ಮಡಿಕೇರಿ, ಮಾ. ೨೮: ವರ್ಷಂಪ್ರತಿ ನಡೆಯುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕೇವಲ ಕ್ರೀಡೆಯಲ್ಲ ಜನಾಂಗದ ಹಿರಿಮೆಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಅಸ್ಮಿತೆ ಎಂದು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಬಣ್ಣಿಸಿದರು.

ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮುದ್ದಂಡ ಕುಟುಂಬದ ವತಿಯಿಂದ ಆಯೋಜನೆಗೊಂಡಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಾಕಿ ನಮ್ಮೆ ಕ್ರೀಡೆಗೆ ಸೀಮಿತವಾಗಿಲ್ಲ. ಕೊಡವ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಪಾಂಡAಡ ಕುಟ್ಟಣಿ ಹಾಗೂ ಕಾಶಿ ಸಹೋದರರು ಇಟ್ಟ ದಿಟ್ಟ ಹೆಜ್ಜೆಯಾಗಿದೆ. ೧೯೯೭ರಲ್ಲಿ ೬೦ ಕುಟುಂಬದಿAದ ಆರಂಭಗೊAಡ ಹಾಕಿ ಉತ್ಸವ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ೩೯೬ ಕುಟುಂಬಗಳು ಒಗ್ಗೂಡುವ ಹಂತಕ್ಕೆ ತಲುಪಿರುವುದು ಜನಾಂಗದ ಹಿರಿಮೆಯನ್ನು ಹೆಚ್ಚಿಸಿದೆ. ಈ ಬಾರಿ ವಿಶೇಷವಾಗಿ ಮಹಿಳಾ ಹಾಕಿ ಟೂರ್ನಿ ಆಯೋಜನೆ ಮೂಲಕ ಮತ್ತೊಂದು ಸಾಧನೆಗೆ ಈ ಉತ್ಸವ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಜನಮನ್ನಣೆಗೆ ಹಾಕಿ ನಮ್ಮೆ ಪಾತ್ರವಾಗಿದೆ. ಇದು ಜನಾಂಗಕ್ಕೆ ಸಂದ ಗೌರವ ಎಂದು ಹೆಮ್ಮೆಯ ನುಡಿಗಳನ್ನಾಡಿದರು.

ಹಾಕಿ ನಮ್ಮೆಯಲ್ಲಿ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಕೆಲಸವಾಗುತ್ತಿದೆ. ಬರೋಬ್ಬರಿ ೩೯೬ ಕುಟುಂಬಗಳನ್ನು ಸೇರಿಸುವುದು ಸುಲಭದ ಕೆಲಸವಲ್ಲ. ಮುದ್ದಂಡ ಕುಟುಂಬ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿದೆ. ಈ ಹಾಕಿಹಬ್ಬ ಎಂದಿಗೂ ನಿಲ್ಲಬಾರದು. ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಜನಾಂಗದವರ ಪಾತ್ರ ಮಹತ್ತರವಾಗಿದೆ. ಪ್ರತಿಯೊಬ್ಬರು ಕೈಜೋಡಿಸಿ ಯಶಸ್ವಿಗೆ ಸಹಕರಿಸಬೇಕು. ಪುಟ್ಟ ಜಿಲ್ಲೆ ಕೊಡಗಿನಲ್ಲಿರುವ ಸಣ್ಣ ಸಮುದಾಯವಾದ ಕೊಡವ ಜನಾಂಗದಿAದ ಹಲವು ಮಂದಿ ಕ್ರೀಡಾಕ್ಷೇತ್ರದಲ್ಲಿ ಸಾಧನೆ ತೋರಿದ್ದಾರೆ ಎಂದರು.

ರಾಜ್ಯ ಸರಕಾರ ಕಳೆದ ೨ ವರ್ಷದಿಂದ ರೂ. ೧ ಕೋಟಿ ಅನುದಾನವನ್ನು ಹಾಕಿನಮ್ಮೆಗೆ ನೀಡುತ್ತಿದೆ. ಮುದ್ದಂಡ ಹಾಕಿ ಹಬ್ಬಕ್ಕೂ ಅಗತ್ಯ ಅನುದಾನವನ್ನು ಸರಕಾರದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ,

ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಜನಮನ್ನಣೆಗೆ ಹಾಕಿ ನಮ್ಮೆ ಪಾತ್ರವಾಗಿದೆ. ಇದು ಜನಾಂಗಕ್ಕೆ ಸಂದ ಗೌರವ ಎಂದು ಹೆಮ್ಮೆಯ ನುಡಿಗಳನ್ನಾಡಿದರು.

ಹಾಕಿ ನಮ್ಮೆಯಲ್ಲಿ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಕೆಲಸವಾಗುತ್ತಿದೆ. ಬರೋಬ್ಬರಿ ೩೯೬ ಕುಟುಂಬಗಳನ್ನು ಸೇರಿಸುವುದು ಸುಲಭದ ಕೆಲಸವಲ್ಲ. ಮುದ್ದಂಡ ಕುಟುಂಬ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿದೆ. ಈ ಹಾಕಿಹಬ್ಬ ಎಂದಿಗೂ ನಿಲ್ಲಬಾರದು. ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಜನಾಂಗದವರ ಪಾತ್ರ ಮಹತ್ತರವಾಗಿದೆ. ಪ್ರತಿಯೊಬ್ಬರು ಕೈಜೋಡಿಸಿ ಯಶಸ್ವಿಗೆ ಸಹಕರಿಸಬೇಕು. ಪುಟ್ಟ ಜಿಲ್ಲೆ ಕೊಡಗಿನಲ್ಲಿರುವ ಸಣ್ಣ ಸಮುದಾಯವಾದ ಕೊಡವ ಜನಾಂಗದಿAದ ಹಲವು ಮಂದಿ ಕ್ರೀಡಾಕ್ಷೇತ್ರದಲ್ಲಿ ಸಾಧನೆ ತೋರಿದ್ದಾರೆ ಎಂದರು.

ರಾಜ್ಯ ಸರಕಾರ ಕಳೆದ ೨ ವರ್ಷದಿಂದ ರೂ. ೧ ಕೋಟಿ ಅನುದಾನವನ್ನು ಹಾಕಿನಮ್ಮೆಗೆ ನೀಡುತ್ತಿದೆ. ಮುದ್ದಂಡ ಹಾಕಿ ಹಬ್ಬಕ್ಕೂ ಅಗತ್ಯ ಅನುದಾನವನ್ನು ಸರಕಾರದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ,

ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವ ಕುಮಾರ್, ಮುದ್ದಂಡ ಕುಟುಂಬ ಅಧ್ಯಕ್ಷ ಎಂ.ಬಿ. ದೇವಯ್ಯ, ಒಲಂಪಿಯನ್ ಅಂಜಪರವAಡ ಬಿ. ಸುಬ್ಬಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಕೊಡಗು ವಿಶ್ವವಿದ್ಯಾನಿಲಯ ಉಪಕುಲಪತಿ ಪ್ರೊ. ಅಶೋಕ್ ಸಂಗಪ್ಪ ಅಲೂರ, ರಿಜಿಸ್ಟಾçರ್ ಸುರೇಶ್, ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಮೇ. ರಾಘವ ಹಾಜರಿದ್ದರು.

ಎಂ.ಬಿ. ದೇವಯ್ಯ ಸ್ವಾಗತಿಸಿ, ಮಿನ್ನಂಡ ಚಿಣ್ಣಮ್ಮ ಪ್ರಾರ್ಥಿಸಿ, ಚೋಕಿರ ಅನಿತಾ ದೇವಯ್ಯ, ಮಾದೇಟಿರ ಬೆಳ್ಯಪ್ಪ ನಿರೂಪಿಸಿ, ಕುಲ್ಲೇಟಿರ ಅರುಣ್ ಬೇಬ ವಂದಿಸಿದರು.