ಸೋಮವಾರಪೇಟೆ, ಮಾ.೩೧: ಇಲ್ಲಿನ ಡಾಲ್ಪೀನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏ. ೨೦ ರಿಂದ ಮೇ ೨೦ರವರೆಗೆ ಸ್ಥಳೀಯ ಜೂನಿಯರ್ ಕಾಲೇಜು ಆವರಣದಲ್ಲಿರುವ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಗೆ ಹಾಕಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಎಂ.ಇ. ಮಹೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. ೨೦ರಿಂದ ಮೇ ೨೦ರವರೆಗೆ ಪ್ರತಿ ದಿನ ಬೆಳಿಗ್ಗೆ ೬.೩೦ರಿಂದ ೮.೩೦ರವರೆಗೆ ತರಬೇತಿ ನೀಡಲಾಗುವುದು ಎಂದರು.

ರಾಷ್ಟç ಮಟ್ಟದ ಹಾಕಿ ತರಬೇತುಗಾರರಾಗಿರುವ ಜನಾರ್ಧನ್, ದೇವದಾಸ್, ಮಿಲನ್ ಬಾಬಿ ಅವರುಗಳು ಪ್ರತಿದಿನ ಮಕ್ಕಳಿಗೆ ಹಾಕಿ ಕ್ರೀಡೆಯ ಬಗ್ಗೆ ತರಬೇತಿ ನೀಡಲಿದ್ದಾರೆ. ಇದರೊಂದಿಗೆ ಅಂತರರಾಷ್ಟಿçÃಯ ಹಾಕಿ ಆಟಗಾರರಾದ ಎಸ್.ವಿ. ಸುನಿಲ್, ವಿಕ್ರಂಕಾAತ್ ಅವರುಗಳು ಶಿಬಿರಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಹಾಕಿ ಕ್ರೀಡೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ಪ್ರತಿ ದಿನ ವಿದ್ಯಾರ್ಥಿಗಳಿಗೆ ಕ್ಲಬ್ ಮೂಲಕ ಉಚಿತವಾಗಿ ಬೆಳಿಗ್ಗೆ ಹಾಲು, ಮೊಟ್ಟೆ, ಬ್ರೆಡ್‌ಗಳನ್ನು ವಿತರಿಸಲಾಗುವುದು. ಬಾಲಕ-ಬಾಲಕಿಯರು ಶಿಬಿರದಲ್ಲಿ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ನಿಗದಿಪಡಿಸಿಲ್ಲ. ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ: ೭೦೨೨೩೯೬೭೮೩, ೯೫೩೫೩೯೩೦೫೦, ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಕ್ಲಬ್‌ನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಜಂಟಿ ಕಾರ್ಯದರ್ಶಿ ಬಿ.ಆರ್. ಮಹೇಶ್, ಖಜಾಂಚಿ ಕೆ.ಜೆ. ಗಿರೀಶ್, ನಿರ್ದೇಶಕ ಎಲ್.ಜಿ. ಮಿಲನ್, ಗೌರವಾಧ್ಯಕ್ಷ ಹೆಚ್.ಎನ್. ಅಶೋಕ್, ಕೆ.ಎಸ್. ಪ್ರಕಾಶ್ ಅವರುಗಳು ಉಪಸ್ಥಿತರಿದ್ದರು.