ಮಡಿಕೇರಿ, ಮಾ. ೨೯: ವಿಶ್ವ ಶಿಟಾರಿಯೋ ಕರಾಟೆಯ ಫೆಡರೇಷನ್ ನಿರ್ದೇಶಕ ಹಾಗೂ ಅಖಿಲ ಭಾರತ ಶಿಟಾರಿಯೋ ಕರಾಟೆ ಯೂನಿಯನ್ ಅಧ್ಯಕ್ಷರಾಗಿರುವ ಜಿಲ್ಲೆಯ ಹೆಮ್ಮೆಯ ಕರಾಟೆ ಪಟು, ಮಾಜಿ ಎಂ.ಎಲ್.ಸಿ ಸಿ.ಎಸ್. ಅರುಣ್ ಮಾಚಯ್ಯ ಅವರಿಗೆ ಪ್ರತಿಷ್ಠಿತ ೯ನೇ ಡಾನ್ ಬ್ಲಾö್ಯಕ್‌ಬೆಲ್ಟ್ ಗೌರವ ದೊರೆತಿದೆ.
ದೇಶದ ಕರಾಟೆ ಇತಿಹಾಸದಲ್ಲಿ ಈ ಪ್ರಶಸ್ತಿಗೆ ಭಾಜನರಾದವರಲ್ಲಿ ಭಾರತದಲ್ಲಿ ಇವರು ಮೊದಲಿಗರಾಗಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ಭಾರತೀಯ ಕರಾಟೆ ಸಂಸ್ಥೆ ವತಿಯಿಂದ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆ.ಐ.ಓ. ಅಧ್ಯಕ್ಷರಾದ ಹನ್ಸಿ ಭರತ್ ಶರ್ಮಾ ಅವರಿಂದ ಅರುಣ್ ಮಾಚಯ್ಯ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.