ಶನಿವಾರಸಂತೆ, ಮಾ. ೨೯: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಶ್ರೀರಾಮೋತ್ಸವ ತಾ.೩೦ ರಿಂದ ಏ.೭ ರವರೆಗೆ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ ೭-೩೦ ರಿಂದ ೧೦-೩೦ ರವರೆಗೆ ಹಾಗೂ ಸಂಜೆ ೬-೩೦ ರಿಂದ ರಾತ್ರಿ ೮-೩೦ ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ತಾ.೩೦ ರಂದು ಯುಗಾದಿ ಹಬ್ಬದ ಪ್ರಯುಕ್ತ ಬೆಳಿಗ್ಗೆ ೭-೩೦ ರಿಂದ ೧೦ ಗಂಟೆಯವರೆಗೆ ಶ್ರೀರಾಮನಿಗೆ ಫಲಪಂಚಾಮೃತ ಅಭಿಷೇಕ, ಪೂಜೆ, ಅರ್ಚನೆ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗವಿದೆ. ಸಂಜೆ ಹೊಸ ವರ್ಷದ ಪಂಚಾAಗ ಶ್ರವಣ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗವಿದೆ.

ತಾ.೩೧ ರಂದು ಶ್ರೀರಾಮನಿಗೆ ಹರಿದ್ರ ಅಲಂಕಾರ-ವಿಷ್ಣು ಸಹಸ್ರ ನಾಮ, ಏ.೧ ರಂದು ಕುಂಕುಮ ಅಲಂಕಾರ-ಲಲಿತಾ ಸಹಸ್ರನಾಮ, ಏ.೨ ರಂದು ಪುಷ್ಪ ಅಲಂಕಾರ-ವಿಷ್ಣು ಸಹಸ್ರ ನಾಮ, ಏ.೩ ರಂದು ವಸ್ತç ಅಲಂಕಾರ -ರಾಮ ಭಜನೆ, ಏ.೪ ರಂದು ತುಳಸಿ ಅಲಂಕಾ-ಲಲಿತಾ ಸಹಸ್ರ ನಾಮ ಪಾರಾಯಣ, ಏ.೫ ರಂದು ಹೂವಿನ ಅಲಂಕಾರ ಪೂಜೆ.

ಏ.೬ ರಂದು ಶ್ರೀರಾಮ ನವಮಿ ಪ್ರಯುಕ್ತ ಶ್ರೀರಾಮನಿಗೆ ಫಲಪಂಚಾಮೃತ ಅಭಿಷೇಕ, ಪೂಜೆ, ಅಲಂಕಾರ, ವಿಷ್ಣು ಸಹಸ್ರ ನಾಮ, ರಾಮತಾರಕ ಹೋಮ, ಪೂರ್ಣಾಹುತಿ ಇದೆ.ಮಧ್ಯಾಹ್ನ೧೨ ಗಂಟೆಗೆ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ, ನಂತರ ಅನ್ನ ಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ ೩ ಗಂಟೆಗೆ ಸೀತಾ, ಲಕ್ಷö್ಮಣ, ಆಂಜನೇಯ ಸಹಿತ ಶ್ರೀರಾಮ ದೇವರ ಉತ್ಸವ ÀÄÆರ್ತಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಾದ್ಯಗೋಷ್ಠಿಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು.ಸಂಜೆ ೭ ಗಂಟೆಗೆ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಂತರ ಅನ್ನ ಸಂತರ್ಪಣೆ ನಡೆಯಲಿದೆ.

ಶ್ರೀರಾಮ ಮಂದಿರದಲ್ಲಿ ಏ.೭ ರಂದು ಬೆಳಿಗ್ಗೆ ಹನುಮನಿಗೆ ಫಲಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಹನುಮಾನ್ ಚಾಲೀಸ್ ಪಾರಾಯಣ, ೧೦೮ ಫಲಹೋಮ, ಪೂರ್ಣಾಹುತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಸಂಜೆ ೭ ಗಂಟೆಗೆ ಸುಂದರಕಾAಡ ಗ್ರಂಥ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.