ಶನಿವಾರಸಂತೆ, ಮಾ. ೨೯: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೋಣೀಗನಹಳ್ಳಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ತಾಯಿಯವರ ೫೩ನೇ ವರ್ಷದ ಪೂಜಾ ಮಹೋತ್ಸವ ತಾ. ೩೧ ರಂದು ಹಾಗೂ ಏಪ್ರಿಲ್ ೧ ರಂದು ನಡೆಯಲಿದೆ.

ತಾ. ೩೧ ರಂದು ರಾತ್ರಿ ೮ ಗಂಟೆಯಿAದ ೧೦ ಗಂಟೆಯವರೆಗೆ ದೇವಿ ಸಾನಿಧ್ಯದಲ್ಲಿ ಹೋಮ, ಹವನ, ಮಹಾಮಂಗಳಾರತಿ ಹಾಗೂ ತೀರ್ಥ-ಪ್ರಸಾದ ವಿನಿಯೋಗ ಇರಲಿದೆ. ಏ. ೧ ರಂದು ಬೆಳಿಗ್ಗೆ ೪ ಗಂಟೆಗೆ ಗಂಗಾಪೂಜೆ, ೫ ಗಂಟೆಗೆ ಗಂಗಾಭಿಷೇಕ, ಕ್ಷೀರಾಭಿಷೇಕ, ಕುಂಕುಮಾಭಿಷೇಕ ಹಾಗೂ ಅರ್ಚನೆ, ೮ ಗಂಟೆಗೆ ಊರಿನ ಮುಖ್ಯ ಬೀದಿಗಳಲ್ಲಿ ಕೀಲುಕುದುರೆ ಕುಣಿತ, ವೀರಗಾಸೆ ಕುಣಿತ, ನಗಾರಿ ವಾದ್ಯ ಹಾಗೂ ಕಲಶದೊಂದಿಗೆ ದೇವಿಯ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗುವುದು. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಮಧ್ಯಾಹ್ನ ೧೨ ಗಂಟೆಗೆ ದೇವಿಯ ಸಾನಿಧ್ಯದಲ್ಲಿ ಮಡ್ಲಕ್ಕಿ ಅರ್ಪಣಾ ಪೂಜಾ ಕಾರ್ಯಕ್ರಮ ನಡೆಯುತ್ತದೆ. ೧ ಗಂಟೆಗೆ ಹಣ್ಣುಕಾಯಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ೪ ಗಂಟೆಗೆ ದೇವಿಯ ಸಾನಿಧ್ಯದಲ್ಲಿ ಕೆಂಡೋತ್ಸವ, ೬ ಗಂಟೆಗೆ ಮಹಾಮಂಗಳಾರತಿ, ದೀಪೋತ್ಸವ ಪೂಜಾ ಕಾರ್ಯಕ್ರಮ ನಡೆದು ತೀರ್ಥ-ಪ್ರಸಾದ ವಿನಿಯೋಗವಿರುತ್ತದೆ. ಏ. ೨ ರಂದು ರಾತ್ರಿ ೮ ಗಂಟೆಗೆ ಕೋಣಿಗನಹಳ್ಳಿ ಗ್ರಾಮದಲ್ಲಿ “ಶ್ರೀ ಹರಿಭಕ್ತ ಮಹಾಂದದಾತ ಅಥವಾ ಲಕ್ಷಿö್ಮÃ ಶನಿದೇವರ ಪಂಥ’’ ಎಂಬ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.