ಮಡಿಕೇರಿ, ಮಾ. ೨೯: ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಗೋಣಿಕೊಪ್ಪದಲ್ಲಿ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯ ಕೋಟ್ವ ಕಾಯ್ದೆ ಉಲ್ಲಂಘನೆ ಸಂಬAಧ ಅಂಗಡಿ, ಬಾರ್ ಹಾಗೂ ಹೋಟೆಲ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಲಾಯಿತು.
ಆರೋಗ್ಯ ಶಿಕ್ಷಣವನ್ನು ನೀಡಿ ಸೆಕ್ಷನ್ ೪ ಅಡಿಯಲ್ಲಿ ೧೫ ಪ್ರಕರಣಕ್ಕೆ ೧೯೫೦ ರೂ. ದಂಡದ ಮೊತ್ತವನ್ನು ಜಿಲ್ಲಾಧಿಕಾರಿಯವರ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಂಟಿ ಖಾತೆಗೆ ಜಮಾ ಮಾಡಲಾಯಿತು. ಆರೋಗ್ಯ ಅಧಿಕಾರಿ ಶಶಿಕಾಂತ, ಪೊಲೀಸ್ ಇಲಾಖೆಯವರು, ಜಿಲ್ಲಾ ತಂಬಾಕು ಕಾರ್ಯಕರ್ತ ಮಂಜುನಾಥ್ ಭಾಗವಹಿಸಿದ್ದರು.