ಮಡಿಕೇರಿ, ಮಾ. ೨೮: ಮಡಿಕೇರಿ ತಾಲೂಕು ಮೀನುಗಾರಿಕೆ ಇಲಾಖೆಯ ವತಿಯಿಂದ ಕೃಷಿ ಹೊಂಡಗಳಲ್ಲಿ ಪಾಲನೆಗಾಗಿ ರೈತರಿಗೆ ೫೦೦ ಸಂಖ್ಯೆಯ ಸಾಮಾನ್ಯ ಗೆಂಡೆ ಮೀನುಮರಿಗಳನ್ನು ಉಚಿತವಾಗಿ ವಿತರಿಸಲಾಗುವುದು.

ಆಸಕ್ತ ಮೀನು ಕೃಷಿಕರು ಸಂಬAಧಿಸಿದ ದಾಖಲಾತಿಗಳನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಸೀಮಿತ ಸಂಖ್ಯೆಯಲ್ಲಿ ಮರಿಗಳನ್ನು ವಿತರಿಸುವ ಕಾರಣ ಮೊದಲು ನೋಂದಾಯಿಸಿಕೊAಡವರಿಗೆ ಆದ್ಯತೆಯ ಮೇಲೆ ಪರಿಗಣಿಸಲಾಗುವುದು.