೆಳಿಗ್ಗೆ ೧೦.೧೦ಕ್ಕೆ ಪ್ರಾರಂಭಗೊAಡ ಮೆರವಣಿಗೆ ೧೧.೪೦ರ ಸುಮಾರಿಗೆ ಫೀ.ಮಾ.ಕಾರ್ಯಪ್ಪ ಮೈದಾನ ಪ್ರವೇಶಿಸಿತು.
* ಸುಮಾರು ೩ ಕಿ.ಮೀ.ಗೂ ಅಧಿಕ ದೂರ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
* ಕ್ರೀಡಾಜ್ಯೋತಿ ಸಹಿತ ಮೆರವಣಿಗೆ ಮೈದಾನದ ಸುತ್ತಲೂ ನಡೆಯಿತು. ಮೆರಥಾನ್ ಓಟಗಾರರಾದ ಕ್ರೀಡಾಜ್ಯೋತಿಯೊಂದಿಗೆ ಜಿಲ್ಲೆಯ ವಿವಿಧೆಡೆ ತೆರಳಿದ್ದ ಪುಲಿಯಂಡ ಗೌತಮ್, ಮುರುವಂಡ ಸ್ಪೂರ್ತಿ ಸೀತಮ್ಮ, ಕೂತಿರ ಬಿದ್ದಪ್ಪ, ಪಾಂಡAಡ ನಾಣಯ್ಯ, ನೆಲ್ಲಪಟ್ಟಿರ ಶ್ರೇಯಸ್, ಅಯ್ಯಕುಟ್ಟಿರ ಡ್ಯಾನಿಶ್ ಜ್ಯೋತಿ ಸಹಿತ ಮೈದಾನದ ಮೂರು ಸುತ್ತು ಓಡಿದರು. ಇವರೊಂದಿಗೆ ಕಂಡ್ರತAಡ ದಿವ್ಯ ಮಾದಯ್ಯ ಅವರೂ ಈ ಸಂದರ್ಭ ಹೆಜ್ಜೆ ಹಾಕಿದರು.
* ಐನ್‌ಮನೆ ಮಾದರಿಯ ವೇದಿಕೆ ಗಮನ ಸೆಳೆಯಿತು.
* ಅತಿಥಿಗಳನ್ನು ಒಡ್ಡೋಲಗ ಸಹಿತವಾಗಿ ವೇದಿಕೆಗೆ ಕರೆತರಲಾಯಿತು.
* ಬಾಳೆ ಮರ್ಯಾದಿ ವಿಶೇಷ ಗೌರವವಾಗಿತ್ತಾದರೂ ಭಾರೀ ಸಮಯ ತೆಗೆದುಕೊಂಡಿದ್ದು ಒಂದಷ್ಟು ವಿಳಂಬಕ್ಕೆ ಕಾರಣವಾಗಿ ಕಾರ್ಯಕ್ರಮದ ಸಮಯಪಾಲನೆಗೆ ತೊಂದರೆಯಾದAತಾಯಿತು. ಆದರೂ ಹೊಸ ರೀತಿಯಲ್ಲಿ ಹಿಂದಿನ ಕುಟುಂಬದವರನ್ನು ಗೌರವಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.
* ಸಮಯದ ಅಭಾವದಿಂದಾಗಿ ಉಮ್ಮತ್ತಾಟ್, ಬೊಳಕಾಟ್‌ನಂತಹ ಸಾಂಸ್ಕೃತಿಕ ಪ್ರದರ್ಶನ ರದ್ದುಗೊಳ್ಳುವಂತಾಯಿತು. ಕಲಾ ತಂಡದವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದರೂ, ಆಯೋಜಕರಿಗೆ ಅಸಹಾಯಕತೆ ಎದುರಾಯಿತು.
* ಚೆಪ್ಪುಡೀರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್, ಅಜ್ಜೇಟಿರ ವಿಕ್ರಂ ಉತ್ತಪ್ಪ ವೀಕ್ಷಕ ವಿವರಣೆ ನೀಡಿದರು. ಮಾದೇಟಿರ ಬೆಳ್ಯಪ್ಪ, ಚೋಕಿರ ಅನಿತಾ ನಿರೂಪಣೆ ಮಾಡಿದರೆ, ಬಾಳೆ ಮರ್ಯಾದಿ ಕಾರ್ಯವನ್ನು ಬೊಳ್ಳೆರ ಪೃಥ್ವಿ ನಿರ್ವಹಿಸಿದರು.
* ಮೆರಥಾನ್ ಓಟಗಾರರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
* ಹಾಕಿ ಉತ್ಸವಕ್ಕೆ ಸಂಬAಧಿಸಿದ ಮುದ್ದಂಡ ಹಾಕಿ ನಮ್ಮೆ ಸ್ಮರಣ ಸಂಚಿಕೆ ಹಾಗೂ ಬಿದ್ದಂಡ ನಾಣಯ್ಯ ರಚನೆಯಲ್ಲಿ ಮುದ್ದಿಯಡ ಕರಣ್ ಕಾವೇರಪ್ಪ ಹಾಡಿರುವ ಹಾಡನ್ನು ಈ ಸಂದರ್ಭ ಅತಿಥಿಗಳು ಬಿಡುಗಡೆಗೊಳಿಸಿದರು.
* ಇತರೆಡೆಗಳಲ್ಲಿ ಜರುಗುವ ಹಾಕಿ ಉತ್ಸವದ ಉದ್ಘಾಟನೆಗೆ ಹೋಲಿಸಿದರೆ ಜನಸಂಖ್ಯೆ ಒಂದಷ್ಟು ಕಡಿಮೆ ಎನಿಸಿದರೂ, ಮಡಿಕೇರಿಯ ಮಟ್ಟಿಗೆ ಸೇರಿದ್ದ ಕ್ರೀಡಾಭಿಮಾನಿಗಳ ಸಂಖ್ಯೆ ಸಮಾಧಾನ ಮೂಡಿಸುವಂತಿತ್ತು.
* ಪ್ರದರ್ಶನ ಪಂದ್ಯದ ತೀರ್ಪುಗಾರರಾಗಿ ಕಾಳಿಮಾಡ ಕಿರಣ್, ಬೊಟ್ಟಂಗಡ ಕೌಶಿಕ್, ಅನ್ನಂಬಿರ ಸೋಮಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ ಕಾರ್ಯನಿರ್ವಹಿಸಿದರು.
* ಪಂದ್ಯಾವಳಿ ನಿರ್ದೇಶಕರಾಗಿ (ಟೂರ್ನಮೆಂಟ್ ಡೈರೆಕ್ಟರ್) ಬಡಕಡ ದೀನಾ ಪೂವಯ್ಯ ಹಾಗೂ ತಾಂತ್ರಿಕ ತಂಡದ ಸದಸ್ಯರು ಮುಂದಿನ ಒಂದು ತಿಂಗಳು ಕಾರ್ಯ ನಿಭಾಯಿಸಲಿದ್ದಾರೆ.
* ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡೆಮಿಯ ನಿರ್ದೇಶಕರುಗಳು, ಮುದ್ದಂಡ ಕುಟುಂಬದ ಪ್ರಮುಖರುಗಳಾದ ಪಟ್ಟೆದಾರ ಡಾಲಿ ತಿಮ್ಮಯ್ಯ, ಎಂ.ಬಿ. ದೇವಯ್ಯ, ರಶಿನ್ ಸುಬ್ಬಯ್ಯ, ಡೀನ್ ಬೋಪಣ್ಣ, ಆದ್ಯ ಪೂವಣ್ಣ, ಎಂ.ಎನ್. ಅಶೋಕ್, ಎಂ.ಪಿ. ರಂಜಿತ್, ಎಂ.ಎಲ್. ಚಂಗಪ್ಪ, ಕಿರಣ್ ಪೂಣಚ್ಚ, ಎಂ.ವಿ. ದಿವ್ಯ, ಮತ್ತಿತರರು ಭಾಗಿಗಳಾಗಿದ್ದರು.
ಕುಂಡ್ಯೋಳAಡ ಕುಟುಂಬಕ್ಕೆ ಗೌರವ
ಕಳೆದ ವರ್ಷ ಗಿನ್ನಿಸ್ ದಾಖಲೆಯ ಸಾಧನೆ ಮಾಡಿರುವ ಕುಂಡ್ಯೋಳAಡ ಕುಟುಂಬಸ್ಥರನ್ನು ಕೊಡವ ಹಾಕಿ ಅಕಾಡೆಮಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇಡೀ ಕುಟುಂಬ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದು ಗಮನ ಸೆಳೆಯಿತು.
ಸರ್ಕಲ್ ಇನ್ಸ್ಪೆಕ್ಟರ್... ಲಾಯರ್... ನಟ
ಪ್ರದರ್ಶನ ಪಂದ್ಯದಲ್ಲಿ ಜಿಲ್ಲಾಡಳಿತ ತಂಡದ ಪರವಾಗಿ ಪೊಲೀಸ್ ವೃತ್ತ ನಿರೀಕ್ಷಕರುಗಳಾದ ಐಚಂಡ ಪಿ. ಮೇದಪ್ಪ, ಪೆಮ್ಮಚಂಡ ಅನೂಪ್ ಮಾದಪ್ಪ, ಇನ್ನಿತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಆಟವಾಡಿದರು. ಆಯೋಜಕ ತಂಡ ಮುದ್ದಂಡ ಪರ ಚಿತ್ರ ನಟ ಮುದ್ದಂಡ ಆದ್ಯ ಪೂವಣ್ಣ, ವಕೀಲ ಕನ್ನಂಡ ಅರುಣ್ ಮೈದಾನಕ್ಕಿಳಿದರು.
ಮೈದಾನ ೩
ಬೆಳಿಗ್ಗೆ ೧೧ ಗಂಟೆಗೆ : ಕೊಟ್ರಮಾಡ v/s ತಾಪಂಡ
ಮಧ್ಯಾಹ್ನ ೧೨ಕ್ಕೆ - ಚೆಯ್ಯಂಡಿರ v/s ತಾಣಚ್ಚಿರ
೧ಕ್ಕೆ : ಚೋಕಂಡ v/s ಮೂಕಚಂಡ
೨ಕ್ಕೆ: ಬಡುವಂಡ v/s ಮದ್ರೀರ
೩ಕ್ಕೆ : ನಂಬ್ಯಪAಡ v/s ಕುಮ್ಮಂಡ
ಮೈದಾನ ೧
ಬೆಳಿಗ್ಗೆ ೯ ಗಂಟೆಗೆ : ಅಯ್ಯರಣಿಯಂಡ v/s ಅಡ್ಡಂಡ (ಸೂರ್ಲಬ್ಬಿ)
೧೦ ಗಂಟೆಗೆ : ಬೊಳ್ಳಚೆಟ್ಟೀರ v/s ಗಾಂಡAಗಡ
೧೧ಕ್ಕೆ - ಬೊಳ್ಳಿಮಾಡ v/s ಬೇರೆರ
ಮಧ್ಯಾಹ್ನ ೧ ಗಂಟೆಗೆ ಬೊಳ್ಳರಪಂಡ v/s ಪುಲಿಯಂಡ
೨ಕ್ಕೆ : ಗುಡ್ಡಂಡ v/ sಕುಂಡ್ಯೋಳAಡ
೩ಕ್ಕೆ : ಮುಕ್ಕಾಟಿರ (ಕಡಗದಾಳು) v/s ಚೆಟ್ಟೀರ
ಸಂಜೆ ೪ಕ್ಕೆ : ಕುಕ್ಕೇರ v/s ಮೊಳ್ಳೇರ
ಮೈದಾನ ೨
ಬೆಳಿಗ್ಗೆ ೯ ಕ್ಕೆ : ಮೂವೇರ v/s ಚೆರುವಾಳಂಡ
೧೦ಕ್ಕೆ : ಕಾಂಗೀರ v/s ಪಾಲಚಂಡ
೧೧ ಗಂಟೆಗೆ : ಹಂಚೆಟ್ಟಿರ v/s ಮಾಚಂಗಡ
ಮಧ್ಯಾಹ್ನ ೧೨ಕ್ಕೆ : ಓಡಿಯಂಡ v/s ಮೋರ್ಕಂಡ
೧ಕ್ಕೆ : ಸರ್ಕಂಡ v/s ಉದ್ದಿನಾಡಂಡ
೨ಕ್ಕೆ: ತಡಿಯಂಗಡ v/s ಕನ್ನಿಕಂಡ
೩ಕ್ಕೆ : ಕಳ್ಳೀರ v/s ಬೊಪ್ಪಡ್ತಂಡ
ಸAಜೆ ೪ಕ್ಕೆ : ತಾತಪಂಡ v/s ಮೂಡೇರ