ಮಡಿಕೇರಿ, ಮಾ. ೨೯: ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಕೆ.ಎಸ್. ಸುಂದರ್ ರಾಜ್ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಕಳೆದ ೨ ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಂದರ್ ರಾಜ್ ಅವರು ಇದೀಗ ಮೈಸೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆಗಿ ನಿಯುಕ್ತಿಗೊಂಡಿದ್ದಾರೆ.

ಕೊಡಗಿನಲ್ಲಿ ಕರ್ತವ್ಯ ಸಲ್ಲಿಸಿರುವುದರ ಕುರಿತು ‘ಶಕ್ತಿ’ಗೆ ಪ್ರತಿಕ್ರಿಯಿಸಿದ ಸುಂದರ್ ರಾಜ್ ಅವರು, ೨೦೦೧ರಲ್ಲಿ ಕ್ರೆöÊಂ ವಿಭಾಗದ ಇನ್ಸ್ಪೆಕ್ಟರ್ ಆಗಿ ನಿಯೋಜನೆಗೊಂಡು ಅ ಬಳಿಕ ೨೦೦೨-೦೬ರಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಆಗಿ, ೨೦೧೭-೧೯ರ ತನಕ ಮಡಿಕೇರಿ ಡಿವೈಎಸ್‌ಪಿ ಆಗಿ, ೨೦೨೩ ರಿಂದ ೨೫ರ ತನಕ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹೀಗೆ ವಿವಿಧೆಡೆಗಳಲ್ಲಿ ಒಂದು ಜಿಲ್ಲೆಯಲ್ಲಿ ಕೆಲಸ ಮಾಡುವ ಸೌಭಾಗ್ಯ ದೊರೆತಿದೆ. ಸಹಜವಾಗಿ ಕೊಡಗು ಬಿಟ್ಟು ಹೋಗಲು ಬೇಸರವಿದೆ. ಇಲ್ಲಿನ ಜನ, ಸಂಸ್ಕೃತಿಯೊAದಿಗೆ ಬೆರೆತಿದ್ದೇನೆ. ಜನರಲ್ಲಿರುವ ಶಿಸ್ತು ಅಳವಡಿಸಿಕೊಂಡಿದ್ದೇನೆ. ಕೊಡಗು ನನ್ನ ಕರ್ಮಭೂಮಿಯಾಗಿದ್ದು, ಇಲ್ಲಿ ಮಾಡಿದ ಕೆಲಸ ಎಂದಿಗೂ ಮರೆಯಲಾಗದು. ಜಿಲ್ಲೆಯ ಜನರ ಸಹಕಾರವೂ ದೊರೆತ ಹಿನ್ನೆಲೆ ಕೆಲಸ ಮಾಡಲು ಸುಲಭ ಸಾಧ್ಯವಾಯಿತು ಎಂದು ಸ್ಮರಿಸಿದರು.