ವೀರಾಜಪೇಟೆ, ಮಾ. ೨೯: ಶ್ರೀ ಮುತ್ತಪ್ಪನ್ ದೈವದ ವಿವಿಧ ಪ್ರಕಾರಗಳ ತೆರೆ ಮಹೋತ್ಸವ ಏಪ್ರಿಲ್ ೧ ಮತ್ತು ೨ ರಂದು ನಡೆಯಲಿದೆ.
ಬಿಟ್ಟಂಗಾಲ ಗ್ರಾಮದ ಕಂಪೆನಿಮೊಟ್ಟೆಯ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಸ್ಥಾನ ೩೩ನೇ ವರ್ಷದ ವಾರ್ಷಿಕ ತೆರೆ ಮಹೋತ್ಸವ ಏಪ್ರಿಲ್ ೧ ಮತ್ತು ೨ ರಂದು ನಡೆಯಲಿದೆ. ಏ. ೧ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೭ ಗಂಟೆಗೆ ಧ್ವಜಾರೋಹಣ ಬೆಳಿಗ್ಗೆ ೯ ಗಂಟೆಗೆ ಕಣ್ಣಂಬಾಡಿ ಅಮ್ಮ ಪೂಜೆ, ರಾತ್ರಿ ೮ ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, ರಾತ್ರಿ ೯ ಗುಳಿಗ ತೋಟ್ಟಂ ತೆರೆ, ರಾತ್ರಿ ೯.೩೦ಕ್ಕೆ ಅನ್ನಸಂತರ್ಪಣೆ, ರಾತ್ರಿ ೧೦ ಗಂಟೆಗೆ ಬಸುರಿಮಾಲ ದೇವರ ತೋಟ್ಟಂ ತೆರೆ ನಡೆಯಲಿದೆ.
ಏ. ೨ ರಂದು ಬೆಳಿಗ್ಗೆ ೪ ಗಂಟೆಗೆ ಗುಳಿಗನ ತೆರೆ, ಬೆಳಿಗ್ಗೆ ೭ ಗಂಟೆಗೆ ಮುತ್ತಪ್ಪನ್ ತಿರುವಪ್ಪನ್ ವೆಳ್ಳಾಟಂ ಬೆಳಿಗ್ಗೆ ೯ ಗಂಟೆಗೆ ಬಸುರಿಮಾಲ ತೆರೆ ಮಧ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.