ಮಡಿಕೇರಿ, ಮಾ. ೩೧: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಗೌಡ ಜನಾಂಗ ನಡುವೆ ೮ನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿ ಮೇ.೧೦ ರಂದು ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಇಟ್ಟಣಿಕೆ ನವನೀತ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ೭೦ ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ ೯೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸುಮಾರು ೧೫ ಲಕ್ಷ ವೆಚ್ಚದಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಏ.೨೫ ತಂಡಗಳ ನೋಂದಾಣಿಗೆ ಕೊನೆ ದಿನವಾಗಿದ್ದು, ಆಸಕ್ತರು ೯೫೯೧೭೧೧೦೩೨, ೯೬೧೧೫೦೨೨೭೦ ಸಂಖ್ಯೆಯನ್ನು ಸಂಪರ್ಕಿಸಿ ತಂಡಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಪ್ರಥಮ ಸ್ಥಾನ ಪಡೆದತಂಡಕ್ಕೆ ೧ ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೫೦ ಸಾವಿರ ಹಾಗೂ ತೃತೀಯ, ಚತುರ್ಥ ಸ್ಥಾನ ಪಡೆದ ತಂಡಕ್ಕೆ ತಲಾ ೧೫ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಜೊತೆಗೆ ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಗೌಡ ಜನಾಂಗದ ೧೬ ವಯಸ್ಸಿನೊಳಗಿನ ಆಟಗಾರರಿಗೆ ಅಂಡರ್ ೧೬ ಫುಟ್ಬಾಲ್ ಪಂದ್ಯಾಟ ಆಯೋಜಿಸಲಾಗಿದೆ. ಕ್ರೀಡಾಕೂಟದ ಅಂಗವಾಗಿ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಇದು ಜನಾಂಗ ಬಾಂಧವರಿಗೆ ಸೀಮಿತವಾಗಿಲ್ಲ. ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಬಹುದು. ಆಸಕ್ತರು ೯೪೮೩೧೧೩೯೫೯, ೭೨೦೪೮೬೪೩೧೩ ಸಂಖ್ಯೆಯನ್ನು ಸಂಪರ್ಕಿಸುವAತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ಸುಜಯ್, ಸಹಕಾರ್ಯದರ್ಶಿ ಕೊಂಪುಳೀರ ಪುನೀತ್, ಸಹ ಖಂಜಾAಚಿ ಬೊಳ್ಳೂರು ರೋಷನ್, ಸದಸ್ಯರಾದ ಕೊಂಪುಳೀರ ಕೀರ್ತಿ ಉಪಸ್ಥಿತರಿದ್ದರು.